ನೀಲೂರಗ್ರಾಮದಲ್ಲಿ ಮೂಲಭೂತ ಸೌಲಭ್ಯಕ್ಕಾಗಿ ರಸ್ತೆ ತಡೆಹಿಡಿದು ಹೋರಾಟ
ನೀಲೂರಗ್ರಾಮದಲ್ಲಿ ಮೂಲಭೂತ ಸೌಲಭ್ಯಕ್ಕಾಗಿ ರಸ್ತೆ ತಡೆಹಿಡಿದು ಹೋರಾಟ
ಕಲಬುರಗಿ : ಇಂದು ನೀಲೂರ ಗ್ರಾಮದ ಶಿವಲಿಂಗೇಶ್ವ ದೇವಸ್ಥಾನದಿಂದ ಬಸ್ ತಗ್ಗುದಾಣದ ವರೆಗೆ ಭಾರತ್ ಕಮ್ಯುನಿಸ್ಟ್ ಪಕ್ಷದ ಪದಾಧಿಕಾರಿಗಳಿಂದ ಶಾಂತಿಯುತ ಹೋರಾಟ ನಡೆಸಿದರು.
ನಂತರ ಹೋರಾಟಗಾರ ಎಂ.ಬಿ. ಸಜ್ಜನ್ ಮಾತನಾಡುತ್ತ ನೀಲೂರ ಬಸ್ಸ ನಿಲ್ದಾಣದಲ್ಲಿ ಮಳೆ ಬಂದಾಗ ಕೆಸರಿನ ಗೂಡಾಗಿರುತ್ತದೆ. ಮತ್ತು ನೀಲೂರ ಕ್ರಾಸ್‌ನಿಂದ ಮೆಳಕುಂದಾ ಕ್ರಾಸ್‌ವರೆಗೆ ರಸ್ತೆ ಕೂಡಾ ಹದಗೆಟ್ಟಿದೆ. ಇದರಿಂದ ಸುಕ್ಷೇತ್ರ ನೀಲೂರಿಗೆ ಬರುವ ಭಕ್ತಾದಿಗಳಿಗೆ ಹಾಗೂ ನೀಲೂರು ಗ್ರಾಮಸ್ತರಿಗೆ ತುಂಬಾ ತೊಂದರೆಯಾಗುತ್ತಿದೆ. ಶಾಸಕರು ಇತ್ತ ಕಡೆ ಗಮನ ಹರಿಸಿ ರಸ್ತೆ ನಿರ್ಮಾಣ ಕಾರ್ಯ ಆದಷ್ಟು ಬೇಗ ಕೈಗೆತ್ತಿಕೊಳ್ಳಬೇಕು ಎಂದರು
ವಿಶೇಷ ಪಟ್ಟಣ ಕ್ರಾಸ್ ದಿಂದ ಗಣಗಾಪೂರಕ್ಕೆ ಹೋಗುವ ಮುಖ್ಯರಸ್ತೆಯ ಅಲ್ಲಮಪ್ರಭು ಪಾಟೀಲ್, ಬಿ.ಆರ್ ಪಾಟೀಲ,ಎಮ್.ವಾಯ್ ಪಾಟೀಲ ಮೂವರು ಶಾಸಕರಿಗೆ ಸಂಬಂಧಪಟ್ಟಿರುವದರಿಂದ , ಈ ರಸ್ತೆಗೆ ಯಾರು ಗಮನ ಹರಿಸುತ್ತಿಲ್ಲ
ವಿಪರ್ಯಾಸ ಏನೆಂದರೆ ಅಲ್ಲಲ್ಲಿ ತಗ್ಗು ಗುಂಡಿ ಬಿದ್ದಿದ್ದು ಅದರಲ್ಲಿ ದ್ವಿಚಕ್ರ ವಾಹನದ ಸವಾರರು ಬಿದ್ದು ಅಪಾಯ ವಾಗಿರುತ್ತದೆ, ತಕ್ಷಣವೇ ಸಮಸ್ಯ ಬಗೆಹರಿಸದೆ ಹೋದರೆ.
ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) ನೀಲೂರ ಶಾಖೆಯ ಪದಾಧಿಕಾರಿಗಳು ತಿಳಿಸಿದರು,ಪ್ರಕಾಶ್ ಬನ್ನಿಗಿಡ, ಕಲ್ಯಣಿ ಸಿಂಗೆ, ಮಹಾದೇವ ಸಿಂಗೆ, ಕಲ್ಯಾಣಿ ಕುಕಮಮಳಿ,ನನ್ನ ಮುಜಾವರ್, ಶರಣು ಹಾಳಮಳಿ,ಇದ್ದರು