ಕಮಲನಗರದಲ್ಲಿ ಸಂವಿಧಾನ ದಿನಾಚರಣೆ

ಕಮಲನಗರದಲ್ಲಿ ಸಂವಿಧಾನ ದಿನಾಚರಣೆ

 ಕಮಲನಗರದಲ್ಲಿ ಸಂವಿಧಾನ ದಿನಾಚರಣೆ 

ಕಮಲನಗರ : ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಬುಧವಾರ ಬೆಳಿಗ್ಗೆ 10: 30 ಗಂಟೆಗೆ ಪಟ್ಟಣದ ತಾಲ್ಲೂಕಾಡಳಿತ ಕಚೇರಿ ಆವರಣದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಭಾರ ಸಂಜೀವಕುಮಾರ ಡೊಂಗರೆ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಮಂಗಳವಾರ ಕ್ಲಸ್ಟರ್ ಮಟ್ಟದ ಎಲ್ಲಾ ಶಾಲೆ ಮುಖ್ಯ ಶಿಕ್ಷಕರು ಸಭೆಯಲ್ಲಿ ಅವರು ಮಾತನಾಡಿದರು.

ಮಂಗಳವಾರ ಬೆಳಿಗ್ಗೆ ಶಾಂತಿವರ್ಧಕ ಶಾಲೆ ಆವರಣದಿಂದ ಬಸ್ ನಿಲ್ದಾಣ ಮುಖಾಂತರ ಶಾಲಾ ಮಕ್ಕಳಿಂದ ಪಥ ಸಂಚಲನ ನಡೆಯುವುದು ಎಂದರು.

ಸಂವಿಧಾನ ದಿನಾಚರಣೆ ಕಾರ್ಯಕ್ರಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶಿಲಾಬಾಯಿ ಸಜ್ಜನಶೇಟ್ಟಿ ಉದ್ಘಾಟಿಸುವರು. ಸಿಆರ್‍ಸಿ ಶಿವಕುಮಾರ ಹೊನ್ನಾಳೆ ಸ್ವಾಗತಿಸಲಿದ್ದಾರೆ. 

ಸಾಮೂಹಿಕ ಸಂವಿಧಾನ ಪೀಠಿಕೆ ಪಠಣದ ನಂತರ ಇಒ ಹಣಮಂತರಾವ ಕೌಟಗೆ ಅವರು ಅತಿಥಿ ಉಪನ್ಯಾಸ ನೀಡಲಿದ್ದಾರೆ ಎಂದು ತಹಶೀಲ್ದಾರ್ ಅಮಿತಕುಮಾರ ಕುಲಕರ್ಣಿ ತಿಳಿಸಿದ್ದಾರೆ.