ಪತ್ರಕರ್ತನ ಮೇಲಿನ ಹಲ್ಲೆಯನ್ನು ಖಂಡಿಸಿ, ಸಂಘ ಸರಕಾರಕ್ಕೆ ಮನವಿ ಸಲ್ಲಿಕೆ ಚಿಂಚೋಳಿ

ಪತ್ರಕರ್ತನ ಮೇಲಿನ ಹಲ್ಲೆಯನ್ನು ಖಂಡಿಸಿ, ಸಂಘ ಸರಕಾರಕ್ಕೆ ಮನವಿ ಸಲ್ಲಿಕೆ ಚಿಂಚೋಳಿ

ಪತ್ರಕರ್ತನ ಮೇಲಿನ ಹಲ್ಲೆಯನ್ನು ಖಂಡಿಸಿ, ಸಂಘ ಸರಕಾರಕ್ಕೆ ಮನವಿ ಸಲ್ಲಿಕೆ

ಚಿಂಚೋಳಿ :ಜಿಲ್ಲೆಯ ಯಡ್ರಾಮಿ ತಾಲೂಕಿನ ಕಾರ್ಯನಿರತ ಪತ್ರಕರ್ತನ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ, ಚಿಂಚೋಳಿ ಕಾರ್ಯನಿರತ ಪತ್ರಕರ್ತ ಸಂಘದ ಹಿರಿಯ ಪತ್ರಕರ್ತ ರಾಮರಾವ ಕುಲಕರ್ಣಿ, ಶಾಮರಾವ ಓಂಕಾರ ಹಾಗೂ ಜಗನ್ನಾಥ ಶೇರಿಕಾರ ಅವರ ನೇತೃತ್ವದಲ್ಲಿ ತಹಸೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ಸರಕಾರದ ಕಣ್ಣು ತೆರೆಸಲು ಜನರ ಮತ್ತು ಸರಕಾರದ ಮಧ್ಯ ಸೇತುವೆಯಾಗಿ ಸಾಮಾಜಿಕ ಕಾರ್ಯಕರ್ತರಂತೆ ಪತ್ರಕರ್ತರು ಸಂವಿಧಾನದ ನಾಲ್ಕನೇ ಅಂಗವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯಡ್ರಾಮಿ ತಾಲೂಕಿನ ಪತ್ರಕರ್ತ ಪ್ರಶಾಂತ ಚವ್ಹಾಣ ಅವರು ಅಕ್ರಮ ಕಾನೂನು ಚಟುವಟಿಕೆ ದಂಧೆಯಲ್ಲಿ ತೊಡಗಿಸಿಕೊಂಡಿರುವ ದಂಧೆಕೊರರನ್ನು ಸುದ್ದಿ ಪ್ರಕಟಿಸುವ ಮುಖಾಂತರ ಸರಕಾರದ ಮತ್ತು ಸಾರ್ವಜನಿಕರ ಎದುರಿಗೆ ತರುವಂತಹ ಹಾಗೂ ಗಮನಹರಿಸುವಂತಹ ಕೆಲಸ ಮಾಡಿರುವ ಪತ್ರಕರ್ತನ ಮೇಲೆ ಮತ್ತು ಅವರ ಕುಟುಂಬದ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವುದು ಜಿಲ್ಲೆಯ ಪತ್ರಕರ್ತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಪತ್ರಕರ್ತನ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳು ಎಷ್ಟೇ ಪ್ರಭಾವಿ ಶಾಲಿ ವ್ಯಕ್ತಿಗಳಾಗಿದ್ದರೂ, ಯಾರ ಒತ್ತಡಕ್ಕೆ ಮಣೆ ಹಾಕದೆ ಅವರನ್ನು ಕೂಡಲೇ ಬಂಧನಗೊಳಿಸಿ, ಜಿಲ್ಲೆಯಲ್ಲಿ ನಡೆಯುವ ಅಕ್ಕಿ ಮತ್ತು ಮರುಳು ಮಾಫಿಯಾಕ್ಕೆ ಕಡಿವಾಣ ಹಾಕಬೇಕೆಂದು ಸರಕಾರಕ್ಕೆ ಸಂಘ ಆಗ್ರಹಿಸಿ, ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರಾದ ಮಹೆಬೂಬ್ ಶಾ ಅಣವಾರ, ಮೋಯಿಜ್ ಪಟೇಲ್ , ವೆಂಕಟೇಶ ದುದ್ಯಾಲ್, ಚಾಂದ್ ಚಾವೂಸ್, ಶಿವರಾಜ ವಾಲಿ ಅವರು ಉಪಸ್ಥಿತರಿದರು.   

ಮುಖಂಡರಾದ ಡಾ. ಆಂಜನೇಯ ಕುಂಚಾವರಂ ಹಾಗೂ ಗೋಪಾಲರಾವ ಕಟ್ಟಿಮನಿ ಅವರು ಸರಕಾರಕ್ಕೆ ಸಲ್ಲಿಸಿದ ಮನವಿಗೆ ಬೆಂಬಲಿಸಿದರು.