ಗುರು ತೋರಿದ ಮಾರ್ಗದಲ್ಲಿ ನಡೆಬೇಕಾದರೆ ಮೊದಲು ಲಿಂಗ ದೀಕ್ಷೆ ಪಡೆಯಬೇಕು-- ಚನ್ನವೀರ ಸ್ವಾಮಿ
ಗುರು ತೋರಿದ ಮಾರ್ಗದಲ್ಲಿ ನಡೆಬೇಕಾದರೆ ಮೊದಲು ಲಿಂಗ ದೀಕ್ಷೆ ಪಡೆಯಬೇಕು-- ಚನ್ನವೀರ ಸ್ವಾಮಿ
ಕಮಲನಗರ : ಲಿಂ ನಿರಂಜನ ಸ್ವಾಮಿಗಳು ಗುರುಕುಲ ಮಾದರಿಯಲ್ಲಿ ಶಾಲೆಗಳನ್ನು ಆರಂಭಿಸಿ ಸಮಾಜದ ಅನಾಥ ನಿರ್ಗತಿಕ ಹಾಗೂ ಗ್ರಾಮೀಣ ಮಕ್ಕಳ ಆಶಾಕಿರಣಗಳಾಗಿದ್ದರು. ಊಟ
ವಸತಿಗಳೊಂದಿಗೆ ಋಣಾತ್ಮಕ ಶಿಕ್ಷಣ ನೀಡಬೇಕೆಂಬ ಉದಾತ ಚಿಂತನೆಯೊಂದಿಗೆ ಹೂವಿನ ಶಿಗ್ಲಿ ಮತ್ತು ಸೋನಾಳದಲ್ಲಿ ಶಾಲೆಗಳು ಪ್ರಾರಂಭಿಸಲಾಗಿದೆ.ಎಂದು ಶ್ರೀ ಮಠದ ಪೀಠಾಧಿಪತಿ ಡಾ ಚನ್ನವೀರ ಮಹಾ ಸ್ವಾಮಿಗಳು ಮಾತನಾಡಿದರು.
ತಾಲೂಕಿನ ಸೋನಾಳ ಗ್ರಾಮದಲ್ಲಿ ಶ್ರೀ ವಿರಕ್ತ ಮಠದ ಲಿಂಗಕ್ಕೆ ಶ್ರೀ ಮ.ನಿ.ಪ್ರ.ನಿರಂಜನ ಮಹಾಸ್ವಾಮಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ ನೂತನ ರಥೋತ್ಸವ ಕಾರ್ಯಕ್ರಮದಲ್ಲಿ
ಇದೆ ತಿಂಗಳು 20 -12 - 2024 ರಂದು ಲಿಂ ಶ್ರೀ ಮ.ನಿ.ಪ್ರ. ನಿರಂಜನ ಮಹಾಸ್ವಾಮಿಗಳವರ ಕೃಪಾಶೀರ್ವಾದದಿಂದ ಹೂವಿನ ಶಿಗ್ಲಿ ಹಾಗೂ ಸೋನಾಳ ಮಠಾಧ್ಯಕ್ಷರಾದ ಶ್ರೀ ಮ.ನಿ.ಪ್ರ. ಚನ್ನವೀರ ಮಹಾಸ್ವಾಮಿಗಳವರ ಅಪ್ಪಣೆಯ ಮೇರೆಗೆ ಹಾಗೂ ಸದ್ಭಕ್ತರ ಸದಿಚ್ಚೆಯಂತೆ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಲಿದ್ದು.
ಈ ಕಾರ್ಯಕ್ರಮದಲ್ಲಿ ಸಾಮೂಹಿಕ ಇಷ್ಟಲಿಂಗ ದೀಕ್ಷೆ ಇಂದು ಬೆಳಿಗ್ಗೆ 7ಗಂಟೆಗೆ ಮಠಾಧ್ಯಕ್ಷರಾದ ಶ್ರೀ ಮ.ನಿ.ಪ್ರ.ಚನ್ನವೀರ ಮಹಾಸ್ವಾಮಿಗಳವರು, ಸೋನಾಳ ಇವರ ಅಮೃತ ಹಸ್ತದಿಂದ ಚಾಲನೆ ನೀಡಿದರು.
ತಂದನಂತರದಲ್ಲಿ ಲಿಂಗ ಮತ್ತು ಅಂಗ ಒಂದಾಗಿ ಮನಸು ಶುದ್ಧಿಗಾಗಿ ಲಿಂಗದ ಮಹಿಮೆ ಪ್ರತಿಯೊಬ್ಬರು ಪಡೆದು ಗುರುವಿನ ಮಾರ್ಗದರ್ಶನದಲ್ಲಿ ನಡೆದು ಗುರುತೊರಿದ ಕೃಪೆಯಿಂದ ಮೂಕ್ತಿ ಪಡೆಯಬೇಕೆಂದು ಮಾರ್ಮಿಕವಾಗಿ ಮಾತನಾಡಿದರು.
ಗ್ರಾಮದ ಸದ್ಭಕ್ತರು ಸುತ್ತಲಿನ ಹಳ್ಳಿಯ ಪಟ್ಟಣದ ಮಹಾರಾಷ್ಟ್ರ ತೆಲಂಗಾಣ ಕರ್ನಾಟಕ ಪ್ರದೇಶಗಳಿಂದ ಭಕ್ತಾದಿಗಳು ನೆರೆದಿದ್ದರು