ರಾಜ್ಯಮಟ್ಟದ ಯುವ ವೈಭವ ಬೆಂಗಳೂರಿನಲ್ಲಿ ಡಿ. 7ರಂದು

ರಾಜ್ಯಮಟ್ಟದ ಯುವ ವೈಭವ ಬೆಂಗಳೂರಿನಲ್ಲಿ ಡಿ. 7ರಂದು

ರಾಜ್ಯಮಟ್ಟದ ಯುವ ವೈಭವ ಬೆಂಗಳೂರಿನಲ್ಲಿ ಡಿ. 7ರಂದು

ಯುವ ವಾಹಿನಿಯಿಂದ ಬಿಲ್ಲವ, ಈಡಿಗ ಸೇರಿದಂತೆ 26 ಪಂಗಡಗಳ ಯುವಕರಿಗಾಗಿ ರಾಜ್ಯಮಟ್ಟದ ಸ್ಪರ್ಧೆ

ಕಲ್ಯಾಣ ಕಹಳೆ ವಾರ್ತೆ (ವರದಿ : ಡಾ. ಸದಾನಂದ ಪೆರ್ಲ)

ಕಲಬುರಗಿ : ರಾಜ್ಯದಲ್ಲಿರುವ ಈಡಿಗ, ಬಿಲ್ಲವ, ನಾಮಧಾರಿ, ನಾಯಕ, ಧೀವರ ಸೇರಿದಂತೆ 26 ಪಂಗಡಗಳ ಯುವಕ ಯುವತಿಯರಿಗಾಗಿ ಬೆಂಗಳೂರು ಯುವಾಹಿನಿ ಘಟಕದಿಂದ ಡಿಸೆಂಬರ್ 7ರಂದು ಬೆಂಗಳೂರಿನಲ್ಲಿ " ಯುವ ವೈಭವ _ 2025 " ರಾಜ್ಯಮಟ್ಟದ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.

     ಬೆಂಗಳೂರು ಮೈಸೂರು ಬ್ಯಾಂಕ್ ವೃತ್ತದ ಶಿಕ್ಷಕರ ಭವನದಲ್ಲಿ ಡಿಸೆಂಬರ್ 7ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ರಾಜ್ಯಮಟ್ಟದಲ್ಲಿ ಯುವ ವೈಭವ ಪ್ರಚಾರ ವಿಡಿಯೋ, ಭಾಷಣ, ರಸಪ್ರಶ್ನೆ, ಗೀತ ಗಾಯನ, ಸಾಂಸ್ಕೃತಿಕ ನೃತ್ಯ, ಚಿತ್ರಕಲೆ, ರಂಗೋಲಿ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಯುವ ವೈಭವದಲ್ಲಿ ಚಾಂಪಿಯನ್ ಟ್ರೋಫಿ ವಿಜೇತರಿಗೆ 25 ಸಾವಿರ ರೂ. ಹಾಗೂ ರನ್ನರ್ಸ್ ಟ್ರೋಫಿ ವಿಜೇತರಿಗೆ 15 ಸಾವಿರ ರೂ. ನಗದು ಪುರಸ್ಕಾರ ನೀಡಲಾಗುವುದು ಎಂದು ಯುವವಾಹಿನಿ ಬೆಂಗಳೂರು ಘಟಕದ ಅಧ್ಯಕ್ಷರಾದ ಶಶಿಧರ ಕೋಟ್ಯಾನ್ ಮತ್ತು ಕಾರ್ಯದರ್ಶಿ ಸಂತೋಷ್ ಪೂಜಾರಿ ಪಣಪಿಲ ತಿಳಿಸಿದ್ದಾರೆ 

   ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಸಂಘಟನೆಗಳು ನೋಂದಾವಣೆ ಮಾಡಲು ನವೆಂಬರ್ 30 ಕೊನೆಯ ದಿನಾಂಕವಾಗಿದ್ದು ಕ್ಯೂಆರ್ ಕೋಡ್ ಬಳಸಿ ಅಥವಾ 8197443354 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಆಗಮಿಸುವ ಸ್ಪರ್ಧಾಳುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಯುವ ವೈಭವ ಕಾರ್ಯಕ್ರಮದಲ್ಲಿ ಸಿನಿಮಾ, ರಂಗಭೂಮಿ, ಸಾಹಿತ್ಯ ,ಕೃಷಿ,ಕಲೆ ಸಮಾಜ ಸೇವೆಯ ಪ್ರಮುಖರು, ಸಾಧಕರು, ಅಧಿಕಾರಿಗಳು, ರಾಜಕೀಯ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಾಯಂಕಾಲ 3 ಗಂಟೆಯಿಂದ ಗಣ್ಯರ ಉಪಸ್ಥಿತಿಯೊಂದಿಗೆ ಸಭಾ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ರಾಜ್ಯಮಟ್ಟದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಮಾಜದ 26 ಪಂಗಡಗಳ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಬ್ರಹ್ಮಶ್ರೀ ನಾರಾಯಣ ಗುರು ಪಂಥದ ಸಮಾಜದ ಯುವಕರನ್ನು ಒಂದೇ ವೇದಿಕೆಗೆ ಆಹ್ವಾನಿಸಿ ಪ್ರತಿಭಾ ಸಮ್ಮಿಲನಕ್ಕೆ ಅವಕಾಶ ನೀಡಲಾಗಿದೆ. ಅದಕ್ಕಾಗಿ ಭಾಷಣ ಸ್ಪರ್ಧೆ ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಇಡಲಾಗಿದೆ. ರಾಜ್ಯದಲ್ಲಿರುವ ಸಮಾಜ ಬಾಂಧವ ಯುವಕರ ನಡುವೆ ವಿದ್ಯೆ, ಉದ್ಯೋಗ, ಸಂಪರ್ಕಕ್ಕಾಗಿ ಈ ವಿಶೇಷ ಕಾರ್ಯಕ್ರಮ ಹೆಚ್ಚಿನ ಉತ್ತೇಜನ ನೀಡಲಿದೆ. ಸಮಾಜ ಬಾಂಧವರ ಸಾಂಸ್ಕೃತಿಕ ಸಮ್ಮಿಲನದ ಹಬ್ಬ ಯುವ ವೈಭವದಲ್ಲಿ ಬೀದರ್ ನಿಂದ ಮಂಗಳೂರು ಹಾಗೂ ಕೋಲಾರದಿಂದ ಚಾಮರಾಜನಗರ ವರೆಗಿನ ಸಮಾಜ ಬಾಂಧವರು ಒಟ್ಟುಗೂಡುತ್ತಿರುವುದು ಈ ಬಾರಿಯ ವಿಶೇಷತೆಯಾಗಿದೆ.

_ಶ್ರುತಿ ಪುತ್ತೂರು, ಮಾಧ್ಯಮ ತಜ್ಞೆ ಹಾಗೂ ಕಾರ್ಯಕ್ರಮ ಸಂಘಟಕರು