12ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶಕ್ಕೆ ಸಜ್ಜು ಗೊಂಡ ವೇದಿಕೆ

12ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶಕ್ಕೆ ಸಜ್ಜು ಗೊಂಡ ವೇದಿಕೆ

12ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶಕ್ಕೆ ಸಜ್ಜು ಗೊಂಡ ವೇದಿಕೆ

ಶರಣ ಸಾಹಿತ್ಯ ಶ್ರೀಮಂತ ಗೊಂಡಿರುವ ಕಲಬುರ್ಗಿಯಲ್ಲಿ ಅಖಿಲ್ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ಹಾಗೂ ರಾಜ್ಯ ಕದಳಿ ವೇದಿಕೆ ಹಾಗೂ ಜಿಲ್ಲಾ ಘಟಕ ವತಿಯಿಂದ 12ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶ ಶನಿವಾರ ಹಮ್ಮಿಕೊಂಡಿರುವ ಕಾರ್ಯಕ್ರಮ ಸಮ್ಮೇಳನಕ್ಕೆ ಡಅಕ್ಕಮಹಾದೇವಿ ಕದಳಿ ವೇದಿಕೆ ಸಜ್ಜು ಗೊಂಡಿದೆ. ಡಾ. ಮೀನಾಕ್ಷಿ ಬಾಳಿ ಅವರ ಸರ್ವಧ್ಯಕ್ಷತೆಯಲ್ಲಿ ಸಮ್ಮೇಳನ ಜರುಗಲ್ಲಿದ್ದು, ಜಯನಗರದ್ ಅನುಭವ ಮಂಟಪದಿಂದ ವಚನ ಸಂಪುಟಗಳ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಗಮನ ಸೆಳೆಯಲಿವೆ. ನಂತರ ಜೈ ಭವಾನಿ ಕನ್ವೆನ್ಷನ್ ಹಾಲ್ ನಲ್ಲಿ ಸಮ್ಮೇಳನದ ಉದ್ಘಾಟನೆಯನ್ನು ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಣಿ ಅವ್ವ ಅವರ ಅಮೃತ್ ಹಸ್ತದಿಂದ ಬೆಳಿಗ್ಗೆ 10 ಕ್ಕೆ ನೆರವೇರಲಿದೆ. ವೇದಿಕೆಯಲ್ಲಿ ವಿವಿಧ ಮಠಾಧಿಶರು, ಸಾಹಿತಿಗಳು, ಜನ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಕಲ್ಯಾಣ ಕದಳಿ ಮಹಿಳಾ ಸಮಾವೇಶದ ಸ್ಮರಣ ಸಂಚಿಕೆ, ಅಕ್ಕ ಕೇಳವ್ವ, ಮಹದಾಸೋಹಿ, 63ಪುರಾತನ ಚಿತ್ರಪಾಟಗಳ ಗ್ರಂಥ ಲೋಕಾರ್ಪಣೆಗೊಳ್ಳಲಿವೆ. ಸಚಿವರಾದ ಪ್ರೀಯಾಂಕ್ ಖರ್ಗೆ, ಶರಣಬಸವಪ್ಪ ದರ್ಶನಪುರ್, ಲಕ್ಷ್ಮಿ ಹೆಬ್ಬಾಳಕರ, ಶಾಸಕರು ಆದ ಬಸವರಾಜ್ ಮತ್ತಿಮುಡ್, ಬಿ. ಜಿ. ಪಾಟೀಲ್, ಎಂ. ವೈ. ಪಾಟೀಲ್, ಖನಿಜ್ ಫತಿಮಾ, ಅಲ್ಲಮ ಪ್ರಭು ಪಾಟೀಲ್, ಸಂಸದ ರಾಧಾಕೃಷ್ಣ ದೊಡ್ಡಮನಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಮುಂತಾದವರು ವೇದಿಕೆ ಮೇಲೆ ಇರಲಿದ್ದಾರೆ.

ವಿಶೇಷ ಉಪನ್ಯಾಸ, ಗೋಷ್ಠಿಗಳು, ನಡೆಯಲಿದ್ದು, ಗೋ. ರು. ಚನ್ನಬಸಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.ಬೆಳಿಗ್ಗೆ ಶಿರಾ ಉಪ್ಪಿಟ್ಟು, ಮದ್ಯಾಹ್ನ ಹೋಳಿಗೆ, ಚಪಾತಿ, ಬದನೇಕಾಯಿ ಪಲ್ಯ, ಅನ್ನ ಸಾಂಬಾರ್, ವಿವಿಧ ರೀತಿಯ ಭೋಜನ ಜೊತೆಗೆ ಸಾಯಂಕಾಲ ಪಕೋಡ, ಚಹಾ ವ್ಯವಸ್ಥೆ ಇರಲಿದೆ.

ಶ್ರೀ ಮಹಾದಾಸೋಹಿ ಶರಣಬಸವೇಶ್ವರ ಮಂಟಪ, ಮಾತೋಶ್ರೀ ಗೋದುತಾಯಿ ಪ್ರಸಾದ ನಿಲಯ, ಪುಸ್ತಕ ಮಳಿಗೆ, ಆಯುರ್ವೇದಿಕ ಮಳಿಗೆ, ಪಂಡಿತ್ ಆನಂದ್ ಗೌಡ ಖಾನಾಪುರ್, ಲಕ್ಷ್ಮಿ ಖಾನಾಪುರ್, ಶರಣ ದರ್ಶನ ಚಿತ್ರಕಲ ಪ್ರದರ್ಶನ ಹಿರಿಯ ಚಿತ್ರ ಕಲಾವಿದರು ಡಾ.ಎ.ಎಸ್.ಪಾಟೀಲ,ಡಾ.ಎಸ್.ಎಮ್.ನೀಲಾ,ವಿ.ಬಿ.ಬಿರಾದಾರ,

ಡಾ. ಸಿ. ಸೋಮಶೇಖರ್, ಅಪ್ಪಾರಾವ್ ಅಕ್ಕೋಣೆ, ಮಲ್ಲಿಕಾರ್ಜುನ ವಡ್ಡನಕೇರಿ, ಶಾಂತ ಅಷ್ಟಗಿ, ಪತ್ರಕರ್ತ ಶರಣಗೌಡ ಪಾಟೀಲ್ ಪಾಳಾ, ಡಾ. ಆನಂದ ಸಿದ್ದಮಣಿ, ಡಾ. ಶರಣಬಸಪ್ಪ ವಡ್ಡನಕೇರಿ, ಶಾಂತಲಿಂಗ ಪಾಟೀಲ್ ಕೊಳಕೂರ್, ಎಸ್. ಕೆ. ಬಿರಾದಾರ, ಅಂಬರಾಯ ಮಡ್ಡೆ, ಮುಂತಾದವರು ಇದ್ದರು.