“ತಪ್ಪು ನಿರ್ಣಯ ತಿದ್ದುಪಡಿಸದಿದ್ದರೆ ಸರ್ಕಾರ ವಿರೋಧಿ ಹೋರಾಟ ಅನಿವಾರ್ಯ : KYF ಎಚ್ಚರಿಕೆ

“ತಪ್ಪು ನಿರ್ಣಯ ತಿದ್ದುಪಡಿಸದಿದ್ದರೆ ಸರ್ಕಾರ ವಿರೋಧಿ ಹೋರಾಟ ಅನಿವಾರ್ಯ : KYF ಎಚ್ಚರಿಕೆ

SARDAR VALLABHBHAI PATEL

“ತಪ್ಪು ನಿರ್ಣಯ ತಿದ್ದುಪಡಿಸದಿದ್ದರೆ ಸರ್ಕಾರ ವಿರೋಧಿ ಹೋರಾಟ ಅನಿವಾರ್ಯ : KYF ಎಚ್ಚರಿಕೆ

ಕಲಬುರಗಿ: ಸೆಪ್ಟೆಂಬರ್ 16ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ, 1998ರಲ್ಲಿ ತೆಗೆದುಕೊಳ್ಳಲಾದ ನಿರ್ಣಯವು ತಪ್ಪು ಸಂಗತಿಯ ಆಧಾರದ ಮೇಲೆ ಕೈಗೆತ್ತಿಕೊಳ್ಳಲಾಗಿದೆ ಎಂಬುದನ್ನು ಸರಿಪಡಿಸುವ ನಿಟ್ಟಿನಲ್ಲಿ ತಿದ್ದುಪಡಿ ಮಾಡದಿದ್ದರೆ, ಸರ್ಕಾರವೇ ಸರ್ಕಾರ ವಿರೋಧಿ ಪ್ರತಿಭಟನೆಗಳಿಗೆ ಪ್ರಚೋದನೆ ನೀಡಿದಂತಾಗುತ್ತದೆ ಎಂದು KYF ರಾಜ್ಯ ಸಂಚಾಲಕರೂ ನ್ಯಾಯವಾದಿಗಳಾದ ಜೇ.ಎಸ್. ವಿನೋದಕುಮಾರ ಹೇಳಿದ್ದಾರೆ.

KYF ಜಿಲ್ಲಾ ಅಧ್ಯಕ್ಷ ಅನಂತ ಗುಡಿಯವರು ಮಾತನಾಡಿ, “ನಮ್ಮ ಬೇಡಿಕೆ ನ್ಯಾಯಸಮ್ಮತ, ಕಾನೂನಾತ್ಮಕ ಹಾಗೂ ನೈಜ ಸಂಗತಿಯಾಗಿದೆ. ಇದು ಯಾವುದೇ ರಾಜಕೀಯ ವಿಚಾರವಲ್ಲ. ಈ ಭಾಗದ ನೈಜ ಇತಿಹಾಸವನ್ನು ಸರಿಪಡಿಸುವ ಬೇಡಿಕೆಯಾಗಿದೆ” ಎಂದು ತಿಳಿಸಿದರು.

ಹೋರಾಟಗಾರ ಎಂ.ಎಸ್. ಪಾಟೀಲ ನರಿಬೋಳ ಅವರು, *“ಕಲ್ಯಾಣ ಕರ್ನಾಟಕ ಉತ್ಸವವನ್ನು ತಿರಸ್ಕರಿಸುವ ಉದ್ದೇಶ ನಮ್ಮದು ಅಲ್ಲ. ಆದರೆ ಈ ಭಾಗದ ನೈಜ ಇತಿಹಾಸವನ್ನು ತಿದ್ದುಪಡಿ ಮಾಡಿ, ಅಸ್ಮಿತೆಯನ್ನು ಕಾಪಾಡಿಕೊಳ್ಳುವ ಕಾರ್ಯವನ್ನು ಯುವಜನತೆ ಮುಂದುವರಿಸಲಿದ್ದಾರೆ. ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸರಿಯಾದ ತಿದ್ದುಪಡಿ ಮಾಡದಿದ್ದರೆ, ಬೃಹತ್ ಹೋರಾಟ ಅನಿವಾರ್ಯವಾಗುತ್ತದೆ” ಎಂದು ಎಚ್ಚರಿಸಿದರು.

ಸಂಘಟನೆಯವರು ಸರ್ಕಾರವನ್ನು ಮನವಿ ಮಾಡಿಕೊಂಡಿದ್ದು, ಈ ಭಾಗದ ಇತಿಹಾಸವನ್ನು ಸರಿಪಡಿಸಿ ಹೊಸ ದಿನಾಂಕದಂದು ಉತ್ಸವವನ್ನು ಆಚರಿಸುವಂತೆ ತಕ್ಷಣವೇ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.