ಕೂಲಿ ಕಾರ್ಮಿಕರಿಗೆ ಕೆಲಸ ನೀಡುವಂತೆ ಆಗ್ರಹಿಸಿ ದಲಿತ ಸೇನೆ ಪ್ರತಿಭಟನೆ ಅಕ್ರಮ ಕೆಂಪು ಮಣ್ಣು ಸಾಗಾಟಕ್ಕೆ ಬ್ರೇಕ್‌ ಹಾಕಿ : ಕ್ರೀಮಿನಲ್‌ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲು ಒತ್ತಾಯ

ಕೂಲಿ ಕಾರ್ಮಿಕರಿಗೆ ಕೆಲಸ ನೀಡುವಂತೆ ಆಗ್ರಹಿಸಿ ದಲಿತ ಸೇನೆ ಪ್ರತಿಭಟನೆ

ಅಕ್ರಮ ಕೆಂಪು ಮಣ್ಣು ಸಾಗಾಟಕ್ಕೆ ಬ್ರೇಕ್‌ ಹಾಕಿ : ಕ್ರೀಮಿನಲ್‌ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲು ಒತ್ತಾಯ    

ಚಿಂಚೋಳಿ :ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವಂತೆ ಒತ್ತಾಯಿಸಿ,ಚಿಂಚೋಳಿ ದಲಿತ ಸೇನೆಯ ತಾಲೂಕ ಸಮಿತಿ ಕನಕಪುರ ಗ್ರಾಮದಲ್ಲಿ ಚಿಂಚೋಳಿ- ಹುಮನಾಬಾದ ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಿತು.

ಕನಕಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮಗಳು ವಿವಿಧ ಸಮಸ್ಯೆಗಳಿಂದ ಕೂಡಿಕೊಂಡಿವೆ. ಆದರೆ ಇದನ್ನು ನಿವಾರಿಸುವಲ್ಲಿ ಪಂಚಾಯತ್‌ ಆಡಳಿ ವಿಫಲವಾಗಿದ್ದು, ಕೂಡಲೇ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಸಮಸ್ಯೆಗಳಿಗೆ ಸ್ಪಂದಿಸಿ ನನಿವಾರಿಸುವ ಕೆಲಸ ಕನಕಪೂರ ಗ್ರಾಮ ಪಂಚಾಯಿತಿ ಆಡಳಿತ ಮಾಡಬೇಕೆಂದು ಆಗ್ರಹಿಸಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರಲ್ಲದೆ, ತಾಲೂಕಿನ ವಿವಿಧಡೆ ಕಡೆಗಳಲ್ಲಿ ಆಕ್ರಮ ಕೆಂಪು ಮಣ್ಣು ಸಾಗಾಟ ನಡೆಸಲಾಗುತ್ತಿದ್ದು, ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಅಕ್ರಮ ಕೆಂಪು ಮಣ್ಣು ಸಾಗಟವನ್ನು ತಡೆದು, ಸಾಗಾಟಗಾರರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ದಂಡ ವಸೂಲಿ ಮಾಡಿ ಸರಕಾರದ ಬೊಕ್ಕಸಕ್ಕೆ ತುಂಬಿಸಿಕೊಂಡು ಭೂ ವಿಜ್ಷಾನ ಇಲಾಖೆಯ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ರುಗಿಸಬೇಕು. ಅಧಿಕಾರಿಗಳು ಕ್ರಮ ಜರುಗಿಸದೇ ಇದ್ದಲ್ಲಿ, ದಲಿತ ಸೇನೆ ಉಗ್ರವಾದ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ತಾಲೂಕಿನ ಹಿರಿಯ ಹೋರಾಟಗಾರ ಕಾಶಿನಾಥ್ ಶಿಂಧೆ, ದಲಿತ ಸೇನೆ ಅಧ್ಯಕ್ಷ ರಾಘವೇಂದ್ರ ಹೂವಿನಭಾವಿ, ಉಪಾಧ್ಯಕ್ಷ ರಾಜಕುಮಾರ ದೋಟಿಕೋಳ, ದಲಿತ ಸೇನೆ ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷ ಬಲವಂತ ಎಸ್ ಚನ್ನೂರ್, ಬಸವರಾಜ ಚಿಮ್ಮುಇದಲಾಯಿ, ಹಣಮಂತರಾವ ದೇಶಪಾಂಡೆ, ಪುಂಡಲೀಕ, ಜಗನ್ನಾಥ್ ಹತಿಕೋಳ, ನಾಗರಾಜ ವಗ್ಗಿ, ಶ್ರೀಕಾಂತ್ ಮೇತ್ರಿ, ಶಾಮರಾವ ರುಸ್ತಂಪುರ, ಶಿವರಾಜ್ ಮೇತ್ರಿ, ಸಾಹೇಬ್ ಹುಡೇದ, ತಿಪ್ಪಮ್ಮ ಬುರಗೊಂಡ ಅವರು ಉಪಸ್ಥಿತರಿದರು.