ಆರ್‌ಸಿಬಿ ವಿಜಯ ಸಂಭ್ರಮದಲ್ಲಿ ಘಟಿಸಿದ ಅನಾಹುತ: ಬಲಿಯಾದ ಅಮಾಯಕರು

ಆರ್‌ಸಿಬಿ ವಿಜಯ ಸಂಭ್ರಮದಲ್ಲಿ ಘಟಿಸಿದ ಅನಾಹುತ:  ಬಲಿಯಾದ ಅಮಾಯಕರು

ಆರ್‌ಸಿಬಿ ವಿಜಯ ಸಂಭ್ರಮದಲ್ಲಿ ಘಟಿಸಿದ ಅನಾಹುತ: ಬಲಿಯಾದ ಅಮಾಯಕರು

ಬೆಂಗಳೂರು:ಐಪಿಎಲ್ ಟೂರ್ನಿಯಲ್ಲಿ ಐತಿಹಾಸಿಕವಾಗಿ ಚಾಂಪಿಯನ್ ಪಟ್ಟ ಗೆದ್ದಿರುವ ಬೆಂಗಳೂರು ಆರ್‌ಸಿಬಿ ತಂಡವನ್ನು ಅಭಿನಂದನೆ ಸಲ್ಲಿಸಿ ಸಂಭ್ರಮಿಸಬೇಕಾದ ಸಂದರ್ಭದಲ್ಲಿ, , ಮೂರು ಯುವಕರು ಕೋಲಾರದ ಯುವತಿ ಸಹನಾ ಮಾಯಕರ  ಸೇರಿ 10 ಜನರ ಬಲಿಯನ್ನು ತೆಗೆದುಕೊಂಡಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದರು 

ಫೈನಲ್ ಪಂದ್ಯ ನಿನ್ನೆ ರಾತ್ರಿ ಮುಗಿದ ಕೂಡಲೇ, ಯಾವುದೇ ಪೂರ್ವಸಿದ್ಧತೆ ಇಲ್ಲದೇ, ಯೋಜನೆಯಿಲ್ಲದೇ, ಪೊಲೀಸ್ ಇಲಾಖೆಗೆ ಸೂಕ್ತ ಸಮಯವನ್ನೂ ನೀಡದೇ ಸರ್ಕಾರದಿಂದ ಆಯೋಜಿಸಲಾದ ಅಭಿನಂದನಾ ಸಮಾರಂಭ ದುರ್ಘಟನೆಗೆ ಕಾರಣವಾಗಿದೆ. ನಿನ್ನೆ ರಾತ್ರಿ ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳುವಲ್ಲಿ ನಿರತರಾಗಿದ್ದ ಪೊಲೀಸರನ್ನ ಇಂದೇ ಬೆಳಗ್ಗೆ ಮತ್ತೊಂದು ಭಾರೀ ಭದ್ರತಾ ಕರ್ತವ್ಯಕ್ಕೆ ಒತ್ತಾಯಿಸಿ ಕಳುಹಿಸುವಲ್ಲಿ ಸರ್ಕಾರದ ದುರ್ವಹಾಚಾರ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಹೇಳಿದರು 

ಆರ್‌ಸಿಬಿ ತಂಡದ ವಿಜಯ ಸಂಭ್ರಮದಲ್ಲಿ ಪಾಲ್ಗೊಳ್ಳಲು ಸಾವಿರಾರು ಅಭಿಮಾನಿಗಳು ಜಮಾಯಿಸುವ ಸಾಧ್ಯತೆ ಇದ್ದದ್ದು ಸಹಜ. ಈ ಹಿಂದಿನ ಅನುಭವಗಳಿಂದಲೂ ಜನಸಂದಣಿಯ ತೀವ್ರತೆಯನ್ನು ಊಹಿಸಬಹುದಾಗಿತ್ತು. ಆದರೆ ಅದನ್ನು ಸರಿಯಾಗಿ ನಿರ್ವಹಿಸದೇ ಸರ್ಕಾರ ತೋರಿದ ನಿರ್ಲಕ್ಷ್ಯವೇ ಅನಾಹುತದ ಮೂಲ ಕಾರಣವಾಗಿದೆ.

ಇಂತಹ ಕಾರ್ಯಕ್ರಮವನ್ನು ಶನಿವಾರ ಅಥವಾ ಭಾನುವಾರದಂತಹ ವಾರಾಂತ್ಯದಲ್ಲಿ, ಸಮರ್ಪಕ ನಿರ್ವಹಣಾ ಕ್ರಮಗಳೊಂದಿಗೆ ನಡೆಸಬಹುದಿತ್ತು ಎಂಬ ಅಭಿಪ್ರಾಯ ಮುಂದಾಗುತ್ತಿದೆ.

ಈ ದುರ್ಘಟನೆಯ ಸಾವುಗಳಿಗೆ ಸಂಪೂರ್ಣವಾಗಿ ರಾಜ್ಯ ಸರ್ಕಾರವೇ ಹೊಣೆವಹಿಸಬೇಕು. ಮೃತರ ಕುಟುಂಬಗಳಿಗೆ ಕನಿಷ್ಠ 25 ಲಕ್ಷ ಪರಿಹಾರ ನೀಡಬೇಕು ಹಾಗೂ ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನೂ ಸರ್ಕಾರವೇ ಭರಿಸಬೇಕು.

ಇಂತಹ ದುಃಖದ ಸಂದರ್ಭದಲ್ಲಿ ಮೃತ ಕುಟುಂಬಗಳ ನೋವಿನಲ್ಲಿ ಇಡೀ ರಾಜ್ಯವೇ ತಮ್ಮೊಂದಿಗೆ ನಿಂತಿದೆ. ಮುಂದೆ ಇಂತಹ ಅನಾಹುತಗಳು ಸಂಭವಿಸದಂತೆ, ಸರ್ಕಾರ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಹೇಳಿದರು.