ಸರ್ಕಾರಿ ತಮಿಳು ಶಾಲೆಯಲ್ಲಿ ಮಕ್ಕಳಿಲ್ಲ: ಆದಾಗ್ಯೂ ಲಕ್ಷ ಸಂಬಳ ಪಡೆಯುವ ಶಿಕ್ಷಕಿ.
ಸರ್ಕಾರಿ ತಮಿಳು ಶಾಲೆಯಲ್ಲಿ ಮಕ್ಕಳಿಲ್ಲ: ಆದಾಗ್ಯೂ ಲಕ್ಷ ಸಂಬಳ ಪಡೆಯುವ ಶಿಕ್ಷಕಿ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಪೇಪರ್ ಟೌನ್ ನಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ತಮಿಳು ಶಾಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಮಕ್ಕಳು ಶಾಲೆಗೆ ಬರುತ್ತಿಲ್ಲ ಎಂದು ತಿಳಿದು ಬಂದಿದೆ .ಈ ಶಾಲೆ 1963 ರಲ್ಲಿ ಆರಂಭಗೊಂಡಿದೆ .ಈ ಶಾಲೆಯಲ್ಲಿ ಓರ್ವ ಶಿಕ್ಷಕಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಏಳನೇ ವೇತನ ಆಯೋಗದ ಪ್ರಕಾರ ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಬಳ ಪಡೆಯುತ್ತಿರಭಹುದು. ಕಳೆದ ತಿಂಗಳಲ್ಲಿ ಮೂವರು ಮಕ್ಕಳಿದ್ದ ಈ ಶಾಲೆ ಈಗ ಖಾಲಿಯಾಗಿದೆ. ಆ ಮೂವರು ಮಕ್ಕಳು ಬೇರೊಂದು ತಮಿಳು ಶಾಲೆಗೆ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಮಕ್ಕಳಿಲ್ಲದ ಶಾಲೆಯಲ್ಲಿ ಖಾಲಿ ಕುಳಿತು ಶಿಕ್ಷಕಿಗೆ ಬೇರೆ ಕಡೆ ಮಾಡಬೇಕಲ್ಲವೇ ..? ಈ ವಿಚಾರದಲ್ಲಿ ಶಾಲಾ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತು ಕೊಂಡಿರುವುದು ಪರಿಸ್ಥಿಗೆ ಹಿಡಿದ ಕನ್ನಡಿಯಾಗಿದೆ. ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಶಿಕ್ಷಣಾಸಕ್ತರು ಮುಜುಗರ ಪಡುವಂತಾಗಿದೆ. ಕಲ್ಯಾಣ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಇಲ್ಲದಿರುವಾಗ ಇಲ್ಲಿ ಖಾಲಿ ಕೂರಿಸಿ ಸಂಬಳ ಕೊಡುವುದರ ಬದಲು ಮಕ್ಕಳಿರುವ ಕಲ್ಯಾಣ ಕರ್ನಾಟಕಕ್ಕೆ ವರ್ಗಾಯಿಸುವಂತೆ ಪೇಪರ್ ಟೌನ್ ನಿವಾಸಿಗಳು ಒತ್ತಾಯಿಸಿದ್ದಾರೆ.
ಆರ್. ಷಣ್ಮುಗಂ,ಕೆ.ಮುರುಗನ್.ಎಂ,.ಮಣಿ.ಜೆ.ಪಾಂಡ್ಯನ್.ತಮಿಳರಸಿ
ತಮಿಳ್ಸೆಲ್ವಿ ರಾಜನ್ ಚೋಳ