ಅದ್ಧೂರಿಯಾಗಿ ಜರುಗಿದ ಹಿಂದೂ ಸಮ್ಮೇಳನ ಸಹೋದರತ್ವ ಭಾವನೆಯೆ ಹಿಂದೂ ಧರ್ಮದ ಮೂಲ:ಡಾ.ಅಪ್ಪಾರಾವ ದೇವಿ ಮುತ್ಯಾ

ಅದ್ಧೂರಿಯಾಗಿ ಜರುಗಿದ ಹಿಂದೂ ಸಮ್ಮೇಳನ                            ಸಹೋದರತ್ವ ಭಾವನೆಯೆ ಹಿಂದೂ ಧರ್ಮದ ಮೂಲ:ಡಾ.ಅಪ್ಪಾರಾವ ದೇವಿ ಮುತ್ಯಾ

ಅದ್ಧೂರಿಯಾಗಿ ಜರುಗಿದ ಹಿಂದೂ ಸಮ್ಮೇಳನ ಸಹೋದರತ್ವ ಭಾವನೆಯೆ ಹಿಂದೂ ಧರ್ಮದ ಮೂಲ:ಡಾ.ಅಪ್ಪಾರಾವ ದೇವಿ ಮುತ್ಯಾ 

ಕಲಬುರಗಿ: ಹಿಂದೂ ಸಮ್ಮೇಳನ ಆಯೋಜನಾ ಸಮಿತಿ ಓಂ ಉಪನಗರ ಭಾನುವಾರ ಹಮ್ಮಿಕೊಂಡಿದ್ದ ಹಿಂದೂ ಸಮ್ಮೇಳನ ಯಶಸ್ವಿಯಾಗಿ ಜರುಗಿತು.ವೀರೇಂದ್ರ ಪಾಟೀಲ ಬಡಾವಣೆಯ ಹನುಮಂತನ ಗುಡಿಯಿಂದ ಶೋಭಾಯಾತ್ರೆಗೆ ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್ ಚಾಲನೆ ನೀಡಿದರು.ವಿಜ್ರಂಭಣೆಯ ಮೆರವಣಿಗೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು.ಡೊಳ್ಳು ಕುಣಿತ, ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ತಮ್ಮ ಕಲೆಯನ್ನು ಪ್ರದರ್ಶಿಸಿದರು. 

                                                                          ಮೆರವಣಿಗೆ ಜಯನಗರ ಶಿವಮಂದಿರದ ಆವರಣದಲ್ಲಿ ಸಮಾಪ್ತಿಗೊಂಡಿತು. ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀನಿವಾಸ ಸರಡಗಿಯ ಮಹಾಲಕ್ಷ್ಮೀ ಶಕ್ತಿ ಪೀಠದ ಪೀಠಾಧಿಪತಿ ಪೂಜ್ಯ ಡಾ.ಅಪ್ಪಾರಾವ ದೇವಿ ಮುತ್ಯಾ ಸಹಿಷ್ಣುತೆ, ಸಹೋದರತ್ವ ಭಾವನೆ ಮೂಡಿಸುವುದೇ ಹಿಂದೂ ಧರ್ಮದ ಮೂಲ.ಹಿಂದೂ ನಾವೇಲ್ಲರೂ ಒಂದು ಎಂದು ತಿಳಿಸಿದರು.

 ಹಿಂದೂ ಧರ್ಮದಲ್ಲೆ ಅನೇಕ ಜಾತಿ ಜಾತಿಗಳ ಸಂಘರ್ಷ ನಡೆಯುತ್ತಿದೆ.ಅಇದು ತಪ್ಪಬೇಕು.ಎಲ್ಲರೂ ಒಂದೇ ಎನ್ನುವ ಭಾವನೆ ಮೂಡಬೇಕು ಎಂದ ಅವರು ಗೋಶಾಲೆಗಳಿಗೆ ಹಸುಗಳನ್ನು ಕಳಿಸುವ ಮೂಲಕ ಕಸಾಯಿಖಾನೆಗೆ ಸಾಗಿಸುವುದನ್ನು ತಪ್ಪಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಲಬುರಗಿ ವಿಭಾಗದ ಕಾರ್ಯಕಾರಿಣಿ ಸದಸ್ಯ ನಾಗಪ್ಪ ಮೈಲಾರ ಮಾತನಾಡಿದ ಅವರು ಈಗಲೂ ಹಿಂದೂಗಳು ಎಚ್ಚೇತ್ತದಿದ್ದರೆ ಅಪಾಯ ತಪ್ಪಿದ್ದಲ್ಲ.ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತದ ಅದರಲ್ಲೂ ಹಿಂದೂ ಧರ್ಮದ ಸಂಸ್ಕೃತಿಯ ಮೂಲವನ್ನು ಅಳವಡಿಸಿಕೊಳ್ಳಲು ಹವಣಿಸುತ್ತಿವೆ ಎಂದ ಅವರು ಲವ್ ಜೀಹಾದ್ ಗೆ ಹಿಂದೂ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿಂದೂ ಸಮ್ಮೇಳನ ಆಯೋಜನಾ ಸಮಿತಿ ಅಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ ಮಾತನಾಡಿ ಹಿಂದೂಗಳು ಒಗ್ಗೂಡಿಸಲು ಇಂಥ ಸಮ್ಮೇಳನಗಳು ಅಗತ್ಯ.ಯುವಕರು ದೇಶದ ಭವಿಷ್ಯವಾಗಿದ್ದು, ಅವರನ್ನು ಸಂಸ್ಕೃತ ಎಂಬ ಬೀಜ ಬಿತ್ತುವ ಕೆಲಸ ಆಗಬೇಕು.ಯಶಸ್ವಿಯಾಗಿ ಜರುಗಿದ ಇಂದಿನ ಸಮ್ಮೇಳನಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಕುಸನೂರ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಪೀರಪ್ಪ ಮುತ್ಯಾ,ಕುಸನೂರು ತಾಂಡಾದ ಸೇವಾಲಾಲ್ ಜೈ ಭವಾನಿ ಪೀಠದ ಶ್ರೀ ವಿಠ್ಠಲ ಲಕ್ಷ್ಮಣ ರಾಠೋಡ, ಅನಿತಾ ರಾಠೋಡ, ಶರಣು ಸೀಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಸುರೇಖಾ ಬಾಲಕೊಂದೆ ಪ್ರಾರ್ಥಿಸಿದರು.ಪ್ರೇಮ್ ಸಿಂಗ್ ಚವ್ಹಾಣ್ ಪ್ರಾಸ್ತಾವಿಕವಾಗಿ ಮಾತನಾಡಿದರು.ವಿಶ್ವನಾಥ ತೋಟ್ನಳ್ಳಿ ಸ್ವಾಗತಿಸಿದರು.ಆರ್ ಎಸ್ ಎಸ್ ಮುಖಂಡ ಜೆ.ನಾಗರಾಜ ನಿರೂಪಿಸಿದರು.ಸಮಿತಿ ಉಪಾಧ್ಯಕ್ಷ ಸೂರ್ಯಕಾಂತ ಕೆ.ಬಿ ವಂದಿಸಿದರು.

ಮನೋಹರ ಬಡಶೇಷಿ, ನೇಮಿನಾಥ ಜೈನ್, ರಾಜಶೇಖರ ಮಾಗಾ,ರವಿಶರಣ ಅಗ್ಗಿಮಠ,ರಾಚಯ್ಯ ಮಠಪತಿ,ಹರೀಶ್ ದೊಡ್ಮನೆ,ಶಿವು ಗುತ್ತೇದಾರ, ಬಸವರಾಜ ನಾಯ್ಕರ, ಅನುರಾಧ ಕುಮಾರಸ್ವಾಮಿ, ಸಿದ್ಧಲಿಂಗ ಗುಬ್ಬಿ,ಮಲ್ಲಯ್ಯ ಸ್ವಾಮಿ ಗಂಗಾಧರಮಠ,ಶೈಲಜಾ ವಾಲಿ, ಲತಾ ತುಪ್ಪದ ಗೀತಾ ಸಿರಗಾಪೂರ, ಪಾರ್ವತಿ ರಠಕಲ ಸೇರಿದಂತೆ ವಿವಿಧ ಬಡಾವಣೆಗಳ ನೂರಾರು ಜನರು, ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.