ನೀಲೂರಿನಲ್ಲಿ ಹೊಸ ಶಾಲಾ ಕಟ್ಟಡ ಬಡದಾಳ ಶ್ರೀ ಗಳಿಂದ ಉದ್ಘಾಟನೆ

ನೀಲೂರಿನಲ್ಲಿ ಹೊಸ ಶಾಲಾ ಕಟ್ಟಡ ಬಡದಾಳ ಶ್ರೀ ಗಳಿಂದ ಉದ್ಘಾಟನೆ

ನೀಲೂರಿನಲ್ಲಿ ಹೊಸ ಶಾಲಾ ಕಟ್ಟಡ ಬಡದಾಳ ಶ್ರೀ ಗಳಿಂದ ಉದ್ಘಾಟನೆ

ಅಫಜಲಪುರ ತಾಲ್ಲೂಕಿನ ನೀಲೂರ ಗ್ರಾಮದ ,ಶಿವಶರಣೆ ನಿಂಬೆಕ್ಕ ವಿದ್ಯಾವರ್ಧಕ ಸಂಘದ ಶಾಲಾ ಹೊಸ ಕೋಣೆಗಳು ಉದ್ಘಾಟಿಸಿ ಮಾತನಾಡಿದ ಬಡದಾಳದ ಶ್ರೀ ಗಳು 

ನೀಲೂರಿನಲ್ಲಿರುವ ಮಾದರಿ ಕನ್ನಡ ಶಾಲೆಯೊಂದು ಮಕ್ಕಳನ್ನು ಕೈ ಬೀಸಿ ಕರೆಯುತ್ತಿದೆ. ಪಾಠಕ್ಕೂ ಜೈ, ಮೂಲಭೂತ ಸೌಕರ್ಯಕ್ಕೂ ಸೈ ಎನಿಸುವಂತಿದೆ. ಕಿರಿಯ ಪ್ರಾಥಮಿಕ ಶಾಲೆಯಾಗಿರುವುದರಿಂದ ಪುಟ್ಟ ಮಕ್ಕಳ ಕಣ್ಸೆಳೆಯಲು ಗೋಡೆಗಳಿಗೆ ಬಣ್ಣ ಹಚ್ಚಿಸಿ, ಅದರ ಮೇಲೆ ಗೊಂಬೆಗಳ ಚಿತ್ತಾರ ಬಿಡಿಸಲಾಗಿದೆ. ತರಗತಿ ಕೋಣೆಗಳಲ್ಲೂ ಮಕ್ಕಳ ಕಲಿಕೆಗೆ ಪೂರಕವಾದ ವಾತಾವಣ ಸೃಷ್ಟಿಯಾಗಿದೆ. ಶಾಲೆಯಂದರೆ ದೇವಾಲಯ ಇದ್ದಹಾಗೆ, ಶಿಕ್ಷಕ ,ಸೈನೀಕ ಸನ್ಯಾಸಿ,ರೈತ , ಇವರು ಇಲ್ಲವೆಂದರೆ ದೇಶದ ಜನತೆ ಬದುಕಲು ಕಷ್ಟ , ಇಂದಿನ ಮಕ್ಕಳು ನಾಳೆ ನಮ್ಮ ದೇಶದ ನಾಗರಿಕರು ಮಕ್ಕಳೇ ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರ ನೀಡಿ ಬೆಳೆಸಬೇಕು ಎಂದು ಬಡದಾಳದ ಡಾ. ಚನ್ನಮಲ್ಲ ಶಿವಾಚಾರ್ಯರು ಹೇಳಿದರು.

ಬಂಗಾರ ಜಿಡೆ ನೀಲಕಂಠೇಶ್ವರ ಮಠದ ಧರ್ಮಾಧಿಕಾರಿಗಳಾದ ಶ್ರೀ ಶರಣಯ್ಯ ಸ್ವಾಮಿಗಳು ಮಾತನಾಡುತ್ತ 2000-01ನೇ ಸಾಲಿನಲ್ಲಿ ಶಿವಶರಣೆ ನಿಂಬೆಕ್ಕ ವಿದ್ಯಾವರ್ಧಕ ಸಂಘದ ಶಾಲೆಯನ್ನು ನೀಲೂರಿನ ಗ್ರಾಮದಲ್ಲಿ ಅಧ್ಯಕ್ಷರಾದ ಮಲ್ಲಿನಾಥ ಅಷ್ಠಗಿ, ಹಾಗೂ ಅವರ ಗೆಳೆಯರು ಕೂಡಿಕೊಂಡು ಸಂಘದ ಅಡಿಯಲ್ಲಿ ಪ್ರಾಥಮಿಕ ಶಾಲೆಯು ಪ್ರಾರಂಭಗೊಂಡಿದೆ. 

ನೀಲೂರು ಗ್ರಾಮದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಉದ್ದೇಶದಿಂದ ಆರಂಭಗೊಂಡ ಶಾಲೆ ಇಂದಿಗೆ 24 ವರ್ಷ ಗತಿಸಿವೆ ,ಅಧ್ಯಕ್ಷರಾದ ಕಾಶಿನಾಥ್ ಲೋಣಿ ಅವರ ನೇತೃತ್ವದಲ್ಲಿ ಅತ್ಯುತ್ತಮವಾಗಿ ನಡೆಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಭಗವಂತರಾವ ಕಾಮಜಿ, ಮಲ್ಲಿನಾಥ ಹಾಳಮಳ್ಳಿ,ಶ್ರೀ ಮಂತ ಗಣಮುಖಿ ಗ್ರಾಂ.ಪಂ.ಅಧ್ಯಕ್ಷರು, ಭೀಮಾಶಂಕರ ಪಗಡಿ, ಸಾಯಬಣ್ಣ ಹುಗಾರ, ಶರಣಗೌಡ ಪಾಟೀಲ ಪಾಳಾ,ಯುಸುಫ್ ಮುಲ್ಲಾ,ಮೈಬೂಬ ಭೀಮಳ್ಳಿ, ಸಂಗಮನಾಥ ಹುಗಾರ ನಿರುಪಿಸಿದರು.