ಚಾಂಪಿಯನ್ಶಿಪ್ ವಿದ್ಯಾರ್ಥಿಗಳಿಗೆ ಮೆಡಲ್ ಹಾಗೂ ಟ್ರೋಫಿ ವಿತರಣೆ
ಚಾಂಪಿಯನ್ಶಿಪ್ ವಿದ್ಯಾರ್ಥಿಗಳಿಗೆ ಮೆಡಲ್ ಹಾಗೂ ಟ್ರೋಫಿ ವಿತರಣೆ
ಕಲಬುರಗಿ: ಕಲ್ರಿ- ಎನ್ ರಿಯೂ ಅಕಾಡೆಮಿ ಆಫ್ ಇಂಡಿಯನ್ ಕರಾಟೆ ಹಾಗೂ ಅಜಯಕುಮಾರ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ನಗರದ ಚಂದ್ರಶೇಖರ್ ಪಾಟೀಲ್ ಒಳಾಂಗಣ ಕ್ರೀಡಾಂಗಣದಲ್ಲಿ ಓಪನ್ ಚಾಂಪಿಯನ್ಶಿಪ್ ಹಾಗೂ ಕಲರ್ ಬೆಲ್ಟ್ ಎಕ್ಸಾಮ್ ಏರ್ಪಡಿಸಲಾಯಿತು.
ಈ ಸಂದರ್ಭದಲ್ಲಿ ಕಲಬುರಗಿಯ ಉಪ ಮೇಯರ್ ತೃಪ್ತಿ ಶ್ರೀನಿವಾಸ್ ಲಾಖೆ, ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ, ಕರ್ನಾಟಕ ಕಾರ್ಯನಿರತ ಪರ್ತಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯರಾದ ರಾಜಕುಮಾರ ಉದನೂರ, ಬಾಸ್ಕೆಟ್ ಬಾಲ್ ಕೋಚ್ ಪ್ರವೀಣ್ ಪುಣೆ, ಹೆಡ್ ಮಾಸ್ಟರ್ ಸಂಯೋಗೀತಾ ನೀಲೂರ್, ಹೆಡ್ ಮಾಸ್ಟರ್ ಕವಿತಾ ಚಿಲ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ಕಾಶಿನಾಥ್ ಗನ್ನೂರ್, ಬಾಲಾಜಿ ಪೊನಮ್ಚಂದ್ ಮಿಠಾಯಿ ಭಂಡಾರ ವಿಕಾಸ್ ಬಾಟಿ ಹಾಗೂ ಬೆಂಗಳೂರಿನಿAದ ಆಗಮಿಸಿದ ರೆಡ್ ಬೆಲ್ಟ್ ಗ್ರಾಂಡ್ ಮಾಸ್ಟರ್ ಶ್ರೀನಿವಾಸ್ ರವರು ವಿದ್ಯಾರ್ಥಿಗಳ ಪರೀಕ್ಷೆಯನ್ನು ವೀಕ್ಷಿಸಿ ವಿದ್ಯಾರ್ಥಿಗಳಿಗೆ ಕಲರ್ ಬೆಲ್ಟ್ ವಿತರಣೆ ಮಾಡಿದರು, ಹಾಗೂ ಚಾಂಪಿಯನ್ಶಿಪ್ ವಿದ್ಯಾರ್ಥಿಗಳಿಗೆ ಮೆಡಲ್ ಹಾಗೂ ಟ್ರೋಫಿ ವಿತರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಡಿಸ್ಟ್ರಿಕ್ಟ್ ಚೀಫ್ ಕೋಚ್ ರಾಜವರ್ಧನ್ ಜಿ ಚೌಹಾಣ್, ಶ್ರೀಕಾಂತ್ ಪೀಸಾಳ, ಅಂಬರೀಶ್ ಜೋಗಿ, ಪ್ರತಾಪ್ ಸಿಂಗ್ ಪವರ್, ಸುಶ್ಮಿತಾ, ಪ್ರೇಮ್ ರಾಥೋಡ್, ಸಾವಿತ್ರಿ, ಸಿದ್ದು ಸೇರಿದಂತೆ ಕರಾಟೆ ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.
