39 ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಛಾಯಾಚಿತ್ರ ಪ್ರದರ್ಶನ
39 ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಛಾಯಾಚಿತ್ರ ಪ್ರದರ್ಶನ
ಬೆಂಗಳೂರು:ತುಮಕೂರಿನಲ್ಲಿ ಜ.18 & 19 ರಂದು ನಡೆಯಲಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಪೋಟೋ ಜರ್ನಲಿಸ್ಟ್ ಗಳು ಈ ಪ್ರದರ್ಶನದಲ್ಲಿ ಭಾಗವಹಿಸಬಹುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ತಿಳಿಸಿದ್ದಾರೆ.
ಛಾಯಾಚಿತ್ರ ಪ್ರದರ್ಶನ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಛಾಯಾಚಿತ್ರ ಪ್ರದರ್ಶನ ಸಂಚಾಲಕರಾದ
ಭವಾನಿ ಸಿಂಗ್ ಠಾಕೂರ್, ರಾಜ್ಯ ಉಪಾಧ್ಯಕ್ಷರು -8431373511,
ಶಾಂತರಾಜು- 9448101828
ಶರಣು- 9945536889
ಇವರನ್ನು ಸಂಪರ್ಕಿಸಬಹುದು.
ಛಾಯಾಚಿತ್ರ ಪ್ರದರ್ಶನಕ್ಕೆ ನಿಬಂಧನೆಗಳು,
I.ಛಾಯಾಚಿತ್ರವು ಉತ್ತಮ ಗುಣಮಟ್ಟದ ಹಾಯ್ ರೆಜುಲೇಷನ್ ಇರುವ ಛಾಯಾಚಿತ್ರವಾಗಿರಬೇಕು.
2.ಛಾಯಾಚಿತ್ರದ ಗಾತ್ರ
12*18 ಸೈಜ್ ನಲ್ಲಿ ಕಳುಹಿಸಿಕೊಡಬೇಕು.
3.ಒಬ್ಬ ಛಾಯಾಗ್ರಾಹಕರ ಎರಡು ಉತ್ತಮವಾದ ಚಿತ್ರಗಳ ಬಳಸಿಕೊಳ್ಳಲಾಗುವುದು.
4, ತಮ್ಮ ಛಾಯಾಚಿತ್ರಗಳು 10-01-2025ರ ಒಳಗಾಗಿ ತಲುಪಬೇಕು.
39thkuwjphotos@gmail.com & anufotoflash@gmail.com
ಇಲ್ಲಿಗೆ ಕಳುಹಿಸಿಕೊಡಿ.
5.ಪತ್ರಿಕಾ ಛಾಯಾಗ್ರಾಹಕರು ತಮ್ಮ ಪೂರ್ಣ ಹೆಸರು, ಯಾವ ಪತ್ರಿಕೆಯ ಛಾಯಾಗ್ರಾಹಕರು ಹಾಗೂ ಛಾಯಾಚಿತ್ರದ ಶೀರ್ಷಿಕೆ ಕಳುಹಿಸಿ ಕೊಡುವುದು ಕಡ್ಡಾಯ.
6.ಕ್ಯಾಮೆರಾದಿಂದ ತೆಗೆದ ಛಾಯಾಚಿತ್ರಗಳು ಮಾತ್ರ ಬಳಸಲಾಗುವುದು, ಮೊಬೈಲ್ ನಲ್ಲಿ ತೆಗೆದ ಛಾಯಾಚಿತ್ರಗಳು ಬಳಸಲಾಗುವುದಿಲ್ಲ.
ಪ್ರದರ್ಶನಕ್ಕೆ ಛಾಯಾ ಚಿತ್ರಗಳ ಆಯ್ಕೆ ಛಾಯಾಚಿತ್ರ ಪ್ರದರ್ಶನ ಸಮಿತಿಗೆ ಸೇರಿದ್ದು ಅವರ ನಿರ್ಧಾರವೇ ಅಂತಿಮವಾಗಿ ಇರುತ್ತದೆ ಎಂದು ಶಿವಾನಂದ ತಗಡೂರು, ಅಧ್ಯಕ್ಷರು,ಜಿ.ಸಿ.ಲೋಕೇಶ,ಪ್ರಧಾನ ಕಾರ್ಯದರ್ಶಿ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು.