ಕಾಲೇಜಿನ ಭೂಮಿ ಖಾಸಗಿ ಸಂಘಕ್ಕೆ ಹಂಚಿಕೆ : ವಿದ್ಯಾರ್ಥಿಗಳು ಆಕ್ರೋಶ

ಕಾಲೇಜಿನ ಭೂಮಿ ಖಾಸಗಿ ಸಂಘಕ್ಕೆ ಹಂಚಿಕೆ : ವಿದ್ಯಾರ್ಥಿಗಳು ಆಕ್ರೋಶ

ಕಲಬುರಗಿ: ಇಲ್ಲಿನ ರಾಜಾಪುರ ನಗರದ ಬಳಿ ಇರುವ ಸರ್ಕಾರಿ ಮಹಾವಿದ್ಯಾಲಯದ (ಸ್ವಾಯತ್ತ) 3 ಎಕರೆ 7 ಗುಂಟೆ ಜಮೀನನ್ನು ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ಹಂಚಿಕೆ ಮಾಡಿರುವ ಸರ್ಕಾರದ ಕ್ರಮ ಖಂಡಿಸಿ ಅಖಿಲ ಭಾರತ 5 ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ) ಕಾರ್ಯಕರ್ತರು ರ ಹಾಗೂ ಕಲಬುರಗಿ ಸರ್ಕಾರಿ ಪದವಿ ಮಹಾವಿದ್ಯಾಲಯ ಉಳಿಸಿದೆ ವಿದ್ಯಾರ್ಥಿಗಳ ಹೋರಾಟ ಸಮಿತಿ ಸದಸ್ಯರು 30-ಅಗಸ್ಟ್ ಶುಕ್ರವಾರ ದಂದು ಕಾಲೇಜಿನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದರು.

ಮೆರವಣಿಗೆಯುದ್ದಕ್ಕೂ ಸರ್ಕಾರದ ಕೈಗೊಂಡ ನಿರ್ಧಾರದ ವಿರುದ್ಧ ಘೋಷಣೆ ಕೂಗಿದ ವಿದ್ಯಾರ್ಥಿಗಳು, ಕೂಡಲೇ ಖಾಸಗಿ ಸಂಘಕ್ಕೆ ಕಾಲೇಜಿನ ಜಮೀನು ನೀಡುವುದು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ಸಭೆಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ತುಳಜಾರಾಮ್ ಎನ್.ಕೆ. ಪ್ರಸ್ತುತ ಐದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಗೋಸ್ಕರ ಸರ್ಕಾರ ಹೆಚ್ಚಿನ ಈ ಕಾಲೇಜಿಗೆ ಹೊಸ ಕಟ್ಟಡಗಳು ಪ್ರಯೋಗಾಲಯಗಳು ನಿರ್ಮಿಸಬೇಕು ಎಂದರು. 

ವಿದ್ಯಾರ್ಥಿಗಳ ಭವಿಷ್ಯದ ಭೂಮಿಯನ್ನು ಕುರುಬ ಸಂಘಕ್ಕೆ ನೀಡಿರುವುದನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು .

ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಪ್ರೀತಿ ದೊಡ್ಡಮನಿ ಮಾತನಾಡಿ ಸರ್ಕಾರಿ ಕಾಲೇಜಿನ ಜಮೀನು ಉಳಿಸಿಕೊಳ್ಳಲು ಛಲದಿಂದ ನಾಲ್ಕು ಕಿಲೋಮೀಟರ್ ದೂರದವರೆಗೆ ನಡಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಬಗ್ಗೆ ವಿಚಾರ ಮಾಡಿ ಜಾಗ ಹಿಂದಕ್ಕೆ ಪಡೆಯಬೇಕೆಂದುರು. 

ಎಐಡಿಎಸ್ಓ. ವೆಂಕಟೇಶ್ ದೇವದುರ್ಗ, ರಾಹುಲ್ ಜಾದವ್, ಬಾಬು, ಅಜಯ್, ಸಿದ್ದಾರ್ಥ್ ತಿಪ್ಪನೂರ್ ಸೇರಿದಂತೆ ಅಪಾರ ಸಿಂಕೆಲಿ ವಿದ್ಯಾರ್ಥಿಗಳು ಭಾಗವಹಿಸಿದರು