ಕರ್ನಾಟಕ ಸರ್ಕಾರದ "ದೇವರಾಜ ಅರಸು ಪ್ರಶಸ್ತಿ "ಗೆ ಎಸ್.ಕೆ ಕಾಂತಾ ಆಯ್ಕೆ

ಕರ್ನಾಟಕ ಸರ್ಕಾರದ "ದೇವರಾಜ ಅರಸು ಪ್ರಶಸ್ತಿ "ಗೆ ಎಸ್.ಕೆ ಕಾಂತಾ ಆಯ್ಕೆ

ಕರ್ನಾಟಕ ಸರ್ಕಾರದ ದೇವರಾಜ ಅರಸು ಪ್ರಶಸ್ತಿಗೆ ಎಸ್.ಕೆ ಕಾಂತಾ ಆಯ್ಕೆ

ಕಲಬುರಗಿ : 2024 ನೇ ಸಾಲಿನ. ರಾಜ್ಯಮಟ್ಟದ ಡಿ. ದೇವರಾಜ ಅರಸು ಪ್ರಶಸ್ತಿಗೆ ಸಮಾಜ ಚಿಂತಕ , ಮಾಜಿ ಸಚಿವ ಎಸ್.ಕೆ. ಕಾಂತಾ ಆಯ್ಕೆಯಾಗಿದ್ದಾರೆ. 

ಆಯ್ಕೆ ಸಮಿತಿಯ ಅಧ್ಯಕ್ಷರಾದ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅವರು ಕಾಂತಾ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ ಅವರು ತಿಳಿಸಿದರು. ಪ್ರಶಸ್ತಿಯು 5 ಲಕ್ಷ ರೂ. ನಗದು ಹಾಗೂ ಫಲಕ ಒಳಗೊಂಡಿದ್ದು, ಅಗಸ್ಟ್ 20ರಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ ನಲ್ಲಿ ಅರಸು ಅವರ 109ನೇ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಲಿದ್ದು, ಎಸ್ ಕೆ.ಕಾಂತಾ ಅವರಿಗೆ ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಹೇಳಿದರು.

   ಶಿವರುದ್ರಪ್ಪ ಕರಿಸಿದ್ದಪ್ಪ ಕಾಂತಾ ಅವರು ಕಲಬುರಗಿ ಜಿಲ್ಲೆಯ ಹಾಗರಗುಂಡಿಗಿ ಗ್ರಾಮದ ತಂದೆ ಕರಿಸಿದಪ್ಪ , ತಾಯಿ ಸಿದ್ದಮ್ಮ ದಂಪತಿಗಳ ಉದರದಲ್ಲಿ 1938ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಹುಟ್ಟೂರಿನಲ್ಲಿ ಓದಿ ಅವರು, ಶಿಕ್ಷಣದ ನಂತರ ಶೋಷಿತರು, ಕೂಲಿಕಾರ್ಮಿಕರು, ರೈತರ, ದಮನಿತರು, ಭೂ ರಹಿತರ ಪರವಾಗಿ ಹೋರಾಟಗಳಲ್ಲಿ ಭಾಗವಹಿಸಿದ್ದರು. ಸಂಪೂರ್ಣ ಪಾನ ನಿಷೇಧ, ಮೂಢನಂಬಿಕೆ ನಿಷೇಧ ಚಳವಳಿಗಳನ್ನು ಸಂಘಟಿಸಿದ್ದರು. ನಂತರ ಎಂ.ಎಸ್.ಕೆ.ಮಿಲ್ ಒಂದರಲ್ಲಿ ಕಾರ್ಮಿಕರಾಗಿ ಕೆಲಸಕ್ಕೆ ಸೇರಿದ ಅವರು ಕಾರ್ಮಿಕರ ಪರ ಹೋರಾಟದಲ್ಲಿ ಮುಂದಾಳತ್ವ ಮಹಿಸಿದರು. 1967ರಲ್ಲಿ ಪ್ರಜಾ ಸೋಷಿಯಾಲಿಸ್ಟ್ ಪಕ್ಷದ ಮೂಲಕ ರಾಜಕೀಯಕ್ಕೆ ಬಂದರು. 1983 ರಲ್ಲಿ ಜನತಾ ಪಕ್ಷದಿಂದ ಕಲಬುರಗಿ ಶಾಸಕರಾಗಿ ಆಯ್ಕೆಗೊಂಡು , 1986ರಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿ 18 ತಿಂಗಳು ಕಾರ್ಯ ನಿರ್ವಹಿಸಿದರು. ಪ್ರಸ್ತುತವು ಬಡವರ ದೀನರ, ಅನ್ಯಾಯದ ವಿರುದ್ಧ ಹೋರಾಟಗಾರರಾಗಿ ಜನಸೇವೆ ಮಾಡುತ್ತಿದ್ದಾರೆ.