ಕಮಲನಗರ ಗುರು ಕಾರುಣ್ಯ 7ನೇ ಶಾಲಾ ವಾರ್ಷಿಕೋತ್ಸವ, ಶಿಕ್ಷಣ ಜತೆ ಮಾನವೀಯ ಮೌಲ್ಯ ಕಲಿಸಿ : ಇಒ
ಕಮಲನಗರ ಗುರು ಕಾರುಣ್ಯ 7ನೇ ಶಾಲಾ ವಾರ್ಷಿಕೋತ್ಸವ,
ಶಿಕ್ಷಣ ಜತೆ ಮಾನವೀಯ ಮೌಲ್ಯ ಕಲಿಸಿ : ಇಒ
ಕಮಲನಗರ: ಶಿಕ್ಷಣದಲ್ಲಿ ನೈತಿಕ ಮೌಲ್ಯದ ಕೊರತೆ, ಜೊತೆಗೆ ಮಕ್ಕಳು ಹೆಚ್ಚು ಅಂಕಗಳಿಸಲೆಂಬ ಪಾಲಕರ ಹಂಬಲದಿಂದಾಗಿ ಯುವ ಪೀಳಿಗೆ ವಿದ್ಯಾವಂತರಾಗುತ್ತಿದ್ದಾರೆ ವಿನ: ಪ್ರಜ್ಞಾವಂತರಾಗುತ್ತಿಲ್ಲ. ಇಂದು ಸುಶಿಕ್ಷಿತರೇ ತಮ್ಮ ತಂದೆ-ತಾಯಿಗಳನ್ನು ವೃದ್ಧಾಶ್ರಮಗಳಿಗೆ ಕಳುಹಿಸುತ್ತಿದ್ದಾರೆ. ಆದ್ದರಿಂದ ಶಿಕ್ಷಣ ಸಂಸ್ಥೆಗಳು ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲಿಸುವುದು ಸದ್ಯದ ಅಗತ್ಯವಾಗಿದೆ ಎಂದು ಇಒ ಹಣಮಂತರಾಯ ಕೌಟಗೆ ಹೇಳಿದರು.
ಪಟ್ಟಣದ ಗುರು ಕಾರುಣ್ಯ ಪಬ್ಲಿಕ್ ಶಾಲೆಯ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 7ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ವÀiÁತನಾಡಿದರು.
ಎಲ್ಲರಿಗೂ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯವಾಗಿದ್ದರೂ ಸಹ ಕೇವಲ ಸರ್ಕಾರದಿಂದಲೂ ಎಲ್ಲವೂ ಸಾದ್ಯವಿಲ್ಲ. ಈ ನಿಟ್ಟಿನಲ್ಲಿ ಅನುದಾನರಹಿತ ಸಾಕಷ್ಟು ಶಿಕ್ಷಣ ಸಂಸ್ಥೆಗಳು ಪುನಶ್ಚೇತನದ ಅವಶ್ಯಕತೆ ಇದೆ. ಸರ್ಕಾರ ಕುರಿತು ಗಂಭೀರವಾಗಿ ಯೋಚಿಸಬೇಕಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ನಾಡೋಜ ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿ, ವಿದ್ಯಾರ್ಥಿಗಳು ಪರಿಶ್ರಮದಿಂದ ನಿರಂತರ ಕಲಿಕೆಯನ್ನು ಮುಂದುವರೆಸಿದ್ದಲ್ಲಿ ಸಮಾಜದಲ್ಲಿ ಉನ್ನತ ಸ್ಥಾನ. ಪಡೆದು ನೆಮ್ಮದಿ ಜೀವನ ನಡೆಸಬಹುದಾಗಿದೆ ಎಂದರು.
ಭಾಲ್ಕಿ ಹಿರೇಮಠ ಸಂಸ್ಥಾನ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಲಿಂಗೈಕ್ಯ ಡಾ. ಚನ್ನಬಸವ ಪಟ್ಟದ್ದೇವರು ಸತ್ಯ ಸಂಕಲ್ಪದಂತೆ ಗುರು ಕಾರುಣ್ಯ ಪಬ್ಲಿಕ್ ಶಾಲೆ 1999-2000 ಶೈಕ್ಷಣಿಕ ವರ್ಷದಲ್ಲಿ 98 ಮಕ್ಕಳಿಂದ ಆರಂಭಗೊಂಡು ಇಂದು 640 ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಉತ್ತಮ ಶಿಕ್ಷಣ ನೀಡುತ್ತಿರುವುದು ಹೆಮ್ಮೆ ಸಂಗತಿಯಾಗಿದೆ. ಪಾಲಕರು ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಪಡೆಯುತ್ತಿದ್ದಾರೆಯೋ ಅಥವಾ ಇಲ್ಲವೋ ಕಾಳಜಿ ವಹಿಸಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ಪಿಎಸ್‍ಐ ಆಶಾ ಠಾಕೋರ್ ಮಾತನಾಡಿ, ಶಿಕ್ಷಣ ಎಂದರೆ ಸಾಕ್ಷರತರಾಗುವದರೊಂದಿಗೆ ಮೌಲ್ಯಗಳನ್ನು ತಮ್ಮಲ್ಲಿ ತುಂಬಿಕೊಳ್ಳುವುದು. ಮಾನವೀಯ ಮೌಲ್ಯಗಳನ್ನು ನೀಡುವ ವಿದ್ಯೆ ಯಾರು ಕಸಿದುಕೊಳ್ಳಲು ಸಾಧ್ಯವಿಲ್ಲ. ಅದು ಅದ್ಭುತವಾದ ವಿಶೇಷ ಸಂಪತ್ತಾಗಿದೆ. ಗುರುಗಳಿಗೆ ತಂದೆ-ತಾಯಿಗಳ ನಂತರ ಸ್ಥಾನವಿದ್ದು ಅವರನ್ನು ಗೌರವಿಸಬೇಕು ಎಂದರು.
ಹಿರೇಮಠ ಸಂಸ್ಥಾನ ವಿದ್ಯಾಪೀಠ ಆಡಳಿತಾಧಿಕಾರಿ ಮೋಹನ ರೆಡ್ಡಿ, ಗ್ರಾಪಂ ಅಧ್ಯಕ್ಷೆ ಸುಶೀಲಾಬಾಯಿ ಮಹೇಶ ಸಜ್ಜನ, ಎಸ್‍ಬಿಐ ವ್ಯವಸ್ಥಾಪಕ ಪ್ರೇಮಕುಮಾರ, ಶಿವಾನಂದ ವಡ್ಡೆ, ಸೋನಾಳ ಗ್ರಾಪಂ ಅಧ್ಯಕ್ಷ ರಾಜಕುಮಾರ ಅಲಬಿದೆ, ಉದ್ಯಮಿ ಅವಿನಾಶ ಶಿವಣಕರ್ ಗುರುಶಾಂತ ಶಿವಣಕರ್, ರಾಜಕುಮಾರ ಬಿರಾದಾರ, ಮಹಾದೇವ ಮಡಿವಾಳ, ಭೀಮರಾವ ಸಿರಗಿರೆ, ಶಿವರಾಜ ಪಾಟೀಲ, ನೀಲಕಂಠ ಪಾಂಡರೆ, ರಮೇಶ ಟೋಕರೆ ಇದ್ದರು.
ಆಡಳಿತಾಧಿಕಾರಿ ಚನ್ನಬಸವ ಗಾಳೆ ಪ್ರಾಸ್ತವಿಕವಾಗಿ ಮಾತನಾಡಿದರು. ವಿವೇಕಾನಂದ ಬಿರಾದಾರ, ಚಂದ್ರಕಲಾ ಬಜರಂಗ ನೇರವೇರಿಸಿದರು. ಶೇಖರ ಖೆಳಗೆ, ದೀಪಿಕಾ ಪಿಗಳೆ ನಿರೂಪಿಸಿದರು.
ಕೊನೆಯಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕøತೀಕ ವಡುವಡಿಕೆ ನಡೆದವು.
