ಔರಾದ : ತಾಲ್ಲೂಕ ಅಧ್ಯಕ್ಷರಾಗಿ ರವಿ ಸೂರ್ಯವಂಶಿ ಆಯ್ಕೆ
ತಾಲ್ಲೂಕ ಅಧ್ಯಕ್ಷರಾಗಿ ರವಿ ಸೂರ್ಯವಂಶಿ ಆಯ್ಕೆ
ಔರಾದ ಪಟ್ಟಣದ ತಾಲೂಕಾ ಪಂಚಾಯತ ಸಭಾಗಣದಲ್ಲಿ ಸರಕಾರಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ರಾಠೋಡ ಅವರ ನೇತೃತ್ವದಲ್ಲಿ ಔರಾದ ಹಾಗೂ ಕಮಲನಗರ ತಾಲೂಕು ಅಧ್ಯಕ್ಷನಾಗಿ ರವಿ ಸೂರ್ಯವಂಶಿ ಅವರಿಗೆ ನೇಮಕ ಮಾಡಲಾಯಿತ್ತು.
ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ್ ರಾಠೋಡ ಮಾತನಾಡಿ ಅನೇಕ ವರ್ಷಗಳಿಂದ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಸಾವಿರಾರು ಹೊರಗುತ್ತಿಗೆ ನೌಕರರಿಗೆ ಇದೀಗ ಸಂಘಟಿತ ಹೋರಾಟದ ದಿಕ್ಕು ಸಿಕ್ಕಿದಂತಾಗಿದೆ. ವೇತನದಲ್ಲಿ ನಿರ್ಲಕ್ಷ್ಯ, ಸೇವಾ ಭದ್ರತೆಯ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳು ಇವೆ. ಈ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿ, ಕಾನೂನು ತಜ್ಞರ ನೆರವಿನಿಂದ ನೌಕರರಿಗೆ ತಕ್ಷಣದ ನೆರವು ನೀಡಲು ಹಾಗೂ ತರಬೇತಿ ಶಿಬಿರಗಳ ಮೂಲಕ ಶಕೀಕರಣ ಮಾಡುವ ಉದ್ದೇಶ ಹೊಂದಿದ್ದೇವೆ ಎಂದರು ಸಂಘವೆಂದರೆ ನೌಕರರ ನೈತಿಕ ಧೈರ್ಯದ ಶಕ್ತಿ. ಪ್ರತಿಯೊಬ್ಬ ನೌಕರನ ಮನೆಬಾಗಿಲಿಗೆ ನ್ಯಾಯ ತಲುಪಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರ್ಕಾರಿ ಹೊರಗುತ್ತಿಗೆ ನೌಕರರ ಸದಸ್ಯರಾದ ಹರಿದೇವ, ಶರಣಬಸವ , ಸುಭಾಷ, ಶಿವಕುಮಾರ, ರಾಜಕುಮಾರ, ಮಿಥುನ, ಮೋಹನ, ಹನಮಂತ ಪಾಟೀಲ, ಪಂಡಿತ ಪಾಟೀಲ, ಪ್ರಕಾಶ್ ರಾಠೋಡ,ಅಮರ ಹಾಗೂ ಇನ್ನಿತರರು ಉಪಸ್ಥಿತಿದರು
