ವಿ.ಆರ್.ಚಾಂಬಾಳರ ನಿಜ ಧರ್ಮ ಯಾವುದು? ಕೃತಿ ಲೋಕಾರ್ಪಣೆ ಪ್ರಬುದ್ಧ ಸಮಾಜ ನಿರ್ಮಾಣದ ಕೃತಿ- ಎಂ.ಪಿ. ರಾಧಾಕೃಷ್ಣ ದೊಡ್ಡಮನಿ

ವಿ.ಆರ್.ಚಾಂಬಾಳರ ನಿಜ ಧರ್ಮ ಯಾವುದು? ಕೃತಿ ಲೋಕಾರ್ಪಣೆ ಪ್ರಬುದ್ಧ ಸಮಾಜ ನಿರ್ಮಾಣದ ಕೃತಿ- ಎಂ.ಪಿ. ರಾಧಾಕೃಷ್ಣ ದೊಡ್ಡಮನಿ

ಹಿರಿಯ ಸಾಹಿತಿ ವಿ.ಆರ್.ಚಾಂಬಾಳರ ನಿಜ ಧರ್ಮ ಯಾವುದು? ಕೃತಿ ಲೋಕಾರ್ಪಣೆ

ಪ್ರಬುದ್ಧ ಸಮಾಜ ನಿರ್ಮಾಣದ ಕೃತಿ- ಎಂ.ಪಿ. ರಾಧಾಕೃಷ್ಣ ದೊಡ್ಡಮನಿ

ಕಲಬುರಗಿ: ಇವತ್ತಿನ ಸಮಾಜ,ದೇಶ ಪ್ರಕ್ಷುಬುದ್ಧ ವಾತಾವರಣದಲ್ಲಿ ನಿಂತಿದೆ ಇದಕ್ಕೆ ಲೇಖಕರು, ಕವಿ, ಸಾಹಿತಿಗಳು ಸರಿದಾರಿಗೆ ತರುವ ಪ್ರಗತಿಪರ ಆಶಯ ಬಿಂಬಿಸುವ ಕೃತಿ ಅಗತ್ಯ ಆ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿ ವಿ.ಆರ್.ಚಾಂಬಾಳರು ಸಮಾಜ ಎಚ್ಚರಿಸುವ ಕೆಲಸ ಮಾಡುತ್ತ ಬಂದಿದ್ದಾರೆ ನಿಜ ಧರ್ಮ ಯಾವು ದು ? ಕೃತಿ ಬುದ್ಧ ಬಸವ ಅಂಬೇಡ್ಕರ್ ವಿಚಾರಧಾರೆಗ ಳು ಜನ ಮನಕ್ಕೆ ತಲುಪಬೇಕೆಂಬ ಕಳಕಳಿಯಿಂದ ಈ ಪುಸ್ತಕ ರಚಿಸಿ ಪ್ರಬುದ್ಧ ಸಮಾಜ ನಿರ್ಮಾಣದ ಗುರಿ ಯಾಗಿದೆ ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ.ರಾಧಾಕೃಷ್ಣ ದೊಡ್ಡಮನಿ ಅವರು ಅಭಿಮತ ಪಟ್ಟರು.

         ಲುಂಬಿನಿ ಗೃಹದಲ್ಲಿ ಸಿರಿಗನ್ನಡ ವೇದಿಕೆ,ಬೌದ್ಧ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಿಜ ಧರ್ಮ ಯಾವುದು? ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿ ದರು.ಅವರ ಇಳಿವಯಸ್ಸಿನಲ್ಲೂ ಬತ್ತದ ಚಿಲುಮೆಯಂ ತೆ ಬರಹ ನಮಗೆಲ್ಲ ಮಾದರಿ ಎಂದರು.

        ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಸಾಹಿತಿ ಚಾಂಬಾಳರು ಎಂಬತ್ತರಲ್ಲಿ ಇಪ್ಪತ್ತು ಮೂರು ಕೃತಿ ಪ್ರಕಟಿಸಿದ್ದಾರೆ. ಕಾವ್ಯ,ಜೀವನ ಚರಿತ್ರೆ, ವೈಚಾರಿಕ ಕೃತಿ ಸೇರಿವೆ.ಈ ಕೃತಿಯಲ್ಲಿ ಧರ್ಮ ಅಂದರೆ ಏನು,ಯಾವು ದಕ್ಕೆ ಧರ್ಮ ಅನ್ನಬೇಕು,ಮೂಡನಂಬಿಕೆ, ಅಂಧಶ್ರದ್ದೆ, ಎಲ್ಲವನ್ನು ತೊಡೆಯಲು ಬುದ್ಧ, ಬಸವ ಬಾಬಾಸಾಹೇ ಬರ ವಿಚಾರಗಳು ಮನುಷ್ಯತ್ವ ಪ್ರತಿಪಾದಿಸುತ್ತವೆಂದು ಎಲ್ಲರೂ ಓದಲೇಬೇಕಾದ ಕೃತಿಯಾಗಿದೆ ಎಂದರು.

   ನೃಪತುಂಗ ಪತ್ರಿಕೆ ಸಂಪಾದಕ ಶಿವರಾಯ ದೊಡ್ಡಮ ನಿಯವರು ಕಳೆದ ಐವತ್ತು ವರ್ಷಗಳಿಂದ ಚಾಂಬಾಳ ರು ಯಾವುದೇ ಆಸೆ,ಪ್ರಶಸ್ತಿ, ಗೌರವಕ್ಕೆ ಆಸೆಯ ಪಡ ದೇ ತಮ್ಮದೇ ಆದ ಸಮುದಾಯದ ಹಂಬಲಕ್ಕೆ ಸಾಹಿ ತ್ಯ ರಚಿಸಿದವರು.ಅವರಿಗೆ ಇಗಲಾದರೂ ಸೂಕ್ತ ಗೌರ ವ ದೊರಕಬೇಕೆಂದರು.

         ಬೌದ್ಧ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಕಾನೇಕರ ಅವರು ಮುಂದೆ ಅವರ ಸಮಗ್ರ ಸಾಹಿತ್ಯ ಹೊರತರುವ ಯೋಜನೆ ಪ್ರಕಟಿಸಿದರು.ಲೇಖಕ ಡಾ. ರಾಜಕುಮಾರ ಮಾಳಗೆ ಸ್ವಾಗತಿಸಿದರು ಪ್ರಧಾನ ಕಾರ್ಯದರ್ಶಿ ಡಾ.ಸಿದ್ಧಪ್ಪ ಹೊಸಮನಿ ನಿರೂಪಿಸಿದ ರು.ಇತರರು ಇದ್ದರು.