ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನ, 37 ಜನರಿಗೆ ಮೊದಲ ಹಂತದಲ್ಲಿ ಶಸ್ತ್ರ ಚಿಕಿತ್ಸೆ ಯಶಸ್ವಿ ; ಅರುಣಕುಮಾರ ಪಾಟೀಲ.

ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನ,  37 ಜನರಿಗೆ ಮೊದಲ ಹಂತದಲ್ಲಿ ಶಸ್ತ್ರ ಚಿಕಿತ್ಸೆ ಯಶಸ್ವಿ ; ಅರುಣಕುಮಾರ ಪಾಟೀಲ.

ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನ, 37 ಜನರಿಗೆ ಮೊದಲ ಹಂತದಲ್ಲಿ ಶಸ್ತ್ರ ಚಿಕಿತ್ಸೆ ಯಶಸ್ವಿ ; ಅರುಣಕುಮಾರ ಪಾಟೀಲ.

ಕಲಬುರಗಿ ; ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ 47ನೇ ಜನ್ಮದಿನ ನಿಮಿತ್ಯ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡ ಮೊದಲನೇ ಹಂತದಲ್ಲಿ 37 ಜನರಿಗೆ ಹೆಚ್ಕೆಇ ಶಿಕ್ಷಣ ಮಂಡಳಿ ಸಹಯೋಗದಲ್ಲಿ ಬಸವೇಶ್ವರ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೇರವೇರಲಾಯಿತು ಎಂದು ಕೆಕೆಆರ್ಟಿಸಿ ಅಧ್ಯಕ್ಷ ಹಾಗೂ ಹೆಚ್ಕೆಇ ಶಿಕ್ಷಣ ಮಂಡಳಿ ನಿರ್ದೇಶಕರಾದ ಅರುಣಕುಮಾರ ಎಂ. ವೈ.ಪಾಟೀಲ ಹೇಳಿದರು.

ಇತ್ತೀಚೆಗೆ ಅಫಜಲಪುರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನ ಅಂಗವಾಗಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರ ಜರುಗಿದ ಹಿನ್ನಲೆ ಒಟ್ಟು 426 ಸಾರ್ವಜನಿಕರು ತಪಾಸಣೆ ಮಾಡಿಸಿದ್ದು, 116 ಜನರಿಗೆ ಶಸ್ತ್ರ ಚಿಕೆತ್ಸೆ ಅವಶ್ಯಕತೆವಿದೆ ಎಂದು ವೈದ್ಯರು ಹೇಳಿದರು. ವೈದ್ಯರ ಸಲಹೆ ಮೇರೆಗೆ 3 ಹಂತದಲ್ಲಿ ಶಸ್ತ್ರ ಚಿಕಿತ್ಸೆ ನೀಡಲು ಬಸವೇಶ್ವರ ಆಸ್ಪತ್ರೆಯ ವೈದ್ಯರು ನಿರ್ಧಾರ ಮಾಡಿದ್ದಾರೆ ಎಂದು ಪಾಟೀಲ ಮಾಹಿತಿ ನೀಡಿದರು. 

ಮೊದಲನೆಯ ಹಂತದ ಶಸ್ತ್ರಚಿಕಿತ್ಸೆ ಇಂದು ಸುಮಾರು 37 ಜನರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೇರನೇರಿಸಿದ ನುರಿತ ವೈದ್ಯರ ತಂಡಕ್ಕೆ ಅಭಿನಂದನೆಗಳು ತಿಳಿಸಿದರು. ಇನ್ನೂ ಎರಡು ಹಂತದಲ್ಲಿ ಇನ್ನುಳಿದವರಿಗೂ ಆದಷ್ಟು ಬೇಗ ಶಸ್ತ್ರಚಿಕಿತ್ಸೆ ಮೂಲಕ ಅವರ ಸುರಕ್ಷಿತವಾಗಿ ತಮ್ಮನೆಗೆ ತೆರಳುವ ಎಲ್ಲಾ ವ್ಯವಸ್ಥೆ ಶ್ರೀ ಬಸವೇಶ್ವರ ಆಸ್ಪತ್ರೆಯ ವತಿಯಿಂದ ನೇರವೇರಿಸಲಾಗುವುದು ಎಂದು ಅರುಣಕುಮಾರ ಪಾಟೀಲ ತಿಳಿಸಿದರು. 

 ಆಡಳಿತ ಮಂಡಳಿಯ ಸದಸ್ಯರಾದ ಡಾ. ಕಿರಣ್ ದೇಶಮುಖ, ಡಾ ಶರಣಬಸಪ್ಪ ಹರವಾಳ, ನಾಗಣ್ಣ ಘಂಟಿ, ಅನಿಲ್ ಮಾರಗೊಳ, ಸಾಯಿನಾಥ ಪಾಟೀಲ, ಡಾ ಗುರು ಪಾಟೀಲ ನೇತ್ರಾ ವಿಭಾಗದ ಮುಖ್ಯಸ್ಥ ಡಾ ಸುಮಿತ್ ದೇಶಪಾಂಡೆ, ಶ್ರೀಮತಿ ನಾಗವೇಣಿ ಗುಬ್ಬೇವಾಡ ಎಂ.ಆರ್.ಎA.ಸಿ ಶರಣಗೌಡ ಪಾಟೀಲ, ಡಾ. ಮಲ್ಲಿಕಾರ್ಜುನ ತೆಗನೂರ, ಯುವ ಕಾಂಗ್ರೆಸ್ ಅಧ್ಯಕ್ಷ ಅಣ್ಣವೀರ ಮಠಪತಿ, ಪ್ರವೀಣ್ ಕಲ್ಲೂರ ಉಪಸ್ಥಿತರಿದ್ದರು

ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಅಂಗವಾಗಿ ಸಮಾಜಮುಖಿ ಕಾರ್ಯ ಮಾಡುವ ಮೂಲಕ ನೂರಾರು ಬಡ ಜನರಿಗೆ ಬೆಳಕಾಗುವ ಮಹತ್ವದ ಕಾರ್ಯ ಅರುಣಕುಮಾರ ಪಾಟೀಲ ಮಾಡಿದ್ದಾರೆ. ಮುಂದೆಯೂ ಹಿಗೇ ಅವರ ಬಡ ಜನರ ಸೇವೆ ಅವರ ನೇತೃತ್ವದಲ್ಲಿ ನಡೆಯಲಿ ಎಂದು ಅವರು ಮಾಡುತ್ತಿರುವ ಕಾರ್ಯ ಶ್ಲಾಘನೀಯ.

ರಾಜಾ ಭೀಮಳ್ಳಿ ಉಪಾಧ್ಯಕ್ಷರು, ಹೆಚ್ಕೆಇ ಶಿಕ್ಷಣ ಮಂಡಳಿ, ಕಲಬುರಗಿ.