ಸೋಯಾಬೀನ,ಖರೀದ ದಿನಾಂಕವನ್ನು ವಿಸ್ತರಿಸಲು ಡಿ ಸಿಗೆ ಮನವಿ
ಸೋಯಾಬೀನ,ಖರೀದ ದಿನಾಂಕವನ್ನು ವಿಸ್ತರಿಸಲು ಡಿ ಸಿಗೆ ಮನವಿ
ಕಮಲನಗರ: ಇಲ್ಲಿವರೆಗೆ ರೈತರು ಬೆಳೆಸಿರುವ ಸೋಯಾಬಿನ್ ಪಿ.ಕೆ.ಪಿ.ಎಸ್ ಮುಖಾಂತರ ಖರೀದಿ ಮಾಡಲಾಗಿದೆ.ಆದರೆ ಶೇ40ರಷ್ಟು ಮಾತ್ರ ಆ ಕೆಲಸವಾಗಿದೆ,ಉಳಿದ ಶೇ 60ರಷ್ಟು ನೊಂದಣಿ ಮಾಡಿದ ರೈತರ ಸೋಯಾಬೀನ ಖರೀದಿ ಮಾಡುವುದು ಬಾಕಿ ಉಳಿದಿದೆ.ಆದ್ದಕಾರಣ ಸೊಯಾಬೀನ, ಖರೀದಿ ದಿನಾಂಕ ಜನವರಿ ತಿಂಗಳ ವರೆಗೆ ವಿಸ್ತರಣೆ ಮಾಡಬೇಕು. ಇಲ್ಲಿವರೆಗೆ ಸೊಯಾಬೀನ ನೊಂದಣಿ ಮಾಡಿದ ರೈತರ ಮನವಿ ಮೆರೆಗೆ ತಾವುಗಳು ದಯಮಾಡಿ ದಿನಾಂಕವನ್ನು ವಿಸ್ತರಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಬರೆದ ಮನವಿ ಪತ್ರದಲ್ಲಿ ಗುರುನಾಥ ವಟಗೆ ಪಿಕೆಪಿಎಸ್ ಮುಧೋಳ (ಬಿ) ಕಮಲನಗರ ಅವರು ತಿಳಿಸಿದ್ದಾರೆ.
ಮಾನ್ಯಜಿಲ್ಲಾಧಿಕಾರಿಗಳು | ಈ ಸಂಬಂಧ ಮುತವರ್ಜಿವಹಿಸಿ ದಿನಾಂಕವನ್ನು ವಿಸ್ತರಣೆ ಮಾಡಿದರೆ ಜಿಲ್ಲೆಯ ಸಾವಿರಾರು ರೈತರಿಗೆ ನ್ಯಾಯ ಕೊಡಿಸಿ ಅವರ ಕಣ್ಣೀರು ಒರೆಸಿದಂತೆ ಆಗುತ್ತದೆ ಎಂದು ಜಿಲ್ಲೆಯ ರೈತರ ತಮ್ಮ ಅಳಲನ್ನು ತೋರಿ ಕೊಂಡಿದ್ದಾರೆ.
ಸಕಾಲಕ್ಕೆ ಖರೀದಿ ಕಾರ್ಯಯಾಕೆ ಮುಗದ್ದಿಲ್ಲಾ ವಿಳಂಬಕ್ಕೆ ಖರೀದಿ ಕೇಂದ್ರಕ್ಕೆ ಸಕಾಲದಲ್ಲಿ ಖಾಲಿ ಚಿಲ, ಬಾರ-ಕೋಡ, ಹಾಗೂ ಲಾರಿ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿವರೆಗೆ ಖರೀದಿ ಮಾಡಿಕೊಳ್ಳಲು ಸಾಧ್ಯ ವಾಗಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದ್ದೆ ಇರುವುದೇ ಇಂದು ರೈತರಿಗೆ ದೊಡ್ಡ ಸಮಸ್ಯೆ ಯಾಗಿದೆ.
