ಪುರಸಭೆ, ಪೊಲೀಸ್ ಅಧಿಕಾರಿಗಳು ಭಯ ಮುಕ್ತ ಸಂತೆ ಬಜಾರ್ ನಡೆಸಲು ಕ್ರಮವಹಿಸಬೇಕು : ಆಗ್ರಹ
ಪುರಸಭೆ, ಪೊಲೀಸ್ ಅಧಿಕಾರಿಗಳು ಭಯ ಮುಕ್ತ ಸಂತೆ ಬಜಾರ್ ನಡೆಸಲು ಕ್ರಮವಹಿಸಬೇಕು : ಆಗ್ರಹ
ಚಿಂಚೋಳಿಯಲ್ಲಿ ನಡೆಸಿದಂತೆ ಅವಳಿ ಪಟ್ಟಣ ಚಂದಾಪೂರದಲ್ಲಿಯೂ ಸಂತೆ-ಬಜಾರ ನಡೆಸಿ ಭಯ ಮುಕ್ತಗೊಳಿಸಿ ನಾಗರಿಕರ ಒತ್ತಾಯ
ಚಿಂಚೋಳಿ : ಪ್ರತಿ ಬುಧವಾರ ಚಿಂಚೋಳಿಯಲ್ಲಿ ನಡೆಯುವಂತೆ ರವಿವಾರ ಅಥವಾ ಸೋಮವಾರ ಚಂದಾಪೂರದಲ್ಲಿ ಸಂತೆ ಬಜಾರ್ ನಡೆಸುವಂತೆ ಶಾಸಕರು, ಪುರಸಭೆ ಆಡಳಿತ ಮತ್ತು ಪೊಲೀಸ್ ಇಲಾಖೆ, ಚುನಾಯಿತ ಜನಪ್ರತಿನಿಧಿಗಳು ಕ್ರಮ ವಹಿಸಬೇಕೆಂದು ಚಂದಾಪೂರದ ನಾಗರಿಕರು ಆಗ್ರಹಿಸಿ, ಒತ್ತಾಯಿಸಿದ್ದಾರೆ.
ಪ್ರತಿ ಬುಧವಾರ ಚಿಂಚೋಳಿಯಲ್ಲಿ ನಡೆಯುವ ಸಂತೆ-ಬಜಾರ್ ಬೀದರ್ - ಮಹೇಬೂಬ್ ನಗರ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಮೇಲೆ ನಡೆಸಲಾಗುತ್ತದೆ. ಈ ಸಂತೆ-ಬಜಾರ್ ಜನದಟ್ಟನೆಯಿಂದ ತುಂಬಿಕೊಂಡಿರುತ್ತದೆ. ಇದರ ಮಧ್ಯೆಯಿಂದ ನೂರಾರು ಲಾರಿ, ಕಾರು, ಬಸ್ಸುಗಳು, ದ್ವಿಚಕ್ರ ವಾಹನಗಳು ಚಲಿಸುತ್ತವೆ. ಇದರಿಂದ ಸಂತೆ-ಬಜಾರಗೆ ಆಗಮಿಸುವ ಮುದ್ದು ಮಕ್ಕಳೊಂದಿಗೆ ಮಹಿಳೆಯರು, ವೃದ್ಧರು, ವಯಸ್ಕರು ಕೈ ಚೀಲದ ಜೊತೆಗೆ ಜೀವದ ಪ್ರಾಣವು ಕೈಯಲ್ಲಿ ಹಿಡಿದು ಕೊಂಡೆ ಭಯದಲ್ಲಿ ಸಂತೆ ಮಾಡುವಂತಾಗಿದೆ. ಅವಳಿ ಪಟ್ಟಣ ಚಂದಾಪೂರದಿಂದ ಚಿಂಚೋಳಿಯಲ್ಲಿ ನಡೆಯುವ ಸಂತೆಗೆ ಬರೋಬರಿ 3 ಕಿ. ಲೋ. ಮೀಟರ್ ಅಂತರವಿದ್ದು, ಅಲ್ಲಿಗೆ ತೆರಳಿ ಭಯದಲ್ಲಿಯೇ ಸಂತೆ ಮಾಡುವುದು ಕಷ್ಟಕರವಾಗುತ್ತಿದೆ. ಇನ್ನೂ ಆಡಳಿತದ ಇದ್ದ ಎಲ್ಲಾ ಸರಕಾರಿ ಕಛೇರಿಗಳು ಅವಳಿ ಪಟ್ಟಣ ಚಂದಾಪೂರದಲ್ಲಿಯೇ ಕಾರ್ಯನಿರ್ವಹಿಸುತ್ತವೆ. ಎಲ್ಲಾ ಸರಕಾರಿ ನೌಕರಸ್ಥರ ಹಾಗೂ ಪೊಲೀಸರ, ವೈದ್ಯರ ವಿದ್ಯಾರ್ಥಿಗಳ ವಸತಿ ನಿಲಯಗಳು, ಶಿಕ್ಷಕರು ಅತಿ ಹೆಚ್ಚಿನ ಸಂಖ್ಯೆ ಜನರು ಚಂದಾಪೂರದಲ್ಲಿಯೇ ವಾಸವಾಗಿದ್ದಾರೆ. ಚಂದಾಪೂರದ ಗಂಗುನಾಯಕ ತಾಂಡಾ, ಬೆಳ್ಳಿ ಬೆಳಕು, ಆಶ್ರೆಯ ಕಾಲೋನಿ, ಬಸವ ನಗರ, ರಾಮ ನಗರ, ಮದೀನಾ ಕಾಲೋನಿ, ಹನುಮಾನ ನಗರ, ಪಟೇಲ್ ಕಾಲೋನಿ, ಜೈ ಭೀಮ ನಗರ, ಗಣೇಶ ನಗರ, ವೆಂಕಟೇಶ ನಗರದ ವಾರ್ಡಗಳು ಪುಸಭೆಗೆ ಒಳಪಡುತ್ತವೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಜನರು ಚಿಂಚೋಳಿ ಸಂತೆ-ಬಜಾರಗೆ ತೆರಳುತ್ತಾರೆ. ಈ ಕಾರಣಕ್ಕಾಗಿ ರವಿವಾರ ಅಥವಾ ಸೋಮವಾರದಂದು ಚಂದಾಪೂರದಲ್ಲಿಯೂ ಸಂತೆ-ಬಜಾರ ನಡೆಸಿದರೆ ಕಲಭಾವಿ ತಾಂಡಾ ಹಾಗೂ ಪೋಲಕಪಳ್ಳಿ ಗ್ರಾಮದವರಿಗೂ ಅನುಕೂಲವಾಗುವುದರ ಜತೆಗೆ ಜನದಟ್ಟಣೆ ಮತ್ತು ರಸ್ತೆ ಸಂಚಾರದ ದಟ್ಟಣೆ ಹಾಗೂ ಪ್ರಾಣ ಅಪಾಯಗಳು ಸಂಭವಿಸುವ ಭಯ ಮುಕ್ತ ಸಂತೆ ಬಜಾರ ಜನರು ನಡೆಸಬಹುದಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರ ಸುರಕ್ಷೆಯ ದೃಷ್ಠಿಯಿಂದ ಕ್ಷೇತ್ರದ ಶಾಸಕರು, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಮತ್ತು ಪುರಸಭೆ ಆಡಳಿತ ಅಧಿಕಾರಿಗಳು, ವಾರ್ಡಗಳ ಚುನಾಯಿತ ಜನಪ್ರತಿನಿಧಿಗಳು, ರಾಜಕೀಯ ಮುಖಂಡ, ಸಂಘಟಕರು ಚಂದಾಪೂರದಲ್ಲಿ ಸಂತೆ ನಡೆಯುವಂತೆ ಕ್ರಮವಹಿಸಿ, ನಾಗರಿಕರಿಗೆ, ಮಹಿಳೆರಿಗೆ ಭಯದ ಸಂತೆ ಬಜಾರನಿಂದ ಮುಕ್ತಿ ನೀಡಿ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.
