ಅತಿಥಿ ಶಿಕ್ಷಕರ ವೇತನ ವಿಳಂಬ ವಿಧಾನ ಪರಿಷತ್ ನಲ್ಲಿ ಪ್ರಸ್ತಾಪಿಸಿದ ಶಶೀಲ್ ಜಿ ನಮೋಶಿ

ಅತಿಥಿ ಶಿಕ್ಷಕರ ವೇತನ ವಿಳಂಬ ವಿಧಾನ ಪರಿಷತ್ ನಲ್ಲಿ ಪ್ರಸ್ತಾಪಿಸಿದ ಶಶೀಲ್ ಜಿ ನಮೋಶಿ

ಅತಿಥಿ ಶಿಕ್ಷಕರ ವೇತನ ವಿಳಂಬ ವಿಧಾನ ಪರಿಷತ್ ನಲ್ಲಿ ಪ್ರಸ್ತಾಪಿಸಿದ ಶಶೀಲ್ ಜಿ ನಮೋಶಿ 

ಕಲಬುರ್ಗಿ:ಕಲ್ಯಾಣ ಕರ್ನಾಟಕ ಭಾಗದ ಹಾಗೂ ರಾಜ್ಯದಾದ್ಯಂತ ಅದೇಷ್ಟೋ ಶಾಲೆಗಳು ಶಿಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ಶಿಕ್ಷಕರ ಕೊರತೆ ನೀಗಿಸಬೇಕು, ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಶಿಕ್ಷಣ ಇಲಾಖೆ ಹಲವಾರು ಕ್ರಮ ತೆಗೆದುಕೊಳ್ಳುತ್ತದೆ. ಹಾಗೂ ಸರ್ಕಾರ ಅತಿಥಿ ಶಿಕ್ಷಕರ ಹುದ್ದೆಗಳ ಭರ್ತಿ ಮಾಡಿಕೊಂಡಿದ್ದು ಖುಷಿಯ ವಿಚಾರ, ಆದರೆ ಕಳೆದ 6-7 ತಿಂಗಳಿಂದ ಇಲ್ಲಿಯವರೆಗೆ ಆ ಶಿಕ್ಷಕರಿಗೆ ವೇತನ ನೀಡದೆ ಇರುವುದು ವಿಪರ್ಯಾಸದ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಇಂದು ಶೂನ್ಯ ವೇಳೆಯಲ್ಲಿ ವಿಧಾನ ಪರಿಷತ್ ನಲ್ಲಿ ಪ್ರಸ್ತಾಪಿಸಿದರು

ಅದೆಷ್ಟೋ ಅತಿಥಿ ಶಿಕ್ಷಕರು ದೊರದ ಪ್ರದೇಶದಿಂದ ಶಾಲೆಗಳಿಗೆ ಶಿಕ್ಷಣ ನೀಡಲು ದಿನಂಪ್ರತಿ ಬರುತ್ತಾರೆ ಆದರೆ ಅಂತಹ ಶಿಕ್ಷಕರಿಗೆ ವೇತನ ನೀಡದೆ ವಿಳಂಬ ಮಾಡಿತ್ತಿರುವುದರಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಜುಲೈ ಮತ್ತು ಡಿಸೆಂಬರ್ ತಿಂಗಳಲ್ಲಿ ಎರಡು ಹಂತದಲ್ಲಿ ಶಿಕ್ಷಕರ ನೇಮಕಾತಿ ನಡೆದಿದೆ. ಆದರೆ ಯಾವೊಬ್ಬರ ಶಿಕ್ಷಕರಿಗೂ ಸರಕಾರದಿಂದ ಇಲ್ಲಿಯವರೆಗೂ ಒಂದು ರೂ. ಸಂಬಳ ದೊರೆತಿಲ್ಲ.

ಈ ಮುಂಚೆ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರಿಲ್ಲದ ಕಾರಣ ವಿದ್ಯಾರ್ಥಿಗಳು ಸಮರ್ಥ ಪಾಠ ಬೋಧನೆಯಿಂದ ವಂಚಿತರಾಗುತ್ತಿದ್ದರು. ಸರಕಾರ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡಿದ್ದರಿಂದ ಶಾಲೆಗಳಲ್ಲಿ ತರಗತಿಗಳು ಸರಾಗವಾಗಿ ನಡೆಯಲು ಅನುಕೂಲವಾಯಿತು. ಕಾರಣ ಸಮಸ್ಯೆ ಇತ್ಯರ್ಥಗೊಳಿಸಿದ ಅತಿಥಿ ಶಿಕ್ಷಕರಿಗೆ ಸಮಯಕ್ಕೆ ಸರಿಯಾಗಿ ವೇತನ ನೀಡುವುದು ಮುಖ್ಯವಾಗಿದೆ.

ನಿಯಮದಂತೆ ಜಿಪಂ ಅನುದಾನದಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 10,000 ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ 10.500 ರೂಪಾಯಿ ಪ್ರತಿ ತಿಂಗಳು ವೇತನ ಪಾವತಿಯಾಗ ಬೇಕು. ಕಳೆದ 7 ತಿಂಗಳಿಂದ ತಡವಾಗಿ ವೇತನ ನೀಡಲಾಗುತ್ತಿದೆ ಎಂಬ ಗೋಳು ಮುಂದುವರೆದಿದೆ. ಒಮ್ಮೆ ಅನುದಾನ ಇರುವುದಿಲ್ಲ, ಬಂದರೂ ತಡವಾಗಿ ಬರುತ್ತದೆ. ನಂತರ ಬಿಇಒ ಕಚೇರಿ ಅಧಿ ಕಾರಿಗಳು ಆಯಾ ಶಾಲೆಯ ಎಚ್‌ಎಂ ಗಳಿಂದ ಶಿಕ್ಷಕರ ಹಾಜಿರಾತಿ ತರಿಸಿಕೊಂಡು ವೇತನದ ಬಿಲ್ ರೆಡಿ ಮಾಡಿ ಉಪ ಖಜಾನೆಗೆ ಕಳುಹಿಸಬೇಕು. ಅದು ಅಲ್ಲಿಂದ ಪಾಸಾದ ಬಳಿಕ ಆ ಸಂಬಳವನ್ನು ಆಯಾ ಶಾಲೆಯ ಮುಖ್ಯಗುರುಗಳ ಖಾತೆಗೆ ಜಮಾ ಮಾಡಿದ ಬಳಿಕ ಅವರು ಶಿಕ್ಷಕರ ಹೆಸರಿನ ಮೇಲೆ ಚೆಕ್ ನೀಡುತ್ತಾರೆ. ನಂತರ ಸಂಬಳ ದೊರೆಯುತ್ತದೆ. ಹೀಗಾಗಿ ಅತಿಥಿ ಶಿಕ್ಷಕರ ವೇತನ ಪ್ರತಿ ವರ್ಷ ತಡವಾಗಿಯೇ ಸಿಗುತ್ತಿದೆ.

ಆದ್ದರಿಂದ ಇದೊಂದು ಅತಿಥಿ ಶಿಕ್ಷಕರ ಜೀವನ ನಿರ್ವಹಣೆಯ ವಿಚಾರವಾಗಿರುವುದರಿಂದ ಈ ಬಗ್ಗೆ ಶೀಘ್ರವಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾನ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಿಗೆ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದರು ನಂತರ ಸಭಾ ನಾಯಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೋಮವಾರ ಉತ್ತರ ಕೊಡಿಸುವುದಾಗಿ ಭರವಸೆ ನೀಡಿದರು.