ಡಿ.ಶಿವಲಿಂಗಪ್ಪಾ ( ಪತ್ರಿಕಾ ರಂಗದ ಪ್ರಜ್ವಲಿತ ಜ್ಯೋತಿ)

ಡಿ.ಶಿವಲಿಂಗಪ್ಪಾ ( ಪತ್ರಿಕಾ ರಂಗದ ಪ್ರಜ್ವಲಿತ ಜ್ಯೋತಿ)

ಪತ್ರಿಕಾ ರಂಗದ ಪ್ರಜ್ವಲಿತ ಜ್ಯೋತಿ

ಡಿ.ಶಿವಲಿಂಗಪ್ಪಾ ರವರು ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಮಹಾರಾಷ್ಟ್ರ ಗಡಿ ಹಾಗೂ ಬಿಜಾಪೂರ ಜಿಲ್ಲೆಯೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಅಫಜಲಪೂರ ತಾಲೂಕಿನಲ್ಲಿ ಬರುವ ಗೌರ (ಬಿ) ಗ್ರಾಮದಲ್ಲಿ ಮಧ್ಯಮ ರೈತ ಕುಟುಂಬದ ದಂಪತಿಗಳಾದ ಶ್ರೀ ಶಾಂತಪ್ಪ ಹಾಗೂ ಹುಸೆನಮ್ಮ ಅವರ ಉದರದಲ್ಲಿ ಜುಲೈ 30, 1964 ರಲ್ಲಿ ಪ್ರಜ್ವಲಿಸುವ ಜ್ಞಾನದ ಜ್ಯೋತಿಯಾಗಿ ಜನಿಸಿದರು. ಶ್ರೀ ಶಿವಲಿಂಗಪ್ಪ ದೊಡ್ಡಮನಿಯವರು ಶಾಂತಪ್ಪ ದಂಪತಿಗಳಿಗೆ ಐದು ಜನ ಹೆಣ್ಣುಮಕ್ಕಳು. ನಾಲ್ಕುಜನ ಗಂಡು ಮಕ್ಕಳಲ್ಲಿ ಪಂಚಮ ಪುತ್ರನಾಗಿ ಜನಿಸಿದವರು ಶ್ರೀ ಶಿವಲಿಂಗಪ್ಪ ದೊಡ್ಡಮನಿಯವರು.

ಶ್ರೀ ಶಿವಲಿಂಗಪ್ಪ ದೊಡ್ಡಮನಿಯವರು ತಮ್ಮ ಬಾಲ್ಯವನ್ನು ತಮ್ಮ ಹುಟ್ಟೂರಾದ

ಗೌರ (ಬಿ) ಗ್ರಾಮದಲ್ಲಿ ಕಳೆದವರು. ಹಳ್ಳಿಗಾಡಿನ ಅಪ್ಪಟ ಗ್ರಾಮೀಣ ಆಟಗಳನ್ನು ಆಡುತ್ತಾ, ಗೆಳೆಯರೊಂದಿಗೆ ಮೋಜು-ಮಸ್ತಿ ಮಾಡುತ್ತಾ ಬೆಳೆದರು. ಒಂಬತ್ತು ಜನ ಸಹೋದರ-ಸಹೋದರಿಯರ ಮಧ್ಯದಲ್ಲಿ ಅತೀ ಮುದ್ದಾದ ಮಗುವಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದವರು.

ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಸ್ವಗ್ರಾಮ ಗೌರ (ಬಿ)ಯಲ್ಲಿ ಪೂರ್ಣಗೊಳಿಸಿ ಪ್ರೌಢ ಶಿಕ್ಷಣವನ್ನು ಅಫಜಲಪುರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮುಗಿಸಿದರು. ಮುಂದೆ ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಕಲಬುರಗಿ ನಗರದ ಶರಣಬಸವೇಶ್ವರ ಸಂಸ್ಥಾನದಲ್ಲಿ ಪ್ರವೇಶಾತಿ ಪಡೆದು ಅಂಗ್ಲ ಭಾಷೆಯನ್ನು ಐಚ್ಛಿಕ

ವಿಷಯವನ್ನಾಗಿ ತೆಗೆದುಕೊಂಡು ತಮ್ಮ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದರು.

ಡಾ॥ ಬಾಬಾ ಸಾಹೇಬ ಅಂಬೇಡ್ಕರ್, ಬಸವಣ್ಣ, ರಾಮ ಮನೋಹರ ಲೋಹಿಯಾ,

ಮಹಾತ್ಮಗಾಂಧಿ, ನೆಲ್ಸನ್ ಮಂಡೆಲಾ, ಪೆರಿಯಾರ್ ರಂತಹ ಮಹಾನ್ ದಾರ್ಶನಿಕರ

ಚಿಂತನೆಗಳ ಪ್ರಭಾವಕ್ಕೆ ಒಳಗಾಗಿದ್ದ ಶ್ರೀ ಶಿವಲಿಂಗಪ್ಪನವರ ತಂದೆ ಶ್ರೀ ಶಾಂತಪ್ಪ ನವರು ಅಂದಿನ ಕಾಳದಲ್ಲಿ ತಮ್ಮ ಎಲ್ಲ ಮಕ್ಕಳಿಗೂ ಸ್ನಾತಕೋತ್ತರ ಪದವಿ ಕೊಡಿಸಿದರು.

ಅದರಂತೆಯೇ ಶ್ರೀ ಶಿವಲಿಂಗಪ್ಪ ರಾಷ್ಟ್ರ ರಾಜ್ಯದ ಸೊಲ್ಲಾಪುರದಲ್ಲಿ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಅಗ್ರ ಶ್ರೇಣಿಯಲ್ಲಿ ಪಾಸಾಗುವುದರ ಮೂಲಕ ಪೂರ್ಣಗೊಳಿಸಿದರು.

ಕೌಟುಂಬಿಕ ಜೀವನ :

ಶ್ರೀ ಶಿವಲಿಂಗಪ್ಪ ದೊಡ್ಡಮನಿಯವರು ಮುಂದೆ ತಕ್ಕಮತಿ, ಸುರದ್ರೂಪಿ, ಸುಸಂಕೃತೆಯಾದ ಶ್ರೀಮತಿ ಸುವರ್ಣಾರವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗಳು ಬಾಳಿನ ಪ್ರತಿ ಹೆಜ್ಜೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ಸಂಸಾರ ನೌಕೆಯನ್ನು ಸಾಗಿಸುತ್ತಾ, ಕೀರ್ತಿಗೊಬ್ಬ, ಆರತಿಗೊಬ್ಬಳು ಎಂಬಂತೆ ಎರಡು ಪುತ್ರರತ್ನರನ್ನು ಪಡೆದರು. ಪುತ್ರ ಕು.ಆಯುಷ, ಪುತ್ರಿ ಕು.ಆದೀತಿಯವರು ಸಹ ತಂದೆ-ತಾಯಿಯರ ಮಾರ್ಗದರ್ಶನದಲ್ಲಿ ಸುಸಂಕೃತರಾಗಿ ಡಾ॥ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 'ಆಚಾರ, ವಿಚಾರ ಹಾಗೂ ಪ್ರಚಾರ' ದಿಂದ ದೇಶ ಸದೃಢಗೊಳಿಸುವ ಅಸಾಯಕರಿಗೆ ನ್ಯಾಯ ಒದಗಿಸುವಲ್ಲಿ ಚಿಂತನೆಗೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು :

1) ಕಲಬುರಗಿ ಕರ್ನಾಟಕ ಸಂಧ್ಯಾಕಾಲ ಪ್ರಾದೇಶಿಕ ಕನ್ನಡ ಸಂಜೆ ದಿನಪತ್ರಿಕೆ ಸಂಪಾದಕ ಹಾಗೂ ಪ್ರಕಾಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2) ಇಂಡಿಯನ್ ಲಾಂಗ್ರೇಜ್ ನ್ಯೂಜ್ ಪೇಪರ್ ಅಸೋಸಿಯೇಷನ್‌ನ್ನಿನ ರಾಜ್ಯ ಸಹಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅದಲ್ಲದೆ ಸ್ಟೇಟ್ ಅಕ್ರಾಡಿಯೇಷನ್ ಕಮಿಟಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೆಂಗಳೂರು ಇದರ ಮಾಜಿ ಸದಸ್ಯರಾಗಿದ್ದಾರೆ.

ದಣಿವಿಲ್ಲದೇ ದುಡಿದು ಸಮಾಜದಲ್ಲಿ ದೊಡ್ಡ ಹೆಸರು ಮಾಡಿದ ಈ ಮಾನವೀಯತೆಯ ಮೂರ್ತಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ.

ಪ್ರಶಸ್ತಿ-ಪುರಸ್ಕಾರಗಳು :

1) ಕರ್ನಾಟಕ ಮಾಧ್ಯಮ ಅಕಾಡೆಮಿಯ 'ಆಂದೋಲನ ಪ್ರಶಸ್ತಿ'

2) 2009ರಲ್ಲಿ ಪತ್ರಿಕೋದ್ಯಮದ ಸೇವೆ ಪರಿಗಣಿಸಿ ಬಸವ ಸಮಿತಿಯಿಂದ 'ಬಸವ ಪುರಸ್ಕಾರ'

3) ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ 'ಶತಮಾನೋತ್ಸವ ಪುರಸ್ಕಾರ'

4) ಕನ್ನಡ-ಮರಾಠಿ ಭಾಷಾ ಬಾಂಧವ್ಯ ಪುರಸ್ಕಾರ ಮಹಾರಾಷ್ಟ್ರದ ಕಾರ್ಯನಿರತರ ಪತ್ರಕರ್ತರ ಸಂಘ ಮುಂಬಯಿ ಅವರಿಂದ

5) 2016-17ರಲ್ಲಿ ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆಗಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ/

6) ನವದೆಹಲಿಯ ಭಾರತೀಯ ಭಾಷಾ ಪತ್ರಿಕೆಗಳ ಸಂಘಟನೆಯಿಂದ 14-15ನೇ ಸಾಲಿನಲ್ಲಿ ಕರ್ನಾಟಕ ಅತ್ಯುತ್ತಮ ಪ್ರಾದೇಶಿಕ ಭಾಷಾ ಪತ್ರಿಕೆ ಕೊಡಮಾಡುವ ಪ್ರಶಸ್ತಿ.

7) 2018-19 ರಲ್ಲಿ ಪಾಳಾದ, ಶ್ರೀ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ವತಿಯಿಂದ ಮಾಧ್ಯಮ ಕ್ಷೇತ್ರದಲ್ಲಿ ಗಣನಿಯ ಸೇವೆ ಸಲ್ಲಿಸಿದ್ದಕ್ಕಾಗಿ ರಾಜ್ಯ ಮಟ್ಟದ 'ಗೌಡ ಪ್ರಶಸ್ತಿ'

8) 2024_25 ಡಿ.ಶಿವಲಿಂಗಪ್ಪ ಮೊಹೊರೆ ಹನುಮಂತರಾಯ್ ಪತ್ರಿಕೋದ್ಯಮ ಪ್ರಶಸ್ತಿ 

ಇದಲ್ಲದೇ ಹಲವಾರು ಧಾರ್ಮಿಕ ಸಂಘ ಸಂಸ್ಥೆಗಳು, ಸಂಘಟನೆಗಳು ಹಲವಾರು ರಾಜ್ಯ, ಪ್ರಾದೇಶಿಕ ಸಂಸ್ಥೆಗಳಿಂದ ನೂರಾರು ಪ್ರಶಸ್ತಿ, ಫಲಕಗಳು ಇವರ ಹಿರಿಮೆಗೆ ಗ- ರಿಯೆಂಬಂತೆ ನೀಡಿ ಗೌರವಿಸಿದ್ದಾರೆ. ಸಮಾಜಕ್ಕೆ ಒಳಿತ್ತಾಗುವಂತೆ ಜೀವನ ಸಾಗಿಸುತ್ತಿದ್ದಾರೆ.

ವೃತ್ತಿಜೀವನ :

ಸ್ನಾತಕೋತ್ತರ ಪದವಿ ಪಡೆದು ನಂತರ 1990ರಲ್ಲಿ ಬಿಜಾಪೂರ ಜಿಲ್ಲೆಯ ಸಿಂಧಗಿ ತಾಲುಕಿನಲ್ಲಿರುವ ರಾಯಚೂರು (ಪಿಎ) ಎಂಬ ಗ್ರಾಮದಲ್ಲಿ ಸಿದ್ದಾರ್ಥ ಪ್ರೌಢ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಮಕ್ಕಳಿಗೆ ಕೊಟ್ಟ ವಿದ್ಯೆಯೂ ದೇವರಿಗೆ ನೀಡಿದ ನೈವೇದ್ಯದಷ್ಟೇ ಪವಿತ್ರವೆಂಬ ಮಾತಿನಂತೆ ಅವರು ಆ ಶಾಲೆಯಲ್ಲಿ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಶ್ರಮವಹಿಸಿ ದುಡಿದ್ದಕ್ಕಾಗಿ ಮುಂದೆ ಕಲಬುರಗಿ ಆಳಂದ ತಾಲೂಕಿನ ಕೊರಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥ- 'ಮಿಕ ಶಾಲೆಯಲ್ಲಿ ನೇಮಕಾತಿ ಹೊಂದಿದರು. ಮುಂದೆ ತಮ್ಮ ಸತತ ಪ್ರಯತ್ನದಿಂದಾಗಿ ಅಫಜಲಪೂರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ಪತ್ರಿಕಾರಂಗಕ್ಕೆ ಬರಲು ಸ್ಪೂರ್ತಿ :

ವಿದ್ಯಾರ್ಥಿ ದೆಸೆಯಲ್ಲಿಯೇ ಪತ್ರಿಕೆಗಳ ಬಗ್ಗೆ ಬಹುವಾಗಿ ಪ್ರಭಾವಿತರಾಗಿದ್ದ ಶ್ರೀ ಶಿವಲಿಂಗಪ್ಪನವರು ಆಗಿನ ಖ್ಯಾತ ಪತ್ರಕರ್ತರಾದ ಅರುಣ ಶೌರಿ, ಕುಲದೀಪ ನಯ್ಯಾರ, ದಿ.ಶಾಯಿನಾಥ, ಶರಿನ್ ಬಾನ್, ರಮಾನಂದ ಚಟರ್ಜಿ, ಎನ್.ರಾವ್.ಗೋಯಾಂಕ್, ಖಾದ್ರಿ ಶಾಮಣ್ಣ, ಕೆ.ಶಾಮರಾವ್, ಪಿ.ಲಂಕೇಶ್, ಖುಪಂಥ ಸಿಂಗ್ ಸೇರಿದಂತೆ ಹಲವಾರು ಪತ್ರಕರ್ತರ ಬರವಣಿಗೆಗಳಿಂದ ಅವರ ಚಿಂತನೆಗಳಿಂದ ಪ್ರಭಾವಿತರಾದರು.

ತನಿಖಾ ವರದಿಗಳಿಗೆ ಒತ್ತು ಕೊಟ್ಟು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಇನ್ನಷ್ಟು ಜನರಲ್ಲಿ ಗಟ್ಟಿ ಮಾಡಲು ಶ್ರಮಿಸಿದ ದಿ ಹಿಂದೂ, ಇಂಡಿಯನ್ ಎಕ್ಸ್‌ಪ್ರೆಸ್, ಟೈಮ್ಸ್ ಆಫ್ ಇಂಡಿಯಾ, ದಿ ವಿಕ್ಸಿ, ಇಲ್ಲೂ ಸ್ಪೆಟೆಡ್ ಆಫ್ ಇಂಡಿಯಾದಂತಹ ರಾಷ್ಟ್ರೀಯ ದಿನಪತ್ರಿಕೆಗಳ ತನಿಖಾ ವರದಿಗಳು, ಅದರ ಪ್ರಭಾವಗಳು ಈ ಪತ್ರಿಕೋದ್ಯಮಕ್ಕೆ ಸೇರಲು ಎಲ್ಲಿಲ್ಲದ ಸ್ಫೂರ್ತಿ ನೀಡಿ ಹುರುದುಂಬಿಸಿದವು.

    - ರವಿಕುಮಾರ್ ಹೂಗಾರ್ ಶಿಕ್ಷಕ