ಸಮಾಜಕ್ಕೆ ಅನ್ಯಾಯವಾದಾಗ ಧೈರ್ಯವಾಗಿ ಎದುರಿಸಿ ನಿಂತ ಛಲಗಾರ
ಸಮಾಜಕ್ಕೆ ಅನ್ಯಾಯವಾದಾಗ ಧೈರ್ಯವಾಗಿ ಎದುರಿಸಿ ನಿಂತ ಛಲಗಾರ
ನಾಗರಾಜ್ ದಂಡಾವತಿ ವರದಿ ಶಹಾಬಾದ : - ಭೀಮಣ್ಣ ಖಂಡ್ರೆಯವರ ಸಾಮಾಜಿಕ ಸೇವೆ, ಸರಳ ಜೀವನ,
ನೇರ ನುಡಿ ಮತ್ತು ವೀರಶೈವ ಲಿಂಗಾಯತ ಸಮಾಜಕ್ಕೆ ಅವರ ಸೇವೆ ಅನಂತವಾದದ್ದು ಎಂದು ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಭೀಮಾಶಂಕರ ಕುಂಬಾರ ಹೇಳಿದರು.
ಅವರು ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಆಯೋಜಿಷಿದ್ದ ಲಿಂಗೈಕ್ಯ ಭೀಮಣ್ಣ ಖಂಡ್ರೆಯವರ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದರು.
ಅವರ ಅನುಭವದ ನುಡಿಗಳು ನಮ್ಮ ಸಮಾಜದ ಕಾರ್ಯಗಳಿಗೆ ದಾರಿ ದೀಪವಾಗಿವೆ, ವೀರಶೈವ ಲಿಂಗಾಯತ ಸಮಾಜದ ಹಕ್ಕುಗಳ ರಕ್ಷಣೆಗೆ ಮುಂಚೂಣಿಯಲ್ಲಿ ನಿಂತ ನಾಯಕ, ಸಮಾಜಕ್ಕೆ ಅನ್ಯಾಯವಾದಾಗ ಧೈರ್ಯವಾಗಿ ಎದುರಿಸಿ ನಿಂತ ಹೋರಾಟಗಾರ ಖಂಡ್ರೆ ಎಂದು ಸ್ಮರಿಸಿದರು.
ಶ್ರದ್ದಾಂಜಲಿ ಸಭೆಯಲ್ಲಿ ಮೃತ್ಯುಂಜಯ ಸ್ವಾಮಿ, ಶಿವುಕುಮಾರ ಇಂಗಿನಶೆಟ್ಟಿ,
ಭೀಮಾಶಂಕರ ಕುಂಬಾರ, ಈರಣ್ಣ ವಾಲಿ, ಶರಣಬಸಪ್ಪ ಕೋಬಾಳ, ರಾಜು ಬೆಳಗುಂಪಿ,
ಚನ್ನಪ್ಪ ಕುಂಬಾರ, ರಾಜಶೇಖರ ಘಂಟಿಮಠ, ಶರಣು ಜೆರಟಗಿ, ಶ್ರೀಮತಿ ರಾಜೇಶ್ವರಿ ಧನಶೆಟ್ಟಿ, ಜಯಶ್ರೀ ಪಸಾರ, ಮಹಾನಂದ ಕಂಬಾರ, ಆರತಿ ಸತ್ಯಾಳ, ಜಗದೇವಿ ಬೆಳಗುಂಪಿ ಹಾಗೂ ಸಮಾಜದ ಹಿರಿಯ ಮುಂಖಡರು ಪಾಲ್ಗೊಂಡಿದ್ದರು.
ಭೀಮಣ್ಣ ಖಂಡ್ರೆ ಅವರ ಲಿಂಗೈಕ್ಯ ಹಿನ್ನೆಲೆಯಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿದರು.
