ಉ.ಕ ಅಭಿವೃದ್ಧಿ ಮಾಡಿ ಇಲ್ಲದಿದ್ದರೆ ಪ್ರತ್ಯೇಕ ರಾಜ್ಯ ಕೊಡಿ
ಉ ಕ ಅಭಿವೃದ್ಧಿ ಮಾಡಿ ಇಲ್ಲದಿದ್ದರೆ ಪ್ರತ್ಯೇಕ ರಾಜ್ಯ ಕೊಡಿ.
ಉತ್ತರ ಕರ್ನಾಟಕ ಪ್ರದೇಶವನ್ನು ಅಭಿವೃದ್ಧಿ ಮಾಡಿ ಇಲ್ಲದಿದ್ದರೆ ನಮಗೆ ಪ್ರತ್ಯೇಕ ರಾಜ್ಯ ಕೊಡಿ ಎಂದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ನಾಗೇಶ್ ಗೋಲ ಶೆಟ್ಟಿ ಮತ್ತು ಸಲಹೆಗಾರ ಪ್ರೊ. ಶಿವರಾಜ್ ಪಾಟೀಲ್ ಅವರು ಸಯುಕ್ತ ಹೇಳಿಕೆ ನೀಡಿದ್ದಾರೆ.
ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕಕ್ಕೆ ಇರುವ ತಾರತಮ್ಯವನ್ನು ಕುರಿತು ಸ್ಪಷ್ಟವಾಗಿ ಅಂಕಿ ಸಂಖ್ಯೆಗಳನ್ನು ಸ್ಪಷ್ಟಪಡಿಸಿದ್ದಾರೆ ಅವರು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ದಕ್ಷಿಣ ಕರ್ನಾಟಕಕ್ಕೆ ಮತ್ತು ಉತ್ತರ ಕರ್ನಾಟಕಕ್ಕೆ ಏನು ಅಂತರ ಮತ್ತು ತಾರತಮ್ಯ ಇದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಒಟ್ಟು ಕರ್ನಾಟಕದಲ್ಲಿ 60,913 ಪ್ರಾಥಮಿಕ ಶಾಲೆಗಳಿವೆ ಅದರಲ್ಲಿ ದಕ್ಷಿಣ ಕರ್ನಾಟಕದಲ್ಲಿ 35,343 ಶಾಲೆಗಳಿದ್ದರೆ ಉತ್ತರ ಕರ್ನಾಟಕದಲ್ಲಿ ಕೇವಲ 25 170 ಪ್ರಾಥಮಿಕ ಶಾಲೆಗಳಿವೆ ಸುಮಾರು 10173 ಪ್ರಾಥಮಿಕ ಶಾಲೆಗಳ ವ್ಯತ್ಯಾಸವಿದೆ ಇನ್ನು ಕರ್ನಾಟಕದಲ್ಲಿ ಒಟ್ಟು ಪ್ರೌಢಶಾಲೆಗಳು 15,159 ಇದ್ದರೆ ದಕ್ಷಿಣ ಕರ್ನಾಟಕದಲ್ಲಿ 9296 ಇವೆ ಉತ್ತರ ಕರ್ನಾಟಕದಲ್ಲಿ ಕೇವಲ5,847 ಪ್ರೌಢಶಾಲೆಗಳಿಗೆ 3449 ಪ್ರೌಢಶಾಲೆಗಳು ಕಡಿಮೆ ಇರುವುದು ನಮಗೆ ಸ್ಪಷ್ಟವಾಗಿ ಗೋಚರವಾಗುತ್ತದೆ ಇನ್ನು ಸರಕಾರಿ ಪದವಿ ಪೂರ್ವ ಕಾಲೇಜುಗಳು, ಕರ್ನಾಟಕದಲ್ಲಿ ಒಟ್ಟು 1236 ಇವೆ ದಕ್ಷಿಣ ಕರ್ನಾಟಕದಲ್ಲಿ 760 ಇದ್ದರೆ ಉತ್ತರ ಕರ್ನಾಟಕದಲ್ಲಿ ಕೇವಲ 476 ಇವೆ ವ್ಯತ್ಯಾಸ 24 ಇರುವುದು ಕಂಡು ಬರುತ್ತದೆ ಸರ್ಕಾರಿ ಪದವಿ ಕಾಲೇಜುಗಳು, ಕರ್ನಾಟಕದಲ್ಲಿ ಒಟ್ಟು 2367 ಇದೆ ದಕ್ಷಿಣ ಕರ್ನಾಟಕದಲ್ಲಿ 1038 ಇದ್ದರೆ ಉತ್ತರ ಕರ್ನಾಟಕದಲ್ಲಿ ಕೇವಲ1059 ಮಾತ್ರ 249 ಕಡಿಮೆ ಇರುವುದು ಗೊತ್ತಾಗುತ್ತದೆ ಸರಕಾರಿ ಕಾನೂನು ಕಾಲೇಜುಗಳು, ಕರ್ನಾಟಕದಲ್ಲಿ 92 ಇವೆ ದಕ್ಷಿಣ ಕರ್ನಾಟಕದಲ್ಲಿ 58 ಇದ್ದರೆ ಉತ್ತರ ಕರ್ನಾಟಕದಲ್ಲಿ 34 ಮಾತ್ರ ಇವೆ 24 ವ್ಯತ್ಯಾಸವಿರುವುದು ಕಾಣುತ್ತದೆ ವೈದ್ಯಕೀಯ ಕಾಲೇಜುಗಳು ಕರ್ನಾಟಕದಲ್ಲಿ ಏಳು 701 ಇವೆ ದಕ್ಷಿಣ ಕರ್ನಾಟಕದಲ್ಲಿ 519 ಇದ್ದರೆ ಉತ್ತರ ಕರ್ನಾಟಕದಲ್ಲಿ ಕೇವಲ 182 ಇವೆ ಸುಮಾರು 337 ವ್ಯತ್ಯಾಸವಿರುವುದು ಕಂಡುಬರುತ್ತದೆ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಕರ್ನಾಟಕದಲ್ಲಿ 199 ಇವೆ ದಕ್ಷಿಣ ಕರ್ನಾಟಕದಲ್ಲಿ 154 ಇದ್ದರೆ ಉತ್ತರ ಕರ್ನಾಟಕದಲ್ಲಿ 45 ಇವೆ 109 ವ್ಯತ್ಯಾಸವಿರುವುದು ಕಂಡುಬರುತ್ತದೆ ಆರೋಗ್ಯ ಘಟಕಗಳು ಕರ್ನಾಟಕದಲ್ಲಿ 40 ಇವೆ 31 ದಕ್ಷಿಣ ಕರ್ನಾಟಕದಲ್ಲಿದ್ದರೆ ಉತ್ತರ ಕರ್ನಾಟಕದಲ್ಲಿ 9 ಇವೆ 22 ವ್ಯತ್ಯಾಸವಿರುವುದು ಕಂಡುಬರುತ್ತದೆ.
ಆರೋಗ್ಯ ಉಪ ಕೇಂದ್ರಗಳು ಒಟ್ಟ8985 ಇವೆ ದಕ್ಷಿಣ ಕರ್ನಾಟಕದಲ್ಲಿ 5385 ಇದ್ದರೆ ಉತ್ತರ ಕರ್ನಾಟಕದಲ್ಲಿ ಕೇವಲ ರೂ.3600 ಮಾತ್ರ ಇವೆ 1,785 ವ್ಯತ್ಯಾಸ ಇರುವುದು ಕಂಡುಬರುತ್ತದೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಒಟ್ಟು ಕರ್ನಾಟಕದಲ್ಲಿ 2372 ಇವೆ ಅದರಲ್ಲಿ ದಕ್ಷಿಣ ಕರ್ನಾಟಕದಲ್ಲಿ 1496 ಇದ್ದರೆ ಉತ್ತರ ಕರ್ನಾಟಕದಲ್ಲಿ 876 ಇವೆ 626 ಕಾಲೇಜುಗಳು ಕಡಿಮೆ ಇರುವುದು ಕಂಡುಬರುತ್ತದೆ ಸಮುದಾಯ ಆರೋಗ್ಯ ಕೇಂದ್ರಗಳು ಒಟ್ಟು ಕರ್ನಾಟಕದಲ್ಲಿ 353 ದಕ್ಷಿಣ ಕರ್ನಾಟಕದಲ್ಲಿ 185 ಇದ್ದರೆ ಉತ್ತರ ಕರ್ನಾಟಕದಲ್ಲಿ 168 ವ್ಯತ್ಯಾಸ 17 ಕಡಿಮೆ ಇವೆ ಆಹಾರ ಮತ್ತು ನಾಗರಿಕ ಪೂರೈಕೆ ಗೋಧಾನಗಳು ದಕ್ಷಿಣ ಕರ್ನಾಟಕದಲ್ಲಿ 208ಇದ್ದರೆ ಉತ್ತರ ಕರ್ನಾಟಕದಲ್ಲಿ 123 ಇವೆ ವ್ಯತ್ಯಾಸ 38 ಕಡಿಮೆ ಇರುವುದು ಕಾಣುತ್ತೇವೆ ವಿವಿಧ ಬ್ಯಾಂಕ್ ಶಾಖೆಗಳು ಕರ್ನಾಟಕದಲ್ಲಿ 8572 ಇದೆ ದಕ್ಷಿಣ ಕರ್ನಾಟಕದಲ್ಲಿ 57 03 ಇದ್ದರೆ ಉತ್ತರ ಕರ್ನಾಟಕದಲ್ಲಿ ಕೇವಲ 2865 ಇವೆ ವ್ಯತ್ಯಾಸ 2842 ಇರುವುದು ಕಂಡು ಬರುತ್ತದೆ ಹೀಗೆ ಅಂಕಿ ಸಂಖ್ಯೆಗಳು ಕೊಡುತ್ತಾ ಹೋದರೆ ವ್ಯತ್ಯಾಸಗಳು ಕಂಡು ಬರುತ್ತಾ ಹೋಗುತ್ತದೆ ಎಲ್ಲ ಕ್ಷೇತ್ರಗಳಲ್ಲೂ ಎಲ್ಲ ರೀತಿಯಲ್ಲೂ ಆರ್ಥಿಕವಾಗಿ ಹಿಂದುಳಿದಿರುವ ಉತ್ತರ ಕರ್ನಾಟಕದ ನಕಾಶ ದೊಡ್ಡದಾಗಿದೆ ಈ ಪ್ರದೇಶಕ್ಕೆ ತಕ್ಕಂತೆ ಅನುಕೂಲತೆಗಳ ಕೊರತೆ ಇದೆ ಇದನ್ನು ನಿವಾರಣೆ ಮಾಡಿ ಅಭಿವೃದ್ಧಿಪಡಿಸಿದರೆ ಸರಿ ಇಲ್ಲದಿದ್ದರೆ ನಮಗೆ ಪ್ರತ್ಯೇಕ ರಾಜ್ಯ ನೀಡಿ ಎಂಬ ಹೋರಾಟ ತೀವ್ರಗೊಳಿಸುವದಾಗಿ ಪತ್ರದಲ್ಲಿ ತಿಳಿಸಿದ್ದಾರೆ
