ದೇವಾಲಯದ ಟಿಸಿ, ತಂತಿ ಕಳ್ಳತನ : ದೂರು ದಾಖಲು

ದೇವಾಲಯದ ಟಿಸಿ, ತಂತಿ ಕಳ್ಳತನ : ದೂರು ದಾಖಲು

ದೇವಾಲಯದ ಟಿಸಿ, ತಂತಿ ಕಳ್ಳತನ : ದೂರು ದಾಖಲು

ಚಿಂಚೋಳಿ : ಪಟ್ಟಣದ ಹೊರವಲಯದ ಬೊಮ್ಮನಹಳ್ಳಿ ಹನುಮಾನ ಮಂದರ ಹಾಗೂ ಪಾದಗಟ್ಟಿ ರೇವಣಸಿದ್ದೇಶ್ವರ ದೇವಸ್ಥಾನದ ಎರಡರ ಮಧ್ಯಯಲ್ಲಿರುವ ವಿದ್ಯುತ್ ಸಂಪರ್ಕ ಪಡಿಸುವ ಟಿ ಸಿ ಒಳಗಿನ ಕಾಪರ್ ವೈರ್ ಮತ್ತು ಅದರಲ್ಲಿನ ಕೊಯಿಲ್ ಕಳ್ಳತನ ಮಾಡಲಾಗಿದೆ ಎಂದು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಆಗಿರುವ ಕಳ್ಳತನದ ಕುರಿತು ರತ್ನಕರಯ್ಯ ಚನ್ನಯ್ಯಸ್ವಾಮಿ ಮಿಠಾಯಿಗಾರ ಅವರು ಬಿಜೆಪಿ ಮುಖಂಡ ಸಂತೋಷ ಗಡಂತಿ, ಲೋಕೇಶ ಶೇಳಗಿ, ಸಂಕೇತ ಬಬಲಾದಿ ಅವರ ಜೊತೆಗೂಡಿ ದೂರು ಸಲ್ಲಿಸಿದ್ದಾರೆ. ಈ ಮೊದಲು ಎರಡು ಬಾರಿ ಇದೆ ತರಹ ಟಿಸಿ ಒಳಗಿನ ಕಾಪರ ತಂತಿ, ಕೊಯಿಲ್ ಕಳ್ಳತನವಾಗಿತ್ತು. ಸದರಿ ಟಿಸಿ ಬೇರೆಯವರಿಂದ ಪಡೆದು ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಈಗ ಟಿಸಿ ಕಳ್ಳತನ ಆಗಿದ್ದರಿಂದ ಎರಡು ದೇವಾಲಯಗಳಿಗೆ ವಿದ್ಯುತ್ ಸಂಪರ್ಕ ಇಲ್ಲದಂತಾಗಿದ್ದು, ಪೂಜಾ ಕಾರ್ಯಕ್ರಮಗಳಿಗೆ ಅಡಚಣೆ ಉಂಟುಮಾಡಿದೆ. ಈ ಕುರಿತು ಚಿಂಚೋಳಿ ಜೇಸ್ಕಾಂ ಇಲಾಖೆಗೆ ದೂರು ನೀಡಲಾಗಿದ್ದು, ಕೂಡಲೇ ಕಳ್ಳರನ್ನು ಹಿಡಿದು ಕ್ರಮ ಜರುಗಿಸಬೇಕೆಂದು ಚಿಂಚೋಳಿ ಠಾಣಾಧಿಕಾರಿ ಗಂಗಮ್ಮ ಜಿನಿಕೇರಿ ಅವರಿಗೆ ಸಲ್ಲಿಸಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.