ಬಸ್ ಗಾಗಿ ಪ್ರಯಾಣಿಕರ ಪರದಾಟ

ಬಸ್ ಗಾಗಿ ಪ್ರಯಾಣಿಕರ ಪರದಾಟ

ಬಸ್ ಗಾಗಿ ಪ್ರಯಾಣಿಕರ ಪರದಾಟ 

ಶಹಪುರ : ಯಾದಗಿರಿ ಜಿಲ್ಲೆಯ ಶಹಾಪುರ ಬಸ್ ನಿಲ್ದಾಣದಲ್ಲಿ ಬಸ್ ಗಳಿಲ್ಲದೆ ಬಸ್ ನಿಲ್ದಾಣ ಬೀಕೋ ಎನ್ನುತ್ತಿತ್ತು.ವಿವಿಧ ಗ್ರಾಮಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಬೇಸತ್ತು ಬೆಂಡಾದರು, ಉರಿಬಿಸಿನಲ್ಲಿ ಬಸ್ಸಿಗಾಗಿ ಕಾಯುತ್ತಾ ಕುಳಿತಾಗ ಬಸ್ಸು ಬಾರದಿದ್ದ ಸಮಯದಲ್ಲಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಇಡಿ ಶಾಪ ಹಾಕಿದರು.

ಕಾಂಗ್ರೆಸ್ ಸರ್ಕಾರ ಹೊಸಪೇಟೆಯಲ್ಲಿ ಹಮ್ಮಿಕೊಂಡಿರುವ ಎರಡನೇ ವರ್ಷದ ಸಾಧನಾ ಸಮಾರಂಭದ ಕಾರ್ಯಕ್ರಮಕ್ಕೆ ಬಸ್ ಗಳನ್ನು ಬಳಸಿಕೊಳ್ಳಲಾಗಿದ್ದು ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ವೀರಭದ್ರಯ್ಯ ಹಯ್ಯಾಳ ಸಗರ ಆರೋಪಿಸಿದ್ದಾರೆ.

ಇಂದು ಶಹಪೂರ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನ 2 ಗಂಟೆಯಿಂದ ಸಾಯಂಕಾಲ 6:00 ವರೆಗೂ ಒಂದು ಬಸ್ ನಿಲ್ದಾಣದೊಳಗೆ ಬರಲೇ ಇಲ್ಲ, ಎಲ್ಲೆಂದರಲ್ಲಿ ಪ್ರಯಾಣಿಕರು ಬಸ್ಸಿಗಾಗಿ ಕಾಯ್ದು ಕಾಯ್ದು ಸುಸ್ತಾದರು.

ಕಾಂಗ್ರೆಸ್ ಸರ್ಕಾರದವರು ಬೇಕಾದರೆ ಪ್ರೈವೇಟ್ ಬಸ್ಸುಗಳನ್ನು ಬಳಸಿಕೊಳ್ಳಬೇಕಿತ್ತು ಸರ್ಕಾರಿ ಬಸ್ಸುಗಳು ಈ ಸಮಾರಂಭಕ್ಕೆ ಬಳಸಿಕೊಂಡಿದ್ದು ಸಾರ್ವಜನಿಕ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ,ಎಂದು ಅಸಮಾಧಾನ ವ್ಯಕ್ತಪಡಿಸಿದರು