ಡಾ. ಡಿ.ಎಂ. ಮಣ್ಣೂರ ನಿಧನ
ಡಾ. ಡಿ.ಎಂ. ಮಣ್ಣೂರ ನಿಧನ
ಕಲಬುರ್ಗಿ: ಕೃಷಿ ಸಂಶೋಧನಾ ಕೇಂದ್ರ, ಕಲಬುರ್ಗಿಯ ಮಾಜಿ ಯೋಜನಾ ನಿರ್ದೇಶಕರಾಗಿದ್ದ ಹಾಗೂ ಸತ್ಯಕಾಮ ಪತ್ರಿಕೆಯ ಸಂಪಾದಕರಾಗಿದ್ದ ದಿ. ಪಿ.ಎಂ. ಮಣ್ಣೂರ ಅವರ ಸಹೋದರರಾದ ಡಾ. ಡಿ.ಎಂ. ಮಣ್ಣೂರ ಅವರು ಮಂಗಳವಾರ ಬೆಳಿಗ್ಗೆ 11.45ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದ ಅವರು ಸಂಶೋಧನೆ ಹಾಗೂ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ನಿಧನಕ್ಕೆ ಕೃಷಿ ವಲಯದ ಗಣ್ಯರು, ಸಹೋದ್ಯೋಗಿಗಳು ಹಾಗೂ ರೈತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಓರ್ವ ಪುತ್ರ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಮತ್ತೋರ್ವ ಪುತ್ರ ಬಿಜಾಪುರ ಜಿಲ್ಲೆಯಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅವರ ಅಂತ್ಯಕ್ರಿಯೆ 29ರಂದು ಕೆರೆಬೋಸಗಾ–ಆಳಂದ ರಸ್ತೆ ಸಮೀಪದ ಸ್ವಂತ ಭೂಮಿಯಲ್ಲಿ ನೆರವೇರಲಿದೆ.
ಅಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 12.30ರವರೆಗೆ, ಸ್ವಗೃಹ ಕುಂವೆಪು ನಗರದಲ್ಲಿ, ಏಷ್ಯನ್ ಬ್ಯುಸಿನೆಸ್ ಹಿಂಭಾಗ, ಕಲಬುರ್ಗಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
