ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ತೊಗರಿ ಸುರಿದು ರೈತರ ಪ್ರತಿಭಟನೆ

ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ತೊಗರಿ ಸುರಿದು ರೈತರ ಪ್ರತಿಭಟನೆ

ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ತೊಗರಿ ಸುರಿದು ರೈತರ ಪ್ರತಿಭಟನೆ

ಕಲಬುರಗಿ: ಜಿಲ್ಲಾಧಿಕಾರಿಗಳ ಕಚೇರಿ ಎದುರು ತೊಗರಿ ಸುರಿದು ರೈತರು ತೀವ್ರ ಪ್ರತಿಭಟನೆ ನಡೆಸಿ, ತೊಗರಿ ಬೆಳೆಗಾರರ ಸಂಕಷ್ಟಕ್ಕಾಗಿ ತಕ್ಷಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ ವ್ಯಕ್ತಪಡಿಸಿದರು.

ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಬಿತ್ತನೆ ಸಂದರ್ಭದಲ್ಲಿ ತೊಗರಿ 5,95,150 ಹೆಕ್ಟೇರ್ಹ,ಹೆಸರು 50,121 ಹೆಕ್ಟೇರ್ಉ,ದ್ದು 30,890 ಹೆಕ್ಟೇರ್ಸೋ,ಯಾಬಿನ್ 23,440 ಹೆಕ್ಟೇರ್ಹ,ತ್ತಿ 98,550 ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ನಡೆದಿದೆ. ಉತ್ತಮ ಮಳೆ, ಗೊಬ್ಬರ, ಬೀಜ ಹಾಗೂ ಔಷಧಿಗಳ ಸಕಾಲಿಕ ಬಳಕೆಗಳಿಂದ ಆರಂಭದಲ್ಲಿ ರೈತರು ಉತ್ತಮ ಬೆಳೆಗೆ ನಿರೀಕ್ಷೆಯಲ್ಲಿದ್ದರು.

ಆದರೆ ಅತಿವೃಷ್ಟಿ ಮಳೆಯಿಂದ ಬೆಳೆ ನಷ್ಟ ಉಂಟಾಗಿದ್ದು, “ಕೈಗೆ ಬಂದ ತುತ್ತು ಬಾಯಿ ಬಾರದಂತಾಗಿದೆ” ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ನಷ್ಟ ಪರಿಹಾರದಲ್ಲಿ ಸಹ ಅಸಮತೋಲನ ಉಂಟಾಗಿದ್ದು, ಅನೇಕ ರೈತರು FID ಸಂಖ್ಯೆಯಿದ್ದರೂ ಪರಿಹಾರ ಪಡೆಯದೆ ವಂಚಿತರಾಗಿದ್ದಾರೆ ಎಂದು ಸಂಘಟನೆಗಳು ತಿಳಿಸಿವೆ. ಎಲ್ಲ ರೈತರಿಗೆ ಸಮಾನವಾಗಿ ಪರಿಹಾರ ವಿತರಣೆ ಮಾಡಬೇಕೆಂದು ಆಗ್ರಹಿಸಲಾಯಿತು.

ಇನ್ನೊಂದೆಡೆ, ಜಮೀನಿನಲ್ಲಿನ ಹಸಿಯಿಂದಾಗಿ ತೊಗರಿಯಲ್ಲಿ ವ್ಯಾಪಕವಾಗಿ ‘ಗೊಡ್ಡು ರೋಗ’ (ಲಕ್ಕಿ) ಕಾಣಿಸಿಕೊಂಡಿದ್ದು, ಬೆಳೆ ಸಂಪೂರ್ಣವಾಗಿ ಹಾಳಾಗುವ ಸ್ಥಿತಿ ಎದುರಾಗಿದೆ. ತೊಗರಿ ರೋಗದ ಬಗ್ಗೆ ತಕ್ಷಣ ಸಮಗ್ರ ಸಮೀಕ್ಷೆ ನಡೆಸಿ, ಹೊಸ ತಳಿ ಕಂಡುಹಿಡಿಯಲು ಕೃಷಿ ಇಲಾಖೆಗೆ ಒತ್ತಾಯ ವ್ಯಕ್ತಪಡಿಸಲಾಯಿತು.

ರೈತರು ತಮ್ಮ ಪ್ರಮುಖ ಬೇಡಿಕೆಯಾಗಿ —

MSP ಕಾನೂನು ಜಾರಿ**, ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರ್ಸಿನಂತೆ C2+50 ಫಾರ್ಮುಲಾ ಅನ್ವಯ ಕನಿಷ್ಠ ಬೆಂಬಲ ಬೆಲೆ** ನೀಡಬೇಕೆಂದು ಹೇಳಿದರು.

ರೈತ ಸಂಘಟನೆಗಳ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, “ಸಮಗ್ರ ಪರಿಹಾರ – ಸಮ  ಸಮಾನ ನ್ಯಾಯ” ಎಂಬ ಕೂಗು ಕೇಳಿಬಂತು. ರೈತರ ಬೇಡಿಕೆಗಳನ್ನು ತಕ್ಷಣ ಪರಿಗಣಿಸಿ ನ್ಯಾಯ ಒದಗಿಸಬೇಕೆಂದು ಸಂಘಟನೆಗಳು ಜಿಲ್ಲಾಡಳಿತವನ್ನು ಮನವಿ ಮಾಡಿವೆ. ಸಾಲಬಾಧೆಯಿಂದ ಮೃತಪಟ್ಟ ರೈತ ಕುಟುಂಬಕ್ಕೆ ಸರ್ಕಾರದ ಪರಿಹಾರ ನೀಡಬೇಕು ಎಂದು ಹೇಳಿದರು 

ಉಮಾಪತಿ ಪಾಟೀಲ ನಂದೂರ ,ಮಹಾಂತಗೌಡ ನಂದಿಹಳ್ಳಿ, ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು 

ವರದಿ ಹಣಮಂತ ದಂಡಗುಲ್ಕರ್