ಅಶೋಕ ನಗರ ಪೊಲೀಸ್ ಠಾಣೆಯ ಪೇದೆ ಕಿರುಕುಳ ನೀಡುತ್ತಿರುವದಾಗಿ ಆರೋಪ

ಅಶೋಕ ನಗರ ಪೊಲೀಸ್ ಠಾಣೆಯ ಪೇದೆ  ಕಿರುಕುಳ ನೀಡುತ್ತಿರುವದಾಗಿ ಆರೋಪ

ಉದಯಕುಮಾರ ಕಾಳೆ ಲಾಕಪ್ ಡೆತ್ ಪ್ರಕರಣ..

ಪೋಲಿಸರಿಂದ ನಿತ್ಯ ಕಿರುಕುಳ, ಕ್ರಮಕ್ಕೆ ಒತ್ತಾಯ..

ಕಲಬುರಗಿ

ಶರಣಸಿರಸಗಿಯ ಅಂಬೇಡ್ಕರ್ ನಗರದ ಉದಯಕುಮಾರ ಕಾಳೆ ಅವರನ್ನು 2023ರಲ್ಲಿ ಲಾಕಪ್ ಡೆತ್ ಆಗಿರುವ ಕುರಿತು ದೂರು ನೀಡಿರುವ ಕುಟುಂಬದವರಿಗೆ ಕೇಸ್ ವಾಪಸ್ ಪಡೆಯುವಂತೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಸತ್ಯಶೋಧನಾ ಸಮಿತಿ ಮುಖಂಡರಾದ ಎಸ್.ಬಿ.ಹೊಸಮನಿ, ಸೂರ್ಯಕಾಂತ ನಿಂಬಾಳ ಆರೋಪಿಸಿದ್ದಾರೆ.

ನಗರದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಲಾಕಪ್‌ಡೆತ್ ಪ್ರಕರಣದಲ್ಲಿ ಐವರು ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ಪ್ರಕರಣವನ್ನು ಹಿಂಪಡೆಯುವಂತೆ ಮೃತ ಉದಯಕುಮಾರ ಕಾಳೆ ಪತ್ನಿ, ದೂರುದಾರರಾದ ಇಮಲಾಬಾಯಿ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದ್ದರಿಂದ ಆರೋಪಿತ ಪೊಲೀಸ್ ಸಿಬ್ಬಂದಿಯೇ ಇಮಲಾಬಾಯಿ ಮನೆಗೆ ಪರಿಶೀಲನೆ ನೆಪದಲ್ಲಿ ಭೇಟಿ ನೀಡಿ, ಬಂಗಾರವನ್ನು ಬಚ್ಚಿಟ್ಟು, ಸುಳ್ಳು ಕಳ್ಳತನ ಆರೋಪ ಹೊರಿಸಿದ್ದಾರೆ ಎಂದು ಹೇಳಿದರು.

 ಲಾಕಪ್‌ಡೆತ್ ಆರೋಪದಲ್ಲಿರುವ ಪೊಲೀಸರೇ ಇಮಲಾಬಾಯಿಯ ಪುತ್ರ ರಾಮಜಿಯನ್ನು ಕರೆದು ಕೇಸ್ ವಾಪಸ್ ತೆಗೆದುಕೊಳ್ಳಿ, ಇಲ್ಲದಿದ್ದರೆ ನಿಮ್ಮನ್ನು ಅಪರಾಧ ಕೃತ್ಯದಲ್ಲಿ ಸಿಲುಕಿಸುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾರೆ. ಕೂಡಲೇ ಈ ಐವರು ಆರೋಪಿ ಪೊಲೀಸರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ಶೀಘ್ರ ಅಮಾನತು ಮಾಡದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ಇಮಲಾಬಾಯಿ ಕಾಳೆ ಇದ್ದರು.