ಅನುದಾನಿತ ಶಾಲಾ ಕಾಲೇಜುಗಳ ನೌಕರರ ಪಿಂಚಣಿ ಹೋರಾಟಕ್ಕೆ ಹೈ ಕ ಶಿಕ್ಷಣ ಸಂಸ್ಥೆಯ ನೌಕರರ ಬೆಂಬಲ

ಅನುದಾನಿತ ಶಾಲಾ ಕಾಲೇಜುಗಳ ನೌಕರರ ಪಿಂಚಣಿ ಹೋರಾಟಕ್ಕೆ ಹೈ ಕ ಶಿಕ್ಷಣ ಸಂಸ್ಥೆಯ ನೌಕರರ ಬೆಂಬಲ

ಅನುದಾನಿತ ಶಾಲಾ ಕಾಲೇಜುಗಳ ನೌಕರರ ಪಿಂಚಣಿ ಹೋರಾಟಕ್ಕೆ ಹೈ ಕ ಶಿಕ್ಷಣ ಸಂಸ್ಥೆಯ ನೌಕರರ ಬೆಂಬಲ

ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ (ರಿ ) *ಪ್ರಾಣ ಬಿಟ್ಟೇವು ಪಿಂಚಣಿ ಬಿಡೆವು* ಎಂಬ ಬೇಡಿಕೆಯ ಬೃಹತ್ ಧರಣಿ ಸತ್ಯಾಗ್ರಹ ವನ್ನು ಬೆಳಗಾವಿಯ ಸುವರ್ಣ ಸೌಧ ದ ಮುಭಾಂಗದಲ್ಲಿ ಸತ್ಯಾಗ್ರಹ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ನೀಡಲಾಯಿತು.

ಈ ವೇಳೆಯಲ್ಲಿ ಸಚಿವರಾದ ಶ್ರೀ. ಮಧುಬಂಗಾರಪ್ಪ ಅವರು, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ, ಶ್ರೀ. ಸಿ. ಪುಟ್ಟಣ್ಣ ಅವರು, ಶ್ರೀ. ಡಿ. ಟಿ. ಶ್ರೀನಿವಾಸ್ ಅವರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ. ಅರುಣ್ ಶಹಾಪುರ ಅವರು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅನುದಾನಿತ ನೌಕರರ ಪರವಾಗಿ ಎಂ ಎಸ್ ಇರಾಣಿ ಪದವಿಪೂರ್ವ ಕಾಲೇಜಿನ ಐ ಕೆ ಪಾಟೀಲ್, ಶ್ರೀಮತಿ ವೀರಮ್ಮ ಗಂಗಸೀರಿ ಮಹಿಳಾ ಮಹಾವಿದ್ಯಾಲಯದ ಡಾ ಮಹೇಶ್ ಕುಮಾರ್ ಗಂವ್ಹಾರ, ಡಾ ಮೋಹನ್ ರಾಜ್ ಪತ್ತಾರ,ಡಾ ಪ್ರೇಮಚಂದ್ ಚವ್ಹಾಣ,ಡಾ ಸುಭಾಷ್ ದೊಡಮನಿ, ಡಾ ರಾಜೇಶ್ , ಡಾ ವಿಶ್ವನಾಥ್ ದೇವರಮನಿ, ಡಾ ಜ್ಯೋತಿ ಪ್ರಕಾಶ್ ದೇಶಮುಖ್, ಶರಣಪ್ಪ ಎಂ ಭಾಗವಹಿಸಿ ಬೆಂಬಲ ಸೂಚಿಸಿದರು