ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ: ಸಮಗ್ರ ಸಮೀಕ್ಷೆಗೆ ಸರ್ಕಾರದ ಬದ್ಧತೆ : ಸಿ ಎಂ

ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ: ಸಮಗ್ರ ಸಮೀಕ್ಷೆಗೆ ಸರ್ಕಾರದ ಬದ್ಧತೆ : ಸಿ ಎಂ
ಕಲಬುರಗಿ: ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿಯ ನಿರ್ಣಾಯಕ ವಿಚಾರದ ಕುರಿತು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಭಾಗವಹಿಸಿದರು.
ಸಮಾಜಿಕ ನ್ಯಾಯದ ಪ್ರಕಾರ ಸರ್ಕಾರ ಈ ಕುರಿತು ಸಂಪೂರ್ಣ ಬದ್ಧವಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು. ನ್ಯಾಯಯುತ ಮತ್ತು ಪರಿಣಾಮಕಾರಿ ಅನುಷ್ಠಾನ ಖಚಿತಪಡಿಸಿಕೊಳ್ಳಲು, ಸಮಗ್ರ ಹಾಗೂ ವೈಜ್ಞಾನಿಕ ಸಮೀಕ್ಷೆ ನಡೆಸುವುದು ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು.
ಸಚಿವರು, ಈ ಪ್ರಕ್ರಿಯೆ ಯಾರನ್ನೂ ಕಡೆಗಣಿಸದಂತೆ ಹಾಗೂ ಯಾವುದೇ ನ್ಯಾಯಾಂಗ ಪರಿಶೀಲನೆಯನ್ನು ಸಮರ್ಥವಾಗಿ ಎದುರಿಸಲುಕಾನೂನುಬದ್ಧವಾಗಿ ಬಲಿಷ್ಠವಾಗಿರಬೇಕೆಂದು ಪ್ರಸ್ತಾಪಿಸಿದರು.
ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ಮತ್ತು ಕಾನೂನಾತ್ಮಕ ಸವಾಲುಗಳಿಗೆ ಸ್ಪಷ್ಟ ಉತ್ತರ ನೀಡುವ ಡೇಟಾ-ಚಾಲಿತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚೌಕಟ್ಟನ್ನು ರೂಪಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
- ವರದಿ: KKP News