ಆಳಂದದಲ್ಲಿ ರೈತನ ಆತ್ಮಹತ್ಯೆ: ಮಳೆ ಬಾಧಿತ ಬೆಳೆ, ಸಾಲದ ಒತ್ತಡ ಕಾರಣ

ಆಳಂದದಲ್ಲಿ ರೈತನ ಆತ್ಮಹತ್ಯೆ: ಮಳೆ ಬಾಧಿತ ಬೆಳೆ, ಸಾಲದ ಒತ್ತಡ ಕಾರಣ
ಆಳಂದ: ಸತತ ಮಳೆಯಿಂದಾಗಿ ಬೆಳೆ ಹಾನಿ ಅನುಭವಿಸಿದ ರೈತನೊಬ್ಬ ಸಾಲದ ಬಾಧೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಆಳಂದ ತಾಲೂಕಿನ ಸೀಡ್ಸ್ ಫಾರಂ ತಾಂಡಾದಲ್ಲಿ ನಡೆದಿದೆ.
ಮೃತನಾಗಿ ಗುರುತಿಸಲ್ಪಟ್ಟಿರುವುದು ಸುರೇಶ್ ರಾಮು ಚವ್ಹಾಣ (35). ಅವರು ವಾರ್ಷಿಕ ಗುತ್ತಿಗೆ ಆಧಾರದ ಮೇಲೆ ಸುಮಾರು 22 ಎಕರೆ ಜಮೀನು ಬಾಡಿಗೆಗೆ ಪಡೆದು ಬಿತ್ತನೆ ಮಾಡಿದ್ದರು. ಬೆಳೆಗಾರಿಕೆಗೆ ಅಗತ್ಯವಾದ ಬೀಜ, ಗೊಬ್ಬರ ಖರೀದಿಸಲು 2.3,ಲಕ್ಷ ರೂಪಾಯಿ ಖಾಸಗಿ ಸಾಲ ಮಾಡಿಕೊಂಡಿದ್ದ ಎಂದು ಕುಟುಂಬ ಮೂಲಗಳು ತಿಳಿಸಿವೆ
ಸತತವಾಗಿ ಮಳೆಯಿಂದ ಬೆಳೆ ನಾಶವಾದ ಹಿನ್ನೆಲೆಯಲ್ಲಿ ಸಾಲ ತೀರಿಸುವ ಆತಂಕದಿಂದ ಮನನೊಂದು ಸುರೇಶ ನೇಣಿಗೆ ಶರಣಾದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಘಟನೆಯಿಂದ ಸುರೇಶ್ ಅವರ ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ತಾಯಿ ಸಂಕಟದಲ್ಲಿ ಮುಳುಗಿದ್ದಾರೆ. ಸ್ಥಳೀಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.
ವರದಿ ಅವಿನಾಶ್ ದೇವನೂರು