ರಂಜಣಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ
ರಂಜಣಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ...
ಜೇವರ್ಗಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಾದ ರಂಜಣಗಿಯಲ್ಲಿ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಅದೇ ರೀತಿಯಾಗಿ ,ಮಕ್ಕಳಿಂದ ಅದ್ದೂರಿ ಸ್ವಾಗತ, ಹೂ,ಪುಷ್ಪ ಗಳ ಸುರಿಮಳೆಯಿಂದ ಕಾರ್ಯಕ್ರಮ ಪ್ರಾರಂಭವಾಯಿತು .ಮಹೇಶ್ ಬಿರಾದಾರ ಮುಖ್ಯ ಗುರುಗಳು ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಭಾವ ಚಿತ್ರ ಕ್ಕೆ ಪೂಜೆ ಮಾಡಿದರು.ಚಂದ್ರಕಾಂತ ದೇವರ ಮನಿ ಕಾರ್ಯದರ್ಶಿ ಕೆಕ್ ಕಟ್ ಮಾಡಿದರು.ಮಹಾಂತೇಶ ಎನ್ ಪಾಟೀಲ ಸರ್,ವಿಶ್ವನಾಥ ದ್ಯಾಮಗೊಂಡ ಸರ್,ಬಸವಂತ್ರಾಯ ಹೊಸಮನಿ ಸರ್,ಶಿವಶರಣ ಸಮಜೋಡಿ ಸರ್,ಬಸವರಾಜ ನಾವಿ ಸರ್,ಜಾಕಿಯಾ ಸುಲ್ತಾನ್ ಮೆಡಂ ಸೀಮಾ ಕಾಂಬಳೆ ಮೆಡಂ,ಶಾಲಿನಿ ಮೆಡಂ, ಹಾಗೂ ಶಿಕ್ಷಣ ಪ್ರೇಮಿ ಎಸ್ ಡಿ ಎಂ ಸಿ ಸದ್ಯಸ ಸಾಹೇಬ ಪಟೇಲ ಹಡಗಿನಾಳ,ಎಸ್ ಡಿ ಎಂ ಸಿ ಅಧ್ಯಕ್ಷ ಭಾಗಣ್ಣ ದೆಶಾಯಿ ಭಾಗವಹಿಸಿದರು.
ನಿರೂಪಣೆ ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಅನಿತಾ ವಹಿಸಿಕೊಂಡಿದ್ದರು ,ಸ್ವಾಗತ ಭಾಷಣವನ್ನು ಗುಂಡಣ್ಣ ವಿದ್ಯಾರ್ಥಿ ವಹಿಸಿಕೊಂಡಿದ್ದರು ಸಾನಿಯ ಬೇಗಂ ಉತ್ತಮ ಭಾಷಣ ಮಾಡಿದಳು ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಮಕ್ಕಳು ಬಹಳ ವಿಜ್ರಮಣಿಯಿಂದ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು
ವರದಿ ಜೆಟ್ಟೆಪ್ಪ ಎಸ್ ಪೂಜಾರಿ