ಕನ್ನಡ ನಮ್ಮ ಉಸಿರು ಭಾಷೆಯಾಗಲಿ: ನೀಲಮ್ಮ ನಾಗೂರ್

ಕನ್ನಡ ನಮ್ಮ ಉಸಿರು ಭಾಷೆಯಾಗಲಿ: ನೀಲಮ್ಮ ನಾಗೂರ್

ಕನ್ನಡ ನಮ್ಮ ಉಸಿರು ಭಾಷೆಯಾಗಲಿ: ನೀಲಮ್ಮ ನಾಗೂರ್ 

ಕಲಬುರಗಿ: ಆಳಂದ ತಾಲ್ಲೂಕಿನ ಕಡಗಂಚಿಯ ಭೀಮ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಲಾಯಿತು.

 ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಲೆಯ ಮುಖ್ಯ ಗುರುಗಳಾದ ನೀಲಮ್ಮ ನಾಗೂರೆ, ನವೆಂಬರ್ 1 ... ಕನ್ನಡಿಗರ ಪಾಲಿನ ಅತ್ಯಂತ ಸಂಭ್ರಮ, ಸಡಗರದ ಕ್ಷಣ. ಇದು ಕರ್ನಾಟಕ ರಾಜ್ಯ ರಚನೆಯ ಐತಿಹಾಸಿಕ ದಿನ. ಇದೇ ಕಾರಣದಿಂದ ನವೆಂಬರ್‌ನಲ್ಲಿ ಎಲ್ಲೆಲ್ಲೂ ಕನ್ನಡದ ಕಂಪು ಅನುರಣಿಸುತ್ತಿರುತ್ತದೆ ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ವಿಜಯಕುಮಾರ್ ಮೇಲಿನಕೇರಿ ಮಾತನಾಡಿ, ಕರ್ನಾಟಕ ತನ್ನದೇ ಆದ ಶ್ರೀಮಂತ ಪರಂಪರೆ, ಸಂಸ್ಕೃತಿ, ಇತಿಹಾಸ ಹೊಂದಿರುವ ಪಾವನ ಭೂಮಿಯಾಗಿದ್ದು, ಕಲೆ, ಸಾಹಿತ್ಯಕ್ಕೆ ತವರೂರಿದು. ಕನ್ನಡ ಬರೀ ಭಾಷೆಯಲ್ಲ, ಅದು ನಮ್ಮ ಉಸಿರು, ಬದುಕು. ಅಲ್ಲಲ್ಲಿ ಚದುರಿ ಹೋಗಿದ್ದ ಕನ್ನಡ ಭಾಷಿಗರು ಇರುವ ಪ್ರದೇಶವನ್ನೆಲ್ಲಾ ಒಟ್ಟುಗೂಡಿಸಿ ಕರ್ನಾಟಕ ರಾಜ್ಯವನ್ನು ರೂಪಿಸಲಾಯಿತು ಎಂದು ಕರ್ನಾಟಕ ಇತಿಹಾಸ ಕುರಿತು ತುಂಬಾ ಅರ್ಥಪೂರ್ಣವಾಗಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕರಾದ ಪ್ರಕಾಶ್ ಪಟ್ಟಣಶೆಟ್ಟಿ, ವಸುಧಾ ಕುಲಕರ್ಣಿ, ದಾನಮ್ಮ, ಹಾಗೂ ಬಡಾವಣೆಯ ಶಿಕ್ಷಣ ಪ್ರೇಮಿ ಕರಬಸಪ್ಪ ಬೂಸನೂರ್, ರಂಜಿತ್ ಶಾಂತಪ್ಪ ಹೆಬಳಿ, ಎಸ್‌ಡಿಎಂಸಿ ಸದಸ್ಯರು ಮತ್ತು ಗ್ರಾಮದ ಯುವಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.