ಕಮಲನಗರ ಪಟ್ಟಣದ ಭಗಿರಥಿ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಗಣೇಶ ವಿಸರ್ಜನೆ ಕಾರ್ಯಕ್ರಮಕ್ಕೆ ಅಧ್ಯಕ್ಷ ಡಾ. ಅಜಿತಕುಮಾರ್ ಶಾಸ್ತ್ರೀ ಚಾಲನೆ ನೀಡಿದರು. ಕಮಲನಗರ ಭಗಿರಥಿ ಪಬ್ಲಿಕ್ ಶಾಲೆಯಲ್ಲಿ ಅದ್ಧೂರಿ ಗಣೇಶ ವಿಸರ್ಜನೆ

ಕಮಲನಗರ ಪಟ್ಟಣದ ಭಗಿರಥಿ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಗಣೇಶ ವಿಸರ್ಜನೆ ಕಾರ್ಯಕ್ರಮಕ್ಕೆ ಅಧ್ಯಕ್ಷ ಡಾ. ಅಜಿತಕುಮಾರ್ ಶಾಸ್ತ್ರೀ ಚಾಲನೆ ನೀಡಿದರು.   ಕಮಲನಗರ ಭಗಿರಥಿ ಪಬ್ಲಿಕ್ ಶಾಲೆಯಲ್ಲಿ ಅದ್ಧೂರಿ ಗಣೇಶ ವಿಸರ್ಜನೆ

( ವರದಿಗಾರರು ಸಂಗಮೇಶ್ವರ ಎಸ್ ಮುರ್ಕೆ )

ಕಮಲನಗರ ಪಟ್ಟಣದ ಭಗಿರಥಿ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಗಣೇಶ ವಿಸರ್ಜನೆ ಕಾರ್ಯಕ್ರಮಕ್ಕೆ ಅಧ್ಯಕ್ಷ ಡಾ. ಅಜಿತಕುಮಾರ್ ಶಾಸ್ತ್ರೀ ಚಾಲನೆ ನೀಡಿದರು. 

ಕಮಲನಗರ ಭಗಿರಥಿ ಪಬ್ಲಿಕ್ ಶಾಲೆಯಲ್ಲಿ ಅದ್ಧೂರಿ ಗಣೇಶ ವಿಸರ್ಜನೆ

ಕಮಲನಗರ: ಗೌರಿ ಗಣೇಶ ಹಬ್ಬ ಮೈಸೂರು ದಸರಾ ಹೋಲುವ ರೀತಿಯಲ್ಲಿ ಪಟ್ಟಣದಲ್ಲಿ ಶುಕ್ರವಾರ ಏಳನೇ ದಿನದ ಗಣೇಶ ವಿಸರ್ಜನೆ ಅತಿ ವಿಜೃಂಭಣೆಯಿಂದ ನಡೆಯಿತು. 

ಭಗಿರಥಿ ಪಬ್ಲಿಕ್ ಶಾಲೆಯಲ್ಲಿ ಏಳು ದಿನಗಳವರೆಗೆ ಗೌರಿ ಪುತ್ರ ಗಣೇಶನಿಗೆ ಪ್ರತಿಷ್ಠಾಪನೆ ದಿನದಿಂದ ವಿಶೇಷ ಪೂಜೆಯೊಂದಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. 

ಶಾಸ್ತ್ರೀ ಶಿಕ್ಷಣ ಸಂಸ್ಥೆ(ರಿ) ಸಂಸ್ಥಾಪಕ ಅಧ್ಯಕ್ಷ ಡಾ. ಅಜಿತಕುಮಾರ್ ಶಾಸ್ತ್ರೀ ಅವರು ಏಳನೆ ದಿನದ ಗಣೇಶ ವಿಸರ್ಜನೆಗೆ ಚಾಲನೆ ನೀಡಿದರು.

ನಂತರ ಶಾಸ್ತ್ರೀ ಅವರು ಮಾತನಾಡಿ, ನಮ್ಮ ಭಾರತ ದೇಶದ ಸನಾತನ ಧರ್ಮ ಉಳಿಯುವದರ ಜೊತೆಗೆ ಬೆಳೆಯಬೇಕು. ಹಿಂದೂ ಧರ್ಮವೂ ವಿಶ್ವವ್ಯಾಪಿ ಪಸರಿಸಬೇಕು ಜಾತಿಇ ರಹಿತವಾದ ಸಮಾಜವೂ ನಿರ್ಮಾಣವಾಗಬೇಕೆಂಬ ಸದ್ದಿಚ್ಚೆಯೊಂದಿಗೆ ಸಾಗಿದ ಭಗಿರಥಿ ಪಬ್ಲಿಕ್ ಶಾಲೆ ಗಣೇಶ ಮಂಡಳಿ ದಶಮಾನೋತ್ಸವವನ್ನು ದಾಟಿ 15ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ ಎಂದರು.

ಮುಖ್ಯಶಿಕ್ಷಕ ಮನೋಜಕುಮಾರ ಹಿರೇಮಠ ಮಾತನಾಡಿ, ಶಾಲೆಯಲ್ಲಿ ಗಣೇಶ ಮಂಡಳಿಯನ್ನು ಕಟ್ಟುವ ಮುಂಚೆ ಧರ್ಮ ರಕ್ಷಣಾರ್ಥವಾಗಿ ಯಾವ ಕಾರ್ಯಗಳನ್ನು ಮಾಡಬೇಕು. ಕಾರ್ಯಕ್ರಮಗಳನ್ನು ಮಾಡಬೇಕು. ಕಾರ್ಯಕ್ರಮಗಳ ಆಯೋಜನೆಗಳು ಹೇಗಿರಬೇಕೆಂಬ ಸದುದ್ದೇಶಗಳನ್ನು ಹೊತ್ತುಕೊಂಡು ಪ್ರಾರಂಭಿಸಲಾದ ಗಣೇಶೋತ್ಸವದ 15 ವರ್ಷಗಳಲ್ಲಿಯೂ ಧರ್ಮ ರಕ್ಷಣಾರ್ಥವಾಗಿ ಮತ್ತು ಸನಾತನ ಧರ್ಮದಡಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಈ ಬಾಗದ ಜನರ ಪ್ರೀತಿಯ ಅಚ್ಚುಮೆಚ್ಚಿನ ಭಗಿರಥಿ ಶಾಲೆ ಮಂಡಳಿ ಎಂಬ ಹೆಗ್ಗಳಿಕೆ ಪಾತ್ರವಾಗಿದೆ ಎಂದರು. 

ಸಹ-ಶಿಕ್ಷಕ ಸಿಬ್ಬಂದಿ ಶೇಖ ಇಜಾಜ, ಶ್ರೀದೇವಿ ಸೋನಕಾಂಬಳೆ, ಉಷಾ ವಿದ್ಯಾಸಾಗರ, ದೀಪಮಾಲಾ ಸೂರ್ಯವಂಶಿ, ಶೀತಲ ಹಂಗರಗೆ, ಅಂಜಲಿ ಸ್ವಾಮಿ, ರಾಜೇಶ್ವರಿ ಶಿರಗಿರೆ, ಬಳಿರಾಮ ಲಾಂಚಕರ, ಸಂತೋಷ ಡೊಂಗ್ರೆ, ಅಪರ್ಣಾ, ಪ್ರಗ್ಞಾ ಕಾಲೇಕರ್, ಅಮಿತ, ರೋಷನಿ ಡೊಂಗ್ರೆ, ಅರಹಾನ, ಪಂಚಫುಲಾ ಚವಾಣ್, ಅಶ್ವೀನಿ ಮನೋಜಕುಮಾರ ಹಾಗೂ ಮಕ್ಕಳು ಪಾಲ್ಗೊಂಡಿದ್ದರು.