ಪತ್ರಿಕಾ ರಂಗಕ್ಕೆ ನ್ಯಾಯಾಂಗ, ಕಾರ್ಯಂಗ,ಶಾಸಕಾಂಗದಷ್ಟೇ ಮಹತ್ವ : ಸಚಿವ ಶರಣಪ್ರಕಾಶ ಪಾಟೀಲ
ಪತ್ರಿಕಾ ರಂಗಕ್ಕೆ ನ್ಯಾಯಾಂಗ, ಕಾರ್ಯಂಗ,ಶಾಸಕಾಂಗದಷ್ಟೇ ಮಹತ್ವ : ಸಚಿವ ಶರಣಪ್ರಕಾಶ ಪಾಟೀಲ
ಕಲ್ಯಾಣ ಕಹಳೆ ವಾರ್ತೆ
ಕಲಬುರಗಿ : ನ್ಯಾಯಾಂಗ, ಕಾರ್ಯಂಗ ಹಾಗೂ ಶಾಸಕಾಂಗದ ಜತೆಗೆ ಪತ್ರಿಕಾ ರಂಗವೂ ಇಂದು ಅತ್ಯಂತ ಮಹತ್ವ ಪಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಡುವ ಬಹುತೇಕ ಸುದ್ದಿಗಳು ಸತ್ಯದಿಂದ ದೂರವಾಗಿದ್ದರೆ, ಮುದ್ರಣ ಮಾಧ್ಯಮದಲ್ಲಿ ಸತ್ಯಾಧಾರಿತ, ಜನಪರ ಸುದ್ದಿಗಳೇ ಪ್ರಕಟವಾಗುತ್ತವೆ ಎಂದು ಸಚಿವ ಶರಣಪ್ರಕಾಶ ಪಾಟೀಲ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಪರ ಸುದ್ದಿಗಳು ಪ್ರಕಟವಾಗಬೇಕು, ಸುಳ್ಳು ಸುದ್ದಿಗಳಿಗೆ ಅವಕಾಶ ನೀಡಬಾರದು. ಸಂವಿಧಾನದ ಆಶಯದ ಅಡಿಯಲ್ಲಿ ಕಾರ್ಯನಿರ್ವಹಿಸಿದರೆ ಮಾತ್ರ ಸ್ವಾತಂತ್ರ್ಯ ಮತ್ತು ಸಮಾನತೆ ಸಾಧ್ಯವಾಗುತ್ತದೆ. ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಸಚಿವರು ಪತ್ರಕರ್ತರ ಜತೆಗೆ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ರಾಜ್ಯದ ಪತ್ರಕರ್ತರ ಕಲ್ಯಾಣಕ್ಕಾಗಿ ಸಂಘ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ವಿತರಣೆ ಮಹತ್ವದ ಯೋಜನೆಯಾಗಿದ್ದು, ಅದರಲ್ಲಿ ಕಂಡುಬರುವ ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಲು ಪ್ರಯತ್ನಿಸಲಾಗುತ್ತಿದೆ. ಆರೋಗ್ಯ ಧನ ಸಹಾಯ ಯೋಜನೆಯಲ್ಲಿ ಉತ್ತಮ ಪ್ರಗತಿ ಕಂಡುಬಂದಿದ್ದು, ಮಾನ್ಯತೆ ಪಡೆದ ಪತ್ರಕರ್ತರಿಗೆ ಮಾತ್ರ ಎಂಬ ನಿಯಮವನ್ನು ತೆರವುಗೊಳಿಸಿ ಎಲ್ಲ ಪತ್ರಕರ್ತರಿಗೂ ಧನ ಸಹಾಯ ಸಿಗುವಂತೆ ಸಂಘ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
ಚುನಾವಣೆ ಸೋಲು–ಗೆಲುವು ಸಹಜ. ಎಲ್ಲರೂ ಒಗ್ಗಟ್ಟಾಗಿ ಪತ್ರಕರ್ತರ ಕಲ್ಯಾಣ ಹಾಗೂ ಸಮಾಜ ಹಿತಕ್ಕಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ನಗರ ಪೊಲೀಸ್ ಆಯುಕ್ತ ಶರಣಪ್ಪ ಢಗೆ ಅವರು ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಅಡ್ಡೂರು, ಜಿಸಿ ಲೋಕೇಶ್, ಭವಾನಿ ಸಿಂಗ್ ಠಾಕೂರ್, ಸಂಯುಕ್ತ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕ ಪ್ರಭಾಕರ್ ಜೋಶಿ, ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕ ದೇವಯ್ಯ ಗುತ್ತೇದಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರಾಜಕುಮಾರ ಉದನೂರ ನಿರೂಪಿಸಿದರು. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಎಲ್ಲಾ ಪತ್ರಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶರಣಗೌಡ ಪಾಟೀಲ ಪಾಳಾ, ಬಿ.ಎಚ್. ನಿರಗುಡಿ, ಸಂಗಮನಾಥ ರೇವತಗಾಂವ , ಪಬ್ಲಿಕ್ ಟಿವಿ ಪ್ರವೀಣ ರೆಡ್ಡಿ, ಮಾಲಗಾರ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ), ಜಿಲ್ಲಾ ಘಟಕ, ಕಲಬುರಗಿ. ಪದಾಧಿಕಾರಿಗಳು :
ಅಧ್ಯಕ್ಷರು,ಬಾಬುರಾವ ಯಡ್ರಾಮಿ,
ಉಪಾಧ್ಯಕ್ಷರು ಅರುಣಕುಮಾರ ಕದಂ,ಡಾ. ಶಿವರಂಜನ್ ಸತ್ಯಂಪೇಟೆ,ಹಣಮಂತರಾವ ಭೈರಾಮಡಗಿ,ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಫೀರೋಜಾಬಾದ,
ಕಾರ್ಯದರ್ಶಿಗಳು ಅನೀಲ ಸ್ವಾಮಿ,ವಾಸುದೇವ ಚವ್ಹಾಣ, ಬಾಬುರಾವ ಕೋಬಾಳ
ಖಜಾಂಚಿ ಅಶೋಕ ಹೆಚ್. ಕಪನೂರ
ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜಕುಮಾರ ಉದನೂರ,
ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಅಕ್ರಂ ಪಾಶಾ ಮೋಮಿನ್,ಶರಣಬಸಪ್ಪ ಜಿಡಗಾ,ರಾಚಪ್ಪಾ ಜಂಬಗಿ,ವಿಜಯಕುಮಾರ ಗಾಜರೆ,ಸೂರ್ಯಕಾಂತ ಜಮಾದಾರ,ಶಕೀಲ್ ಚೌಧರಿ,ಸುಧೀರ ಬಿರಾದಾರ,ಡಾ. ತೀರ್ಥಕುಮಾರ ಬೆಳಕೋಟಾ,ಗುರುರಾಜ ಕುಲಕರ್ಣಿ,ವಿಜಯಕುಮಾರ ಜಿಡಗಿ,ನಾಗರಾಜ ಗದ್ದಿ ಕಾಳಗಿ,ವೀರೇಶ ಎಸ್. ಮಾಲಗಾರ,ಅವಿನಾಶ ಕೊಳ್ಳುರ,ವಿಜಯಲಕ್ಷ್ಮೀ ಎನ್,ಸಂಜೀವಕುಮಾರ ಕಾಂಬಳೆ, ಇವರಿಗೆ ಗೌರವಿಸಿ ಸನ್ಮಾನಿಸಿದರು.
