ಜಿಲ್ಲೆಯ ಹತ್ತನೇ ತರಗತಿ ಫಲಿತಾಂಶದಲ್ಲಿ ಕುಸಿತ : ಕಲ್ಯಾಣ ಕರ್ನಾಟಕ ಭಾಗದ ಮಂತ್ರಿಗಳು ತುರ್ತು ಸಭೆ ಕೈಗೊಳ್ಳಲು : ಸಂತೋಷ ಗಡಂತಿ ಆಗ್ರಹ

ಜಿಲ್ಲೆಯ ಹತ್ತನೇ ತರಗತಿ ಫಲಿತಾಂಶದಲ್ಲಿ ಕುಸಿತ : ಕಲ್ಯಾಣ ಕರ್ನಾಟಕ ಭಾಗದ ಮಂತ್ರಿಗಳು ತುರ್ತು ಸಭೆ ಕೈಗೊಳ್ಳಲು : ಸಂತೋಷ ಗಡಂತಿ ಆಗ್ರಹ
ಚಿಂಚೋಳಿ : ಸರಕಾರ ರಾಜ್ಯದಲ್ಲಿ ಫಲಿತಾಂಶ ಸುಧಾರಣೆಗೆ ತರಲು ಹಲವಾರು ರೀತಿಯಲ್ಲಿ ಪ್ರಯತ್ನ ಮಾಡಿದ್ದರೂ ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಇದರ ಸುಧಾರಣೆ ಆಗುತ್ತಲೇ ಇಲ್ಲ. ಪ್ರಕಟಗೊಂಡ ಎಲ್ಲಾ ಫಲಿತಾಂಶಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಮಾನ ಹೋಗ್ತಾನೆ ಇದೆ ಎಂದು ಬಿಜೆಪಿ ಮುಖಂಡ ಸಂತೋಷ ಗಡಂತಿ ಆರೋಪಿಸಿದ್ದಾರೆ.
ಹೀಗೆಂದು ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿರುವ ಅವರು, ಈ ಹತ್ತನೆ ತರಗಿತಿ ಫಲಿತಾಂಶ ಭವಿಷ್ಯದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ತುಂಬಲಾರದ ನಷ್ಟ ಹಾಗೂ ಪಡಬಾರದ ಕಷ್ಟ ಅನುಭವಿಸುವ ಪರಿಸ್ಥಿತಿ ತಂದೊಡ್ಡುವಲ್ಲಿ ಅನುಮಾನವೇ ಇಲ್ಲ. ಪಕ್ಷಾತೀತವಾಗಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಈ ಪ್ರಕಟಗೊಂಡ ಫಲಿತಾಂಶದ ವಿಷಯದ ಗಂಭೀರತೆಯನ್ನು ಅರಿತು ಕೂಡಲೇ ತುರ್ತು ಸಭೆ ಸೇರುವುದು ಅತಿ ಅವಶ್ಯ ಇದ್ದು, ಪ್ರಸ್ತುತ ದಿನದಿಂದಲೇ ಮುಂಬರುವ ಫಲಿತಾಂಶ ಸುಧಾರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತುಸಂಬಂಧಪಟ್ಟ ಅಧಿಕಾರಿಗಳ ತಲೆದಂಡ ಆಗಲಿ. ಕಲ್ಯಾಣ ಕರ್ನಾಟಕ ಭಾಗದ ಶೂನ್ಯ ಫಲಿತಾಂಶ ಪಡೆದ ಶಾಲೆಗಳನ್ನು ಮುಚ್ಚಿ, ಅಂತಹ ಶಾಲೆಗಳ ಸಿಬ್ಬಂದಿಗಳಿಗೆ ಸರಕಾರ ಕೊಟ್ಟ ಸಂಬಳ ಹಾಗೂ ಸವಲತ್ತುಗಳನ್ನು ಸರಕಾರ ವಸೂಲಿ ಮಾಡಬೇಕು. 10 ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಕುಸಿತ ಕಂಡಂತಹ ಸಮಯದಲ್ಲಿ ಜನಪ್ರತಿನಿಧಿಗಳು ಸುಮ್ಮನಿದ್ದು ಈ ಭಾಗದ ಶೈಕ್ಷಣಿಕ ಅವನತಿಗೆ ಆಸ್ಪದ ನೀಡಬಾರದು ಎಂದು ಸಂತೋಷ ಗಡಂತಿ ಅವರು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.