ದಾವಣಗೆರೆಯಲ್ಲಿ ‘ಪ್ರತಿಗಂಧರ್ವ’ ನಾಟಕದ ಕಥಾಪೂಜೆ ಹಾಗೂ ಕಲಾವಿದರ ತರಬೇತಿ ಆರಂಭ

ದಾವಣಗೆರೆಯಲ್ಲಿ ‘ಪ್ರತಿಗಂಧರ್ವ’ ನಾಟಕದ ಕಥಾಪೂಜೆ ಹಾಗೂ ಕಲಾವಿದರ ತರಬೇತಿ ಆರಂಭ
ದಾವಣಗೆರೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೃತ್ತಿ ರಂಗಭೂಮಿ ರಂಗಾಯಣ, ದಾವಣಗೆರೆಯ ಆಶ್ರಯದಲ್ಲಿ 'ಪ್ರತಿಗಂಧರ್ವ’ ಎಂಬ ನೂತನ ನಾಟಕದ ಕಥಾಪೂಜೆ ಹಾಗೂ ಕಲಾವಿದರಿಗೆ ತರಬೇತಿ ಕಾರ್ಯಕ್ರಮ ಸೋಮವಾರ (13 ಅಕ್ಟೋಬರ್ 2025) ಬೆಳಿಗ್ಗೆ 11.00 ಗಂಟೆಗೆ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಸತೀಶಕುಮಾರ ಪಿ. ವಲ್ಲೇಪುರೆ ಉದ್ಘಾಟಿಸಲಿದ್ದಾರೆ.
ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕರಾದ ಶ್ರೀ ಮಲ್ಲಿಕಾರ್ಜುನ ಕಡಕೋಳ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರು ಶ್ರೀ ಕೆ.ವಿ. ನಾಗರಾಜಮೂರ್ತಿ, ಕರ್ನಾಟಕ ರಂಗಸಮಾಜದ ಸದಸ್ಯರು ಡಾ. ಕೆ. ರಾಮಕೃಷ್ಣಯ್ಯ,ಪ್ರಸಿದ್ಧ ನಾಟಕಕಾರ ಡಾ. ರಾಜಪ್ಪ ದಳವಾಯಿ, ಹಾಗೂ ರಂಗ ನಿರ್ದೇಶಕ ಶ್ರೀ ಮಾಲತೇಶ ಬಡಿಗೇರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನೂತನ ನಾಟಕದ ಕಥಾಪೂಜೆಯೊಂದಿಗೆ ಕಲಾವಿದರಿಗೆ ತರಬೇತಿ ಕಾರ್ಯಕ್ರಮಕ್ಕೂ ಚಾಲನೆ ದೊರೆಯಲಿದ್ದು, ಯುವ ರಂಗಕಾರರಿಗೆ ಇದು ಮಹತ್ವದ ವೇದಿಕೆಯಾಗಿದೆ.
ಕಾರ್ಯಕ್ರಮದ ವ್ಯವಸ್ಥೆಯನ್ನು ವೃತ್ತಿ ರಂಗಭೂಮಿ ರಂಗಾಯಣದ ವಿಶೇಷಾಧಿಕಾರಿಗಳಾದ ರವಿಚಂದ್ರಅವರು ನಿರ್ವಹಿಸುತ್ತಿದ್ದಾರೆ.