ವಿದ್ಯಾವಂತ ಮಕ್ಕಳೇ ಭವ್ಯ ಭಾರತದ ನಿಜವಾದ ಆಸ್ತಿ- ಶಿವರಾಜ ಅಂಡಗಿ

ವಿದ್ಯಾವಂತ ಮಕ್ಕಳೇ ಭವ್ಯ ಭಾರತದ ನಿಜವಾದ ಆಸ್ತಿ- ಶಿವರಾಜ ಅಂಡಗಿ

ವಿದ್ಯಾವಂತ ಮಕ್ಕಳೇ ಭವ್ಯ ಭಾರತದ ನಿಜವಾದ ಆಸ್ತಿ- ಶಿವರಾಜ ಅಂಡಗಿ 

ವರ್ಲ್ಡ್ ಬುಕ್ ಆಪ್ ರೆಕಾರ್ಡ್ ಸಾಧಕ ಕುಮಾರ ಆದಿತ್ಯಗೆ ಟೆಂಗಳಿ ಅಂಡಗಿ ಪ್ರತಿಷ್ಠಾನದಿಂದ ಸನ್ಮಾನ

ಕಲಬುರಗಿ:ಸುಸಂಸ್ಕೃತ ಹಾಗೂ ವಿದ್ಯಾವಂತ ಮಕ್ಕಳೇ ಭವ್ಯ ಭಾರತದ ನಿಜವಾದ ಆಸ್ತಿ ಎಂದು ಟೆಂಗಳಿ ಅಂಡಗಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಅಂಡಗಿ ಹೇಳಿದರು.

ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಹುಲಗೇರಾ ಗ್ರಾಮದ 6–8ನೇ ತರಗತಿಯಲ್ಲಿ ಓದುತ್ತಿರುವ ಕುಮಾರ ಆದಿತ್ಯ ಪಾಟೀಲ ಹಾಗೂ ವಾಸು ಅವರು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ದೊಡ್ಡಬಳ್ಳಾಪೂರದಲ್ಲಿ ನಡೆದ ಟೆಲಿಸ್ಕೋಪ್ ಮೇಕಿಂಗ್ ವರ್ಕ್‌ಶಾಪ್‌ನಲ್ಲಿ ಭಾಗವಹಿಸಿ ವರ್ಲ್ಡ್ ಬುಕ್ ಆಪ್ ರೆಕಾರ್ಡ್ ಸಾಧನೆ ಮಾಡಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು.

ಡಿಸೆಂಬರ್ 11ರಂದು ಕಲಬುರಗಿ ನಗರದ ವಿದ್ಯಾನಗರ ಬಡಾವಣೆಯಲ್ಲಿ ಟೆಂಗಳಿ ಅಂಡಗಿ ಪ್ರತಿಷ್ಠಾನದ ವತಿಯಿಂದ ಈ ಸಾಧಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಬಾಲರತ್ನ ಪ್ರಶಸ್ತಿ ಪಡೆದ ಭಾವಿ ವಿಜ್ಞಾನಿ ಆದಿತ್ಯ ಪಾಟೀಲ ಅವರು ಚಿಕ್ಕ ವಯಸ್ಸಿನಲ್ಲಿಯೇ ಚಿತ್ರಕಲೆ, ಅಭಿನಯ ಹಾಗೂ ಕ್ರೀಡೆಯಲ್ಲಿ ಆಸಕ್ತಿ ತೋರಿದ್ದು, ಸುಮಾರು 35 ಬಾರಿ ಏಕಪಾತ್ರಾಭಿನಯ ಮಾಡಿ ಮೆಚ್ಚುಗೆ ಪಡೆದಿರುವುದು ವಿಶೇಷವಾಗಿದೆ.

ಇಂದಿನ ಬಹುಪಾಲು ಪಾಲಕರು ಮಕ್ಕಳ ಆಸಕ್ತಿಯನ್ನು ಕಡೆಗಣಿಸಿ ತಮ್ಮ ಆಶಯವನ್ನು ಮಕ್ಕಳ ಮೇಲೆ ಹೇರಿಕೊಳ್ಳುತ್ತಿರುವ ಸಂದರ್ಭದಲ್ಲಿ, ಆದಿತ್ಯನ ತಂದೆ ನಾಗರಾಜ ಪಾಟೀಲ ಅವರು ಮಗನ ಆಸಕ್ತಿಗೆ ಬೆಂಬಲ ನೀಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯವಾಗಿದೆ. ಇಂತಹ ಜಾಗೃತ ಪಾಲಕರ ಸಂಖ್ಯೆ ಹೆಚ್ಚಾಗಲಿ ಎಂದು ಶಿವರಾಜ ಅಂಡಗಿ ಹಾರೈಸಿದರು.

ಈ ಸನ್ಮಾನ ಸಮಾರಂಭದಲ್ಲಿ ಶಿಲ್ಪಾ ಕೋಟೆ, ರಾಜೇಶ್ವರಿ ಪಾಟೀಲ, ನಸೀಮಾ ಜಿ.ಎಂ., ನಾಗರಾಜ ಪಾಟೀಲ, ಆದಿತ್ಯ ಪಾಟೀಲ, ಅನ್ನಪೂರ್ಣ ಗೌರೆ, ದೀಪಿಕಾ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.