ತ್ಯಾಗ ಬಲಿದಾನ ನೆನಪಿಸುವ ಕೃತಿ "ಅಗ್ನಿಚೆಂಡು "ಪ್ರೊ.ಶೋಭಾದೇವಿ ಚೆಕ್ಕಿ

ತ್ಯಾಗ ಬಲಿದಾನ ನೆನಪಿಸುವ ಕೃತಿ "ಅಗ್ನಿಚೆಂಡು "ಪ್ರೊ.ಶೋಭಾದೇವಿ ಚೆಕ್ಕಿ

ಯೋಧರ ತ್ಯಾಗ ಬಲಿದಾನ ನೆನಪಿಸುವ ಕೃತಿ "ಅಗ್ನಿಚೆಂಡು "ಪ್ರೊ.ಶೋಭಾದೇವಿ ಚೆಕ್ಕಿ

ಕಲಬುರಗಿ: ವೀರಯೋಧರ ತ್ಯಾಗ ಬಲಿದಾನವನ್ನು ನೆನಪಿಸಿ ,ದೇಶಪ್ರೇಮವನ್ನು ಹೆಚ್ಚಿಸುವ ಕೃತಿ ಅಗ್ನಿಚೆಂಡು , ಎಂದು .ಶೋಭಾದೇವಿ ಚೆಕ್ಕಿ ಅಭಿಮತ ವ್ಯಕ್ತಪಡಿಸಿದರು.

ಇಂದು ಕಲಬುರಗಿ ನಗರದ ಚೈತನ್ಯಮಯಿ ಆರ್ಟ ಗ್ಯಾಲರಿಯಲ್ಲಿ ,ಕೊಪ್ಪಳ ಜಿಲ್ಲೆಯ ಮುಧೋಳ ತಾಲೂಕಿನ ಯಲಬುರ್ಗಾ ಗ್ರಾಮದ ಯಶಸ್ವಿ ಸಂಗೀತ ಸಾಹಿತ್ಯ ಸಂಸ್ಥೆಯವರು ಆಯೋಜಿಸಿದ ಗುರುವಂದನಾ ಕಾರ್ಯಕ್ರಮದಲ್ಲಿ ಅನ್ನಪೂರ್ಣಾ ಮಹೇಶ ಮನ್ನಾಪುರ ಅವರು ರಚಿಸಿದ "ಅಗ್ನಿಚೆಂಡು" ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ವೀರಯೋಧರ ತ್ಯಾಗ ಬಲಿದಾನವನ್ನು ನೆನಪಿಸುತ್ತ, ದೇಶಪ್ರೇಮವನ್ನು ಹೆಚ್ಚಿಸುವ 84 ಕವನಗಳು ಈ ಕೃತಿಯಲ್ಲಿದ್ದು ಇದೊಂದು ಅಪರೂಪದ ಕವನ ಸಂಕಲನವಾಗಿದೆ ಎಂದರು. 

ಚಿತ್ರ ಕಲಾವಿದ ಡಾ.ಎ.ಎಸ್ ಪಾಟೀಲ, ಸಂಗೀತ ಕಲಾವಿದೆ ಪ್ರೊ.ಪಾರ್ವತಿದೇವಿ ಹೊಂಬಾಳ ತಮ್ಮ ವೃತ್ತಿ ಬದುಕಿನ ಅನುಭವಗಳನ್ನುಹಂಚಿಕೊಂಡರು.

ಅಮರಪ್ರೀಯ ಹಿರೇಮಠ,ವಿಶ್ವನಾಥ ಮಂಗಲಗಿ,ಬಸವರಾಜ ಕಾಮಾಜಿ,ಪ್ರೊ.ಇಂದಿರಾ ಶೆಟಕಾರ,ಪ್ರೊ. ರೇಣುಕಾ ಕಲಕೇರಿ, ಪ್ರೊ. ಶ್ರೀದೇವಿ ಹರವಾಳ, ಶಶಿಕಲಾ ಪುರವಂತ,ಗೀತಾ ಹರವಾಳ ಪ್ರೊ.ಎ.ಎಸ್ ಪಾಟೀಲರನ್ನು ಗೌರವಿಸಿ ಗುರುವಂದನೆಯನ್ನು ಸಲ್ಲಿಸಲಾಯಿತು.ಅನ್ನಪೂರ್ಣ ಮನ್ನಾಪುರ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.ವಿಶ್ವನಾಥ ಮಂಗಲಗಿ ಪ್ರಾರ್ಥಿಸಿದರು.ಡಾ.ಸುಜಾತಾ ಪಾಟೀಲ ನಿರೂಪಿಸಿ ವಂದಿಸಿದರು.ಕಾರ್ಯಕ್ರಮದಲ್ಲಿ ಶಾಂತಾ ಧಾರವಾಡ,ವಿದ್ಯಾ ತುಪ್ಪದ್,ಉಷಾ ಕರ್ಪೂರ,ದೀನೇಶ ಪಾಟೀಲ,ಶ್ರೀಮತಿ ಶ್ರದ್ಧಾ ನಿಗ್ಗುಡಗಿ ಇದ್ದರು ಇದ್ದರು.