ಹೃದಯವಂತ ಹೃದಯ ವೈದ್ಯ ಡಾ. ಈರಣ್ಣ ಹಿರಾಪೂರ

ಹೃದಯವಂತ ಹೃದಯ ವೈದ್ಯ ಡಾ. ಈರಣ್ಣ ಹಿರಾಪೂರ
ಪೂರ್ವ ಪ್ರಾಥಮಿಕ ಶಿಕ್ಷಣ ಪಡೆದದ್ದು ಸರ್ಕಾರಿ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯಲ್ಲಿ.ಗ್ರಾಮೀಣ ಪ್ರದೇಶದ ಒಕ್ಕಲುತನ ಕುಟುಂಬ ಅವರದು . ಬಾಲ್ಯದಿಂದಲೇ ಪ್ರತಿಭಾವಂತರಾಗಿದ್ದ ಡಾಕ್ಟರ್ ಈರಣ್ಣ ಅವರು ವಿಜಯಪುರದ ಸೈನಿಕ ಶಾಲೆಗೆ ಆರನೇ ತರಗತಿಗಯ ಅಧ್ಯಯನಕ್ಕೆ ಆಯ್ಕೆಯಾದರು . ಸತತ ಕಠಿಣ ಪರಿಶ್ರಮವೇ ಅವರ ಬಾಳು ಬೆಳಗಲು ಕಾರಣವಾಯಿತು . ಸರ್ಕಾರಿ ಕೋಟಾದಲ್ಲಿ ಎಂಬಿಬಿಎಸ್ ಮತ್ತು ಎಂಡಿ ಕಾರ್ಡಿಯಾಲಜಿಸ್ಟ್ ಪದವಿಗಳನ್ನು ಪಡೆದುಕೊಂಡರು .ನೇತ್ರ ತಜ್ಞರಾದ ಡಾ. ರಾಜೇಶ್ವರಿ ಅವರ ಕೈ ಹಿಡಿದ ತುಂಬ ಜೀವನ ಅವರದು .
ಹಳ್ಳಿ ಹಳ್ಳಿಗಳಲ್ಲಿಯೂ ಹೃದಯ ಆರೋಗ್ಯ ತಪಾಸಣೆಯ ಉಚಿತ ಕ್ಯಾಂಪುಗಳನ್ನು ಮಾಡುವ ಮೂಲಕ ಜನಸೇವೆ ಮಾಡಿದ್ದಾರೆ.ಕಲ್ಯಾಣ ಕರ್ನಾಟಕ ಅಲ್ಲದೆ ಇಡೀ ಕರ್ನಾಟಕದಲ್ಲಿ ಅವರು ಹೆಸರುವಾಸಿಯಾಗಿದ್ದಾರೆ . ದೀನ ದಲಿತರು ಬಡವರು ಆಸ್ಪತ್ರೆಗೆ ಬಂದರೆ ಉಚಿತ ಸೇವೆ ಮಾಡುತ್ತಾರೆ . ಹೃದಯ ಆರೋಗ್ಯದ ಕುರಿತು ಅಂತರಾಷ್ಟ್ರೀಯ ಮಟ್ಟದ ಸಂಶೋಧನಾತ್ಮಕ ಪ್ರಬಂಧ ಮಂಡಿಸಿ ವಿಶ್ವ ಖ್ಯಾತಿ ಪಡೆದಿದ್ದಾರೆ . ಅಹಂಕಾರವಿಲ್ಲದ ಸರಳ ಸಜ್ಜನಿಕೆ ವ್ಯಕ್ತಿತ್ವ ಅವರದು . ಗೆಳೆತನ ಮಾನವೀಯ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುವ ಸ್ವಭಾವ . ಸುಭಾಷ್ ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ನ ಗೆಳೆಯರ ಬಳಗ ಡಾ. ಆನಂದ ಸಿದ್ದಾಮಣಿ , ಶರಣಗೌಡ ಪಾಟೀಲ ಪಾಳ, ಡಾ. ವೀರಶೆಟ್ಟಿ ಗಾರಂಪಳ್ಳಿ , ಸಂತೋಷ ಬೋರೋಟಿ , ಅಂಬರಾಯ ಕೋಣೆ ಅವರು ವೈದ್ಯ ದಿನಾಚರಣೆಯ ಅಂಗವಾಗಿ ಅವರನ್ನು ಗೌರವಿಸಿ ಸನ್ಮಾನಿಸಿದರು .