ಬಲಿಷ್ಠ ವೀರಶೈವ ಲಿಂಗಾಯತ್ ಧರ್ಮ ಒಡೆಯುವ ಕೆಲಸ ಮಾಡದೇ ಉಳಿಸುವ ಕೆಲಸ ಆಗಬೇಕು : ಮಾಜಿ ಸಂಸದ ಡಾ. ಜಾಧವ
ತಾಲೂಕಿನ ಕನಕಪುರ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
ಬಲಿಷ್ಠ ವೀರಶೈವ ಲಿಂಗಾಯತ್ ಧರ್ಮ ಒಡೆಯುವ ಕೆಲಸ ಮಾಡದೇ ಉಳಿಸುವ ಕೆಲಸ ಆಗಬೇಕು : ಮಾಜಿ ಸಂಸದ ಡಾ. ಜಾಧವ
ಲಿಂಗಾಯತ ಸಮಾಜ ಒಡೆಯಲು ಯಾರಿಂದ ಸಾಧ್ಯವಿಲ್ಲ : ನಾಡೋಜ ಡಾ. ಬಸವಲಿಂಗ ಪಟ್ಟೆದೇವರು
ಚಿಂಚೋಳಿ :ಸಾಮಾಜಿಕ ಸಾಮರಸ್ಯ ಕಲ್ಪಿಸುವ ಸಮಾಜವೆಂದರೆ ಅದು ವೀರಶೈವ ಲಿಂಗಾಯತ ಧರ್ಮ. ಇಂತಹ ಬಲಿಷ್ಠ ಸಮಾಜವಾದ ವೀರಶೈವ ಲಿಂಗಾಯತ್ ಧರ್ಮವನ್ನು ಒಡೆಯುವಂತಹ ಕೆಲಸ ಯಾರು ಮಾಡದೇ ಒಂದುಗೂಡಿಸಿ ಧರ್ಮ ಉಳಿಸುವ ಕೆಲಸ ಆಗಬೇಕು ಎಂದು ಮಾಜಿ ಸಂಸದ ಡಾ. ಉಮೇಶ ಜಾಧವ್ ಹೇಳಿದರು.
ಅವರು ತಾಲೂಕಿನ ಕನಕಪುರ ಗ್ರಾಮದಲ್ಲಿ ನಡೆದ ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣನವರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದ ಬಂಧುತ್ವ ಸರಿಯಾಗಿ ಚಲಿಸಬೇಕಾದರೆ, ಮಠಗಳು ಸರಿಯಾಗಿ ನಡೆಯಬೇಕು. ಲಿಂಗಾಯತ ಸಮಾಜ ಬಲಿಷ್ಠವಾದ ಸಮಜವಾಗಿದೆ. ಕಾಯಕವೇ ಕೈಲಾಸ ಎಂಬ ತತ್ವವನ್ನು ಎಲ್ಲರೂ ಪಾಲಿಸಿಕೊಂಡು ನಡೆಯಬೇಕು. ಚಿಂಚೋಳಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಠಿಸಲು ಸಕ್ಕರೆ ಕಾರ್ಖಾನೆ ಸ್ಥಾಪಿಸಲಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ. ಬಸವಲಿಂಗ ಪಟ್ಟದೇವರು ಮಾತನಾಡಿ, ಬಸವಣ್ಣನ ಕಾರ್ಯ ಸಮಾಜ ಒಡೆಯುವ ಕಾರ್ಯ ಮಾಡುವುದಿಲ್ಲ. ಅಖಂಡ ಸಮಾಜ ನಿರ್ಮಾಣದೊಂದಿಗೆ ಸಮಾಜ ಜೋಡಿಸುವ ಕೆಲಸ ಮಾಡುತ್ತದೆ. ಸಮಾಜದ ಗುರು, ಧರ್ಮದ ಗುರು, ನೇತಾರ ಬಸವಣ್ಣನವರು ಆಗಿದ್ದಾರೆ. ವೀರಶೈವ ಲಿಂಗಾಯತ ಧರ್ಮವನ್ನು ಒಡೆಯಲು ಯಾರಿಂದ ಸಾಧ್ಯವಿಲ್ಲ ಎಂದು ಮಾಜಿ ಸಂಸದ ಡಾ. ಉಮೇಶಹ ಜಾಧವರಿಗೆ ಎಚ್ಚರಿಸಿದರು. ಮಠಾಧಿಪತಿಗಳ ಒಕ್ಕೂಟದಿಂದ 2026 ರಲ್ಲಿ ದೇಹಲಿಯಲ್ಲಿ ರಾಷ್ಟ್ರೀಯ ಬಸವತತ್ವ ಸಮ್ಮೇಳನ ನಡೆಯಲಿದೆ. ಇದರ ಉುದ್ಘಾಟನೆ ಪ್ರಧಾನಿ ನರೇಂದ್ರಮೋದಿಯವರಿಂದ ನಡೆಸಲು ತಿರ್ಮಾನಿಸಿರುವ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಬೇಕಾಗಿದೆ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಸುಭಾಶರಾಠೋಡ ಮಾತನಾಡಿ, ದೇಶದ 40 ಪ್ರತಿಶತ ಸಂಪತ್ತು 1 ಪ್ರತಿಶತ ಜನರ ಕೈಯಲಿದೆ. ಕೆಳಗಿನ ದೇಶದ 50 ಪ್ರತಿಶತ ಜನರ ಕೈಯಲ್ಲಿ 6 ಪ್ರತಿಶತ ಸಂಪತ್ತು ಇದೆ ಎಂದು ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರು ಹೇಳಿದ್ದಾರೆ. ವಿಕೇಂದ್ರೀಕರಣ,ಜಾತಿ ಧರ್ಮದ, ಹಿಂಸಚಾರದ ವಿರುದ್ಧ, ಸಮಾನತೆ ಬಗ್ಗೆ ತಿಳಿಸುವುದು ಬಸವತತ್ವ. ಹಿಂದಿನಕ್ಕಿಂತಲು ಪ್ರಸ್ತುತದಲ್ಲಿ ಬಸವತತ್ವ ಮತ್ತು ಸಿದ್ದಾಂತಗಳು ತಿಳಿದು ನಡೆಯುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ರಾಷ್ಟ್ರೀಯ ಜಾಗತಿಕ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಬಸವರಾಜ ಧನ್ನೂರ, ಹೂಲಸೂರ ಗುರುಬಸವೇಶ್ವರ ಸಂಸ್ಥಾನ ಮಠದ ಡಾ. ಶಿವಾನಂದ ಮಹಾಸ್ವಾಮಿಗಳು, ಬೀದರ ಲಿಂಗಾಯತ ಮಠದ ಪ್ರಭುದೇವ ಮಹಾಸ್ವಾಮಿಗಳು ಮಾತನಾಡಿದರು.
ಮಹಿಳೆಯರಿಂದ ಬಸವ ತತ್ವದ ವಚನಗಳ ಪುಸ್ತಕವನ್ನು ತಲೆ ಮೇಲೆ ಹೊತ್ತಿಕೊಂಡು ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ್ ಪಾಟೀಲ್, ಮೂರ್ತಿ ಲೋಕಾರ್ಪಣೆ ಸಮಿತಿ ಅಧ್ಯಕ್ಷ ರೇವಣಸಿದ್ದಯ್ಯ ಬಿ. ಮಠ, ಬಸವಣಪ್ಪ ಕುಡ್ಡಳಿ ಸೇರಿದಂತೆ ಸಮಾಜ ಬಂಧುಗಳು, ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
