ಕಲಬುರಗಿ: ಯುವ ಕಾಂಗ್ರೆಸ್ ವತಿಯಿಂದ ಅನ್ನದಾಸೋಹ
ಕಲಬುರಗಿ: ಯುವ ಕಾಂಗ್ರೆಸ್ ವತಿಯಿಂದ ಅನ್ನದಾಸೋಹ
ಕಲಬುರಗಿ ನಗರದ ರಾಣೇಶ ಪಿರ ದರ್ಗ ರಸ್ತೆಯಲ್ಲಿರುವ ಮಾರ್ಗದರ್ಶಿ ಚಾರಿಟೇಬಲ್ ಟ್ರಸ್ಟ್‌ನಲ್ಲಿ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್ ಗೌಡ ಅವರ ಜನ್ಮದಿನದ ಅಂಗವಾಗಿ ಸಮಾಜ ಸೇವಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ಶಕೀಲ್ ಸರಡಗಿ ಅವರ ನೇತೃತ್ವದಲ್ಲಿ ಕೇಕ್ ಕತ್ತರಿಸಿ ಜನ್ಮದಿನವನ್ನು ಆಚರಿಸಲಾಯಿತಲ್ಲದೆ, ಟ್ರಸ್ಟ್‌ನಲ್ಲಿ ನೆಲೆಸಿರುವ ತಾಯಂದಿರಿಗೆ ಅನ್ನದಾಸೋಹ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಮಂಜುನಾಥ್ ಗೌಡ ಅವರು ಯುವಜನತೆಯ ಆಶಾಕಿರಣವಾಗಿದ್ದು, ಸಾಮಾಜಿಕ ನ್ಯಾಯ ಹಾಗೂ ಸೇವಾ ಮನೋಭಾವವನ್ನು ಮುಂದುವರೆಸುತ್ತಿರುವ ನಾಯಕರೆಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಶಿವಾನಂದ ಹೋನಗುಂಟಿ, ಈರಣ್ಣ ಪಾಟೀಲ್ ಝಳಕಿ, ಪರಶುರಾಮ ನಾಟೀಕಾರ, ಕಾರ್ತಿಕ ನಾಟೀಕಾರ, ಉಮೇರ್ ಜುನೈದಿ, ರಾಮಪ್ರಸಾದ ಕಾಂಬಳೆ, ಮೊಹಮ್ಮದ್ ಅಸ್ವಾನ್, ಗಣೇಶ್ ನಾಗನಳ್ಳಿ, ಸಂಘಪಾಲ್ ಕಾಂಬಳೆ, ಎಜಾಜ್ ನಿಂಬಾಳಕರ್, ಅಸ್ಲಾಂ ಸಿಂದಗಿ, ಕಾರ್ತಿಕ ಹೊಸಮನಿ, ಫಾರೂಕ್ ಪಟೇಲ್ ಮುದಬಾಲ್, ಪ್ರೇಮ್, ಶ್ರೀಶೈಲ ಚೌಧರಿ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.
