ಸೂಕ್ತ ವೇದಿಕೆ ನಿರ್ಮಾಣವಿಲ್ಲದೆ ನೃತ್ಯಕೆ ವಿದ್ಯಾರ್ಥಿಗಳ ಪರದಾಟ :

ಪೋಲಕಪಳ್ಳಿ ಆದರ್ಶ ವಿದ್ಯಾಲಯದಲ್ಲಿ ತಾಲೂಕ ಮಟ್ಟದ ಪ್ರತಿಭಾ ಕಾರಂಜಿ, 

ಸೂಕ್ತ ವೇದಿಕೆ ನಿರ್ಮಾಣವಿಲ್ಲದೆ ನೃತ್ಯಕೆ ವಿದ್ಯಾರ್ಥಿಗಳ ಪರದಾಟ :ನೆಲದ ಕಟ್ಟೆಯ ಎಣಿಗಳ ಮೇಲೆ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ | ಬಂದ ಸರಕಾರದ ಅನುದಾನ ಹಂಚಿಕೊಂಡು ನುಂಗಿ ಹಾಕುವ ಪ್ರಯತ್ನ  

ಚಿಂಚೋಳಿ : ಇಲ್ಲಿನ ಪೋಲಕಪಳ್ಳಿ ಆದರ್ಶ ವಿದ್ಯಾಲಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಚಿಂಚೋಳಿ ವತಿಯಿಂದ ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಜರುಗಿತು. ಆದರೆ ಈ ಕಲೋತ್ಸವ ಕಾರ್ಯಕ್ರಮಕ್ಕೆ ಸೂಕ್ತ ವೇದಿಕೆ ನಿರ್ಮಾಣಗೊಳಿಸದೇ ಇರುವುದರಿಂದ ಆಯ್ಕೆಗೊಂಡ ವಿದ್ಯಾರ್ಥಿಗಳು ಶಾಲೆಯ ನೆಲ ಕಟ್ಟೆಯ ಏಣಿಗಳ ಮೇಲೆ ನೃತ್ಯದಿಂದ ಪ್ರತಿಭೆ ತೊರಪಡಿಸಲು ಹರಸಹಾಸ ಪಟ್ಟಿದ್ದು ಕಂಡಿತು. 

ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಕಡೆಗೆ ಗಮನಹರಿಸುವದಕ್ಕೆ ಮತ್ತು ವಿವಿಧ ಚಟುವಟಿಗಳಲ್ಲಿ ಭಾಗವಹಿಸಿ, ಕ್ರಿಯಾಶೀಲರಾಗಿ ತೊಡಗಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಲು ಕಲೋತ್ಸವ ಮತ್ತು ಪ್ರತಿಭಾ ಕಾರಂಜಿಗಳಂತ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥೀಗಳ ಮನಸ್ಸು ಎಳೆಯುವ ಪ್ರಯತ್ನ ನಡೆಸಲು ಸರಕಾರ ಮತ್ತು ಕೆಕೆಆರ್ ಡಿ ಯೋಜನೆಯಡಿ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಸಮನ್ವಯ ಸಂಪನ್ಮೂಲ ಕೇಂದ್ರ ಇಲಾಖೆಗಳಿಗೆ ಅನುದಾನ ನೀಡುತ್ತದೆ. ಆದರೆ ಅನುದಾನ ಬಳಕೆ ಮಾಡಿಕೊಳ್ಳದೆ ವಿದ್ಯಾರ್ಥಿಗಳಿಗೆ ಬಿಸಿಲಲಿ ಶಾಲೆಯ ನೆಲ ಕಟ್ಟೆಯ ಮೇಲೆ ನೃತ್ಯವನ್ನು ಮಾಡಿಸಿ, ಸರಕಾರದಿಂದ ಬಂದ ಅನುದಾನ ಹಂಚಿಕೊಂಡು ನುಂಗಿ ಹಾಕುವ ಪ್ರಯತ್ನಗಳು ನಡೆಸಿರುವುದು ಅಲ್ಲಿ ಕಂಡಿತು. ಇನ್ನೂ ಪೋಲಕಪಳ್ಳಿ ಆದರ್ಶ ವಿದ್ಯಾಲಯ ಶಾಲೆಗೆ ರಜೆಯನ್ನು ಘೋಷಿಸಿ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಗಳಿಂದ ಶಾಲೆಯ ವಿದ್ಯಾರ್ಥಿಗಳಿಗೆ ದೂರ ಈಡಲಾಗಿದ್ದರಿಂದ ತಾಲೂಕ ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಗೊಂಡ ವಿದ್ಯಾರ್ಥಿಗಳು ಪ್ರೇಕ್ಷಕರಾಗಿ ವಿಕ್ಷಣೆ ಮಾಡುವ ಶಾಲಾ ವಿದ್ಯಾರ್ಥಿಗಳು ಇಲ್ಲದರಿಂದ ಬಿಇಓ ಮತ್ತು ಶಿಕ್ಷಕರ ಹಾಗೂ ಸಂಘಗಳ ಪದಾಧಿಕಾರಿಗಳು, ಸಿಆರ್ ಪಿಗಳ ಎದುರು ನೃತ್ಯ ಮಾಡಿ ಮನೆಗೆ ತೆರಳ ಬೇಕಾಯಿತು. ಹೀಗಾಗಿ ಚಿಂಚೋಳಿ ಶಿಕ್ಷಣ ಇಲಾಖೆಗೆ ಮತ್ತು ತಾಲೂಕ ಆಡಳಿತಕ್ಕೆ ಸೂಕ್ತ ಲಗಾಮು ಇಲ್ಲದ್ದರಿಂದ ಆಡಳಿತದ ಕಾರ್ಯ ಚಟುವಟಿಕೆಗಳು ಯಾರ ಹೆದರಿಕೆ ಇಲ್ಲದೆ ಆಡಳಿತದ ಗೆರೆ ಮನಬಂದಂತೆ ನಡೆಯುತ್ತಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶಗಳು ವ್ಯಕ್ತವಾಗುತ್ತಿವೆ.

ಕಾರ್ಯಕ್ರಮದ ವೇದಿಕೆಯ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ವಿ. ಲಕ್ಷ್ಮಯ್ಯ, ಮಲ್ಲಿಕಾರ್ಜುನ್ ಪಾಲಾಪೂರ, ದೇವೀಂದ್ರಪ್ಪ ಹೊಳ್ಕರ್ , ಸುರೇಶ ಕೊರವಿ, ಜಯಪ್ಪ ಚಾಪೇಲ್, ಮಕ್ಸೂದ್ ಅಲಿ, ಶಿವಪುತ್ರಪ್ಪ ದೊಡ್ಡಮನಿ, ಮೋಹನ ರಾಠೋಡ ಅವರು ಉಪಸ್ಥಿತರಿದರು. 

ಸರಕಾರದಿಂದ ಅನುದಾನ ಬರುವುದಿಲ್ಲ: 

ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಕಡೆಗೆ ಎಳೆಯಲು ಮತ್ತು ಪ್ರೋತ್ಸಾಹಿಸುವ ವೇದಿಕೆಯಾಗಿರುವ ತಾಲೂಕ ಮಟ್ಟದ ಕಲೋತ್ಸವ ಹಾಗೂ ಪ್ರತಿಭಾ ಕಾರಂಜಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಸಲು ಸರಕಾರದಿಂದ ಯಾವುದೇ ಅನುದಾನ ಬರುವುದಿಲ್ಲ.  

- ವಿ.ಲಕ್ಷ್ಮಯ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಿಂಚೋಳಿ