ನ್ಯಾಯತೇಜಸ್ವಿಗಳ ಸಾನ್ನಿಧ್ಯದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ
ನ್ಯಾಯತೇಜಸ್ವಿಗಳ ಸಾನ್ನಿಧ್ಯದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ
ಗುಲ್ಬರ್ಗ ನ್ಯಾಯವಾದಿಗಳ ಸಂಘ, ಕಲಬುರಗಿ ಸಂವಿಧಾನ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಿದರು
ಕಲಬುರಗಿ: ಸಂವಿಧಾನ ದಿನಾಚರಣೆಯ ಅಂಗವಾಗಿ ಗುಲ್ಬರ್ಗ ಬಾರ್ ಅಸೋಸಿಯೇಷನ್ ವತಿಯಿಂದ ನವೆಂಬರ್ 26, 2025 ಬುಧವಾರ ಸಂಜೆ 4.00 ಗಂಟೆಗೆ ಹೊಸ ಬಾರ್ ಅಸೋಸಿಯೇಷನ್ ಕಟ್ಟಡದ ಪ್ರಥಮ ಮಹಡಿಯಲ್ಲಿ ಭವ್ಯ ಕಾರ್ಯಕ್ರಮ ಜರುಗಿತು. ವಕೀಲರ ಸಂಘದ ಎಲ್ಲಾ ಗೌರವಾನ್ವಿತ ಸದಸ್ಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಸೊಬಗು ತಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಹೆಚ್.ಟಿ. ನರೇಂದ್ರ ಪ್ರಸಾದ್, ನ್ಯಾಯಾಧೀಶರು, ಕರ್ನಾಟಕ ಹೈಕೋರ್ಟ್, ಹಾಗೂ ಗೌರವಾನ್ವಿತ ಶ್ರೀ ಜಿ. ಎಲ್. ಲಕ್ಷ್ಮಿನಾರಾಯಣ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಕಲಬುರಗಿ ರವರು ಭಾಗವಹಿಸಿ ಸಂವಿಧಾನದ ಮೌಲ್ಯಗಳು ಹಾಗೂ ನ್ಯಾಯಾಂಗದ ಪಾತ್ರ ಕುರಿತು ಪ್ರೇರಣಾದಾಯಕ ಆಲೋಚನೆಗಳನ್ನು ಹಂಚಿಕೊಂಡರು.
ವಿಶೇಷವಾಗಿ ಕಲಬುರಗಿ ಜಿಲ್ಲಾಧಿಕಾರಿ ಶ್ರೀಮತಿ ಫೌಜಿಯಾ ಬಿ ತರನಮ್ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.
ದಿನದ ವಿಶೇಷ ಪ್ರಭಾಷಕರಾಗಿ ಕಲಬುರಗಿಯ ಸಂಶೋಧಕರಾದ ಡಾ. ವಿಠಲ್ ವಾಗ್ಗನ್ ಅವರು ಪಾಲ್ಗೊಂಡು ಸಂವಿಧಾನದ ತತ್ತ್ವ, ಅದರ ಜಾಗೃತಿ ಮತ್ತು ಇಂದಿನ ಕಾಲದಲ್ಲಿ ಕಾನೂನು ವಲಯದ ಜವಾಬ್ದಾರಿಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದವರು ಶ್ರೀ ಎಸ್.ವಿ. ಪಸಾರ್ ಮಹಾಗಾಂವ್, ಅಧ್ಯಕ್ಷರ ಕಾರ್ಯಕ್ರಮವನ್ನು
ಸಂಘಟಿಸಿದವರುಶ್ರೀ ಎಸ್.ಬಿ. ವಾಡಿ, ಪ್ರಧಾನ ಕಾರ್ಯದರ್ಶಿ
ಶ್ರೀ ವಿನೋದ್ಕುಮಾರ್ ಕಾಂಬ್ಳೆ, ಅಧ್ಯಕ್ಷರು, ಕರ್ನಾಟಕ ಎಸ್ಸಿ/ಎಸ್ಟಿ ವಕೀಲರ ಕಾನೂನು ಜಾಗೃತಿ ಸಂಘ(ರಿ)
ಶ್ರೀ ಭೀಮಾಶಂಕರ್ ಎಲ್. ಪೂಜಾರಿ, ಉಪಾಧ್ಯಕ್ಷರು
ಶ್ರೀಮತಿ ಆರತಿ ಎಂ. ರಾಥೋಡ್, ಉಪಾಧ್ಯಕ್ಷೆ (ಪ)
ಶ್ರೀ ಸುಧೀರ ಸಿ. ಗಾಡಗೆ, ಜಂಟಿ ಕಾರ್ಯದರ್ಶಿ
ಶ್ರೀ ಮಂಜುನಾಥ್ ಜಿ. ಪಾಟೀಲ್, ಖಜಾಂಚಿ
ಸಂಘದ ಕಾರ್ಯಾಧ್ಯಕ್ಷರು ಶ್ರೀಮತಿ ಭಾಗೀರಥಿ ಆರ್.ಎಸ್., ಶ್ರೀ ಮಹೆಬೂಬ್ ಐ. ದಫೇದಾರ್, ಶ್ರೀಮತಿ ಸಂಗೀತಾ ಕೆ. ಪೂಜಾರಿ, ಶ್ರೀ ಶಿವರಾಜ್ ಎಸ್. ಬಜೆನೂರು, ಶ್ರೀಮತಿ ಸರೋಜಿನಿ ಎನ್. ಪಂಚಾಳ, ಶ್ರೀ ರಾಜೇ ಶಿವಶರಣಪ್ಪ ಕೆ., ಶ್ರೀ ನಾಗೇಶ ಮಲ್ಕಪ್ಪ ಕೋಳಿ, ಶ್ರೀ ಮಲ್ಲಪ್ಪ ಎ. ಕನ್ನಡಗಿ ಹಾಗೂ ಶ್ರೀ ಹುಲೆಪ್ಪ ಹೇರೂರು ಸೇರಿದಂತೆ ಅನೇಕರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿದ್ದು, ವಕೀಲರ ಸಂಘದ ಸದಸ್ಯರು ಪರಸ್ಪರ ಆತ್ಮೀಯವಾಗಿ ಸಮಾಜಮುಖಿ ಕಾರ್ಯಗಳ ಬಗ್ಗೆ ಚರ್ಚಿಸಿದರು.
