ರಾವೂರ ಗ್ರಾಮದಲ್ಲಿ ಬಸವೇಶ್ವರ ಮೂರ್ತಿ ಅನಾವರಣ ಮೇ 27 ಕ್ಕೆ.

ರಾವೂರ ಗ್ರಾಮದಲ್ಲಿ ಬಸವೇಶ್ವರ ಮೂರ್ತಿ ಅನಾವರಣ ಮೇ 27 ಕ್ಕೆ.

ರಾವೂರ ಗ್ರಾಮದಲ್ಲಿ ಬಸವೇಶ್ವರ ಮೂರ್ತಿ ಅನಾವರಣ ಮೇ 27 ಕ್ಕೆ.

ರಾವೂರ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಮೇ. 27ನೇ ತಾರೀಖು ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರರ 892ನೇ ಜಯಂತ್ಯೋತ್ಸವ ಹಾಗೂ ಮೂರ್ತಿ ಅನಾವರಣ ಸಮಾರಂಭ ನಡೆಯಲಿದೆ ಎಂದು ವಿಶ್ವಗುರು ಬಸವೇಶ್ವರ ಮೂರ್ತಿ ಅನಾವರಣ ಸಮಿತಿ ತಿಳಿಸಿದೆ. 

ಅಂದು ಸಾಯಂಕಾಲ 4 ಗಂಟೆಗೆ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದಿಂದ ವಿವಿಧ ಕಲಾ ತಂಡಗಳೋoದಿಗೆ ಬಸವೇಶ್ವರ ಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ 6-30 ಗಂಟೆಗೆ ರಾವೂರ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಬಸವೇಶ್ವರ ಮೂರ್ತಿ ಅನಾವರಣಗೊಳ್ಳಲಿದೆ. ಸೊನ್ನದ ಪೂಜ್ಯ ಶಿವಾನಂದ ಸ್ವಾಮಿಗಳು, ಮುಗುಳನಾಗಾವಿಯ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ಚಿತ್ತಾಪುರದ ಸೋಮಶೇಖರ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದಾರೆ.

ನಂತರ ನಡೆಯುವ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾoಕ್ ಖರ್ಗೆ ಉದ್ಘಾಟನೆ ಮಾಡಲಿದ್ದಾರೆ. ಸಚಿವ ಶರಣಪ್ರಕಾಶ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಷಟಸ್ಥಳ ದ್ವಜಾರೋಹಣ ಮಾಡಲಿದ್ದು, ಶಾಸಕ ಎಂ. ವಾಯ್. ಪಾಟೀಲ್ ಬಸವ ಪುಷ್ಪರ್ಚನೆ ಮಾಡುವರು. 

ಮುಖ್ಯ ಅತಿಥಿಗಳಾಗಿ ಶಾಸಕರಾದ ಬಸವರಾಜ ಮತ್ತಿಮುಡ, ಶಶಿಲ್ ನಮೋಶಿ, ಬಿ. ಜಿ. ಪಾಟೀಲ್, ಜಿಲ್ಲಾ ವೀರಶೈವ ಸಮಾಜ ಅಧ್ಯಕ್ಷ ಶರಣು ಮೋದಿ, ತಾಲೂಕ ಅಧ್ಯಕ್ಷ ನಾಗರಾಜ ಬಂಕಲಗಿ ಉಪಸ್ಥಿತರಿರುವರು ಎಂದು ಸಮಿತಿಯ ಪ್ರಮುಖರು ತಿಳಿಸಿದ್ದಾರೆ.