ಯುವಕರು ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ತಿಳಿದುಕೊಳ್ಳಬೇಕಿದೆ: ಚೆನ್ನಯ್ಯಸ್ವಾಮಿ ವಸ್ತ್ರದ್ ಅಭಿಪ್ರಾಯ

ಯುವಕರು ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ತಿಳಿದುಕೊಳ್ಳಬೇಕಿದೆ: ಚೆನ್ನಯ್ಯಸ್ವಾಮಿ ವಸ್ತ್ರದ್ ಅಭಿಪ್ರಾಯ
ಕಲಬುರ್ಗಿ“ದೇಶ ಎಂದರೆ ಏನು? ದೇಶಭಕ್ತಿ ಎಂದರೆ ಏನು? ದೇಶ ಸೇವೆ ಎಂದರೆ ಏನು?” ಎಂಬ ನೈಜ ಅರ್ಥವನ್ನು ಅಂದಿನ ಸ್ವಾತಂತ್ರ ಹೋರಾಟಗಾರರು ಮಾತ್ರ ಅರಿತು, ಅನುಭವಿಸಿದರು. ಆದರೆ, ಇಂದಿನ ಯುವ ಪೀಳಿಗೆ ಅದನ್ನು ಮರೆತಂತಾಗಿದೆ ಎಂದು ಪ್ರಗತಿಪರ ಚಿಂತಕರಾದ ಚೆನ್ನಯ್ಯಸ್ವಾಮಿ ವಸ್ತ್ರದ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಪತ್ರಿಕಾ ಪ್ರಕಟಣೆಯಲ್ಲಿಂದು ವಿವರಿಸಿ ಹೇಳಿದರು –
“ನಾವು ಸಿನಿಮಾಗಳಲ್ಲಿ ಬಲವಾದ ವಿಚಾರಣೆ ಸೀನ್‌ಗಳನ್ನು ನೋಡಿರಬಹುದು. ಆದರೆ ಬ್ರಿಟಿಷರ ಕಾಲದಲ್ಲಿ ಸ್ವಾತಂತ್ರ ಹೋರಾಟಗಾರರ ಮೇಲೆ ನಡೆದ ಕ್ರೌರ್ಯಕ್ಕೆ ಅದರಲ್ಲಿರುವ ಹಿಂಸೆಯೂ ನೀರಸವಾಗಿದೆ. ಜೈಲಿನಲ್ಲಿ ಅವರನ್ನು ಗಾಣಕ್ಕೆ ಕಟ್ಟಿ ಹೊಡೆದರು ವಂದೇ ಮಾತರಂ ಎಂದೇ ಕೂಗುತ್ತಿದ್ದರು. ಬ್ರಿಟಿಷರ ಹೊಡೆಯುವ ಲಾಟಿ ಏಟುಗಳು, ಬಿಸಿನೀರಲ್ಲಿ ಕಾಲು ಮುಳುಗಿಸಿ ಹೊಡೆಯುವುದು, ಕುಟುಂಬದಿಂದ ದೂರ ಮಾಡುವುದು – ಇವುವೇ ಅವರ ದಿನಚರಿಯಾಗಿತ್ತು. ಕೆಲವರು ರಕ್ತ ಕಕ್ಕಿ ಜೈಲಿನಲ್ಲೇ ಪ್ರಾಣಬಿಟ್ಟರು. ಇನ್ನೊಬ್ಬರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು.”
“ಸ್ವಾತಂತ್ರ್ಯ ಬಂದ ಮೇಲೆ ಚುರುಕಾಗಿ ದೇಶವನ್ನು ಕಟ್ಟಬೇಕಾಗಿತ್ತು. ಆಗಂತೂ ಭಾರತದಲ್ಲಿ ಕಿತ್ತು ತಿನ್ನುವ ಬಡತನ ಇತ್ತು, ಆಗ ಭಾರತೀಯ ರೂಪಾಯಿ ಮೌಲ್ಯ ಡಾಲರ್ ಎದುರು ತಲೆ ಎತ್ತಿ ನಿಂತಿತ್ತು.ಆದರೆ ಇಂಊ ರೂಪಾಯಿ ಮೌಲ್ಯ ಕಳೆದುಕೊಂಡಿದೆ.
ಸ್ವಾತಂತ್ರ್ಯ ತಡವಾಗಿ ಬಂದಿದ್ದು ಒಂದು ಸಮಸ್ಯೆ; ಅದಕ್ಕೂ ಮಿಕ್ಕಿ ಬಂದೊಟ್ಟನೇ ಲಂಚ, ಭ್ರಷ್ಟಾಚಾರ, ಕೋಮು ವಿಧಾನ, ರಾಜಕೀಯ ದ್ವೇಷ. ಒಬ್ಬನು ಇನ್ನೊಬ್ಬನನ್ನು ಕೆಳಗೆ ಎಳೆಯುವ ಸ್ಪರ್ಧೆ ಪ್ರಾರಂಭವಾಯಿತು.”
“ಇದನ್ನೆಲ್ಲಾ ನೋಡಿ ಇಂದಿನ ಯುವ ಜನತೆಗೆ ಅರಿವಾಗಬೇಕಾದ ಮಹತ್ವದ ವಿಚಾರವೆಂದರೆ – ಊಹೆಗೆಲ್ಲ ಅರ್ಥವಿಲ್ಲ. ದೇಶವನ್ನು ಗೌರವಿಸುವುದು, ದೇಶಕ್ಕೆ ಕೊಡುಗೆ ನೀಡುವುದೇ ನಿಜವಾದ ದೇಶಭಕ್ತಿ. ನಮ್ಮ ದೇಶವೇ ನಮಗೆ ಕೊಟ್ಟಿರುವ ಅವಕಾಶಗಳನ್ನು ಉಳಿಸಿ, ಮುಂದಿನ ತಲೆಮಾರಿಗೆ ಒಪ್ಪಿಸಬೇಕಾಗಿದೆ” ಎಂದರು
ವರದಿ ನೀಡಿದವರು ಜೇಟ್ಟೆಪ್ಪ ಎಸ್. ಪೂಜಾರಿ.