ಧರ್ಮಪಥದಲ್ಲಿ ನಡೆದಾಗಲೆ ಜೀವನ ಸಾರ್ಥಕ" – ಅಭಿನವ ಘನಲಿಂಗ ಶ್ರೀಗಳು

ಧರ್ಮಪಥದಲ್ಲಿ ನಡೆದಾಗಲೆ ಜೀವನ ಸಾರ್ಥಕ" – ಅಭಿನವ ಘನಲಿಂಗ ಶ್ರೀಗಳು

*ಇರೋತನಕ ಜನಮನದಲ್ಲಿ ಉಳಿಯುವ ಕಾರ್ಯ ಮಾಡಬೇಕು: ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಕರೆ*

ವರದಿ: ವೀರಣ್ಣ ಮಂಠಾಳಕರ್

ಕಲ್ಯಾಣ ಕಹಳೆ ವಾರ್ತೆ.

ಬಸವಕಲ್ಯಾಣ: ಜೀವನದಲ್ಲಿ ಯಾವಾಗ ಏನೋಗುತ್ತದೋ ಗೊತ್ತಿಲ್ಲ. ಇರೋತನಕ ಒಳ್ಳೆಯ ಕಾರ್ಯ ಮಾಡಬೇಕು. ಜನಮನದಲ್ಲಿ ಉಳಿಯುವಂಥ ಸಾಧನೆ ಕೈಗೊಳ್ಳಬೇಕು. ಒಬ್ಬ ಅಧಿಕಾರಿಯಾಗಿ ವೈಜಣ್ಣ ಪೀರಪ್ಪಾ ಫುಲೆ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂಧಿಸುವ ಮೂಲಕ ಪ್ರಾಮಾಣಿಕ ಕೆಲಸ ಮಾಡಿರುವ ಪಂಚಾಯತ್ ರಾಜ್ ಇಲಾಖೆಯಡಿ ನಾನಾ ರೀತಿಯ ಹುದ್ದೆಗಳು ನಿಭಾಯಿಸಿದ್ದಾರೆ. ಅವರ ಈ ನಿವೃತ್ತಿ ಜೀವನಕ್ಕೆ ಗುರು ಕಾರುಣ್ಯ ಇದ್ದೇ ಇರುತ್ತದೆ. ತಂದೆ ತಾಯಿಯ ಸೇವೆಯಲ್ಲಿ ಫುಲೆ ನೆಮ್ಮದಿಯನ್ನು ಕಂಡಿದ್ದಾರೆ ಎಂದು ತ್ರಿಪುರಾಂತ ಗವಿ ಮಠದ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.

ಶನಿವಾರ ಹುಲಸೂರು ತಾಲೂಕಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ವೈಜಣ್ಣ ಫುಲೆ ಅವರ ಬೀಳ್ಕೊಡುಗೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ದೇವರನ್ನು ಪ್ರಾರ್ಥಿಸಿ, ಗುರು ಹಿರಿಯರ ಸೇವೆ ಮಾಡಿ, ತಂದೆ ತಾಯಿಗಳ ಸೇವೆಯೇ ಪರಮ‌ ಸಾರ್ಥಕ ಜೀವನ ಆಗುತ್ತದೆ ಎಂದು ಕರೆ ನೀಡಿದರು.

ತಾ.ಪಂ. ಮಾಜಿ ಅಧ್ಯಕ್ಷ ದಿಲೀಪ ಗಿರಗಂಟೆ ಮುಖ್ಯ ಅತಿಥಿಗಳಾಗಿ ಮಾತನಾಡಿ, ವೈಜಣ್ಣ ಪೀರಪ್ಪಾ ಫುಲೆ ತಮ್ಮ ಸೇವಾ ಅವಧಿಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅವರ ವೃತ್ತಿ ಜೀವನದಲ್ಲಿ ಬಡವರಿಗಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಇತರರಿಗೆ ಮಾದರಿಯಾಗುತ್ತವೆ. ಬಡತನವೇ ಕಂಡುಂಡ ವೈಜಣ್ಣ ಫುಲೆ ಒಬ್ಬ ದಕ್ಷ ಅಧಿಕಾರಿಯಾಗಿ ನಿವೃತ್ತಿ ಹೊಂದಿದ್ದರು. ನಿಜವಾದ ಜೀವನ ಇಲ್ಲಿಂದಲೇ ಪ್ರಾರಂಭವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಹುಲಸೂರು ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಹಾವಣ್ಣ ಮಾತನಾಡಿ, ಹುಲಸೂರು ತಾಲೂಕಿನಾಧ್ಯಂತ ವೈಜಣ್ಣ ಫುಲೆ ಅವರ ಕೊಡುಗೆಯಿದೆ. ಸಿಬ್ಬಂದಿ ವರ್ಗ ಸೇರಿದಂತೆ ಸ್ನೇಹಿತರ ವಲಯದಲ್ಲಿ ಉತ್ತಮ ಒಡನಾಡ ಹೊಂದಿರುವ ಅವರ ಮಾತುಗಳು ಒರಟಾಗಿ ಎನಸಿದರೂ ತಾಯಿ‌ ಹೃದಯದವರಾದ ಅವರು, ಪ್ರೀತಿ ವಾತ್ಸಲ್ಯದಿಂದ ಕಾಣುವ ಅವರಲ್ಲಿ ಅಹಂಕಾರ ಎಂಬುದಿಲ್ಲ. ಅನೇಕ ಗ್ರಾಮ ಪಂಚಾಯತಗಳು ಕೆಳಮಟ್ಟದಿಂದ ಉನ್ನತಿಗೇರಿಸಿದ ಶ್ರೇಯಸ್ಸು ಅಭಿವೃದ್ಧಿ ಪಡಿಸಿದ್ದಾರೆ ಎಂದರು.

ಕಾರ್ಯಕ್ರಮದ ವೇದಿಯಲ್ಲಿ ಜೈ ಭವಾನಿ ಸುಧಾರಣಾ ಸಮಿತಿ ಅಧ್ಯಕ್ಷ ಗೋವಿಂದ ಚಾಮಲೆ, ಮಲ್ಲಿಕಾರ್ಜುನ ಸ್ವಾಮಿ, ಸಮಾರಂಭದ ಮುಖ್ಯ ಕೇಂದ್ರ ಬಿಂದು ವೈಜಣ್ಣ ಪೀರಪ್ಪ ಫುಲೆ, ಪಿ.ಎಲ್.ಡಿ ಬ್ಯಾಂಕ್ ಸದಸ್ಯೆ ಸುಶೀಲಾಬಾಯಿ ವೈಜಣ್ಣ ಫುಲೆ ದಂಪತಿಗಳು ಉಪಸ್ಸಥಿರಿದ್ದರು. ಕುಟುಂಬ ವರ್ಗದವರಾದ ಅರ್ಜುನ ಫುಲೆ, ಕರಣಕುಮಾರ ಫುಲೆ, ತನುಶ್ರೀ ಫುಲೆ, ಶಿಲ್ಪಾ ಫುಲೆ ಇದ್ದರು.

ವೈಜಣ್ಣ ಫುಲೆ ಅವರ ಬೀಳ್ಕೊಡುಗೆ ಸಮಾರಂಭಕ್ಕೆ ಹುಲಸೂರು ಮತ್ತು ಬಸವಕಲ್ಯಾಣ ತಾಲೂಕಾ ಪಂಚಾಯತ್ ಅಧಿಕಾರಿಗಳು, ವಿವಿಧ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ನೂರಾರು ಸಂಖ್ಯೆಯ ಬಂಧು ಬಳಗ ಸ್ನೇಹಿತರು ಆಗಮಿಸಿ ವೈಜಣ್ಣ ಫುಲೆ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಿದರು. ವೀರಣ್ಣ ಮಂಠಾಳಕರ್ ಸ್ವಾಗತಿಸಿದರು. ಅಂಬಾರಾಯ ಸೈದಾಪೂರೆ ನಿರೂಪಿಸಿ ವೈಜಣ್ಣ ಫುಲೆ ಅವರ ಸಾಧನೆ, ವೃತ್ತಿ ಜೀವನದ ಬಗ್ಗೆ ಪರಿಚಯಿಸಿದರು. ಮಲ್ಲಿಕಾರ್ಜುನ ಹಿರೇಮಠ ಧನ್ನೂರಾ ಕೆ ಪ್ರಾರ್ಥನೆ ಗೀತೆ ಪ್ರಸ್ತುತ ಪಡಿಸಿದರು.